ಹಾರೋಹಳ್ಳಿ: ತಾಲೂಕಿನ ದೊಡ್ಡಮುದವಾಡಿ-ಗೂಗ್ಗರೇದೊಡ್ಡಿ ರಸ್ತೆಯ ಭಕ್ಷಿಕೆರೆ ಬಳಿಯ ಕಿರಿದಾದ ರಸ್ತೆಯಲ್ಲಿ ಗುರುವಾರ ಆಟೊಗೆ ದಾರಿ ನೀಡಲು ಹೋಗಿ ಬಸ್ಸೊಂದು ರಸ್ತೆ ಪಕ್ಕದ ಕೆರೆಗೆ ಉರುಳಿ ಬೀಳುತ್ತಿತ್ತು. ತಕ್ಷಣ ಚಾಲಕ ಬಸ್ ನಿಲ್ಲಿಸಿದ ಕಾರಣ ಭಾರಿ ಅವಘಡವೊಂದು ತಪ್ಪಿದೆ.

ಈ ಬಸ್ನಲ್ಲಿ ಪ್ರಯಾಣಿಸುತ್ತಿದ್ದ 40 ರಿಂದ 45 ಮಹಿಳಾ ಕಾರ್ಮಿಕರು ಸುರಕ್ಷಿತವಾಗಿದ್ದಾರೆ.

ದೊಡ್ಡ ಮುದವಾಡಿ ಮತ್ತು ಗೂಗ್ಗರೇದೊಡ್ಡಿ ನಡುವಿನ ರಸ್ತೆ ಬಹಳ ಕಿರಿದಾಗಿದೆ. ಎರಡು ವರ್ಷದ ಹಿಂದೆ ಜೋರಾಗಿ ಮಳೆ ಬಂದ ಪರಿಣಾಮ ಕೆರೆ ತುಂಬಿ ಏರಿಯೂ ಸಹ ಒಡೆದಿತ್ತು. ಇದೀಗ ಬಸ್ ಇನ್ನೇನು ಕೆರೆಗೆ ಉರುಳಿ ಬಿದ್ದಿತು ಎನ್ನುವಷ್ಟರಲ್ಲಿ ಚಾಲಕನ ಸಮಯಪ್ರಜ್ಞೆಯಿಂದ ದುರಂತವೊಂದು ತಪ್ಪಿದೆ ಎಂದು ಗೂಗ್ಗರೇದೊಡ್ಡಿಯ ಪರಮೇಶ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.