ಆನೇಕಲ್: ಚೌಡೇಶ್ವರಿದೇವಿ ವಿಜಯದಶಮಿ ಉತ್ಸವಕ್ಕೆ ಪಟ್ಟಣ ನವವಧುವಿನಂತೆ ಸಿಂಗಾರಗೊಂಡಿದೆ. ಪಟ್ಟಣದ ಪ್ರಮುಖ ರಸ್ತೆಗಳು ದೀಪಗಳಿಂದ ಅಲಂಕೃತಗೊಂಡಿವೆ.

ಮೈಸೂರು ದಸರೆ ಮಾದರಿಯಲ್ಲಿ ಕಳೆದ 18ವರ್ಷಗಳಿಂದ ನಡೆಯುತ್ತಿರುವ ಆನೇಕಲ್ ದಸರಾ ಮಹೋತ್ಸವ ವರ್ಷದಿಂದ ವರ್ಷಕ್ಕೆ ಕಳೆಗಟ್ಟುತ್ತಿದ್ದು ಸುತ್ತಲಿನ ಗ್ರಾಮಗಳು ಹಾಗೂ ನೆರೆಯ ತಾಲ್ಲೂಕುಗಳಿಂದ ಸಾವಿರಾರು ಮಂದಿ ಭಕ್ತರು ಬರುತ್ತಿರುವುದು ವಿಶೇಷವಾಗಿದೆ.

ಪಟ್ಟಣದ ಹೃದಯಭಾಗದ ತಿಲಕ್ ವೃತ್ತದಲ್ಲಿರುವ ಚೌಡೇಶ್ವರಿ ದೇವಾಲಯ ಪ್ರಮುಖ ಆಕರ್ಷಣೆ ಕೇಂದ್ರ. ಶರನ್ನವರಾತ್ರಿ ಪ್ರಯುಕ್ತ ಸೆಪ್ಟೆಂಬರ್ 29ರಿಂದಲೇ ದೇವಾಲಯದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ದೇವಿಗೆ ವಿಜಯಲಕ್ಷ್ಮಿ, ಧೈರ್ಯಲಕ್ಷ್ಮಿ, ಧನಲಕ್ಷ್ಮಿ, ಧಾನ್ಯಲಕ್ಷ್ಮಿ, ಗಜಲಕ್ಷ್ಮಿ, ಐಶ್ವರ್ಯಲಕ್ಷ್ಮಿ, ಸರಸ್ವತಿ ಅಲಂಕಾರ ಮಾಡಲಾಗಿದ್ದು ಪ್ರತಿದಿನ ಭಕ್ತರು ದೇವರ ಅಲಂಕಾರ ಕಣ್ತುಂಬಿಕೊಳ್ಳುತ್ತಿದ್ದಾರೆ. ಭಾನುವಾರ (ಅ.6) ದುರ್ಗಾದೇವಿ ಅಲಂಕಾರ, ಸೋಮವಾರ (ಅ.7) ವರಲಕ್ಷ್ಮಿ ದೇವಿ ಅಲಂಕಾರ ಹಾಗೂ ಮಂಗಳವಾರ(ಅ.8) ದೇವಿಗೆ ಸರ್ವಾಲಂಕಾರ ನಡೆಯಲಿದೆ.

ಪ್ರತಿದಿನ ಭಕ್ತಿಗೀತೆ, ಹರಿಕಥೆ, ಯಕ್ಷಗಾನ, ಸುಗಮ ಸಂಗೀತ, ದೇಶಭಕ್ತಿ ಹಾಗೂ ಭಾವಗೀತೆಗಳ ಗಾಯನ, ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ. ಅ.6ರಂದು ಕಾನ್ಫಿಡೆಂಟ್ ಸ್ಟಾರ್ ಸಿಂಗರ್ ಮತ್ತು ತಂಡದರಿಂದ ಭಾವಗೀತೆ ಮತ್ತು ಭಕ್ತಿಗೀತೆಗಳು, 7ರಂದು ತೆಲುಗು ಈಟಿವಿ ಜಗ ಡ್ಯಾನ್ಸ್ ತಂಡದವರಿಂದ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮ, 8ರಂದು ವಾಸು ಮತ್ತು ತಂಡದವರಿಂದ ಭಕ್ತಿಗೀತೆಗಳ ಗಾಯನ ಆಯೋಜಿಸಲಾಗಿದೆ.

ಮಂಗಳವಾರ ನಡೆಯುವ ಜಂಬೂ ಸವಾರಿಗಾಗಿ ಜನರು ಕಾತುರರಾಗಿದ್ದಾರೆ. ಆನೆ ಮೇಲೆ ತಾಯಿ ಚೌಡೇಶ್ವರಿ ದೇವಿಯನ್ನು ಅಂಬಾರಿಯಲ್ಲಿ ಕುಳ್ಳಿರಿಸಿ ಪಟ್ಟಣದ ರಾಜಬೀದಿಗಳಲ್ಲಿ ವೈಭವದ ಮೆರವಣಿಗೆ ಮಾಡಲಾಗುವುದು. ಈ ಮೆರವಣಿಗೆಯಲ್ಲಿ ವೀರಗಾಸೆ, ಡೊಳ್ಳುಕುಣಿತ, ಪೂಜಾಕುಣಿತ, ಗಾರುಡಿಗೊಂಬೆ ಸೇರಿದಂತೆ 30ಕ್ಕೂ ಹೆಚ್ಚು ನಾಡಿನ ಖ್ಯಾತ ಜಾನಪದ ಕಲಾತಂಡಗಳು ಪಾಲ್ಗೊಂಡು ಮೆರುಗು ನೀಡಲಿವೆ.

ವಿಜಯದಶಮಿಯಂದು ಬೆಳಿಗ್ಗೆ 9ರಿಂದ ರಾತ್ರಿ 9ರವರೆಗೂ ಪಟ್ಟಣದ ಯೋಗಿ ನಾರಾಯಣ ಕಲ್ಯಾಣ ಮಂಟಪದಲ್ಲಿ ನಿರಂತರ ಅನ್ನದಾಸೋಹದ ವ್ಯವಸ್ಥೆ ಮಾಡಲಾಗಿದೆ. ರಾತ್ರಿ ಆಕರ್ಷಕ ಬಾಣ ಬಿರುಸು ಪ್ರದರ್ಶನ, ಪಂಜಿನ ಕವಾಯತು ನಡೆಯಲಿದೆ. ದಾನಿಗಳು ಹಾಗೂ ಸೇವಾಕರ್ತರ ನೆರವು, ಚೌಡೇಶ್ವರಿ ದೇಗುಲ ಆಡಳಿತ ಮಂಡಳಿ ಹಾಗೂ ತೊಗಟವೀರರ ಕ್ಷೇಮಾಭಿವೃದ್ಧಿ ಯುವಕರ ಸಂಘದ ಸಹಯೋಗದಲ್ಲಿ ನಡೆಯುತ್ತಿರುವ ಈ ಉತ್ಸವ ವರ್ಷದಿಂದ ವರ್ಷಕ್ಕೆ ವಿಶೇಷ ಕಾರ್ಯಕ್ರಮಗಳ ಮೂಲಕ ಗಮನ ಸೆಳೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.