ವಿಜಯಪುರ: ಭಕ್ತ ಕನಕದಾಸರ ಪ್ರತಿಯೊಂದು ಕೀರ್ತನೆ ಅನುಭಾವದಿಂದ ಕೂಡಿದೆ. ಹೊರನೋಟದಷ್ಟು ಸರಳವಾಗಿರದೆ ಬಹಳಷ್ಟು ಅರ್ಥಗಳಿಂದ ಕೂಡಿದೆ ಎಂದು ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಹಡಪದ್ ಹೇಳಿದರು.

ಪಟ್ಟಣದ 4ನೇ ವಾರ್ಡ್‌ನ ಮುಖಂಡ ಕೆ.ಮುನಿರಾಜು ಅವರ ಮನೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನಿಂದ ಆಯೋಜಿಸಿದ್ದ ಕನಕದಾಸರ ಜಯಂತಿಯಲ್ಲಿ ಅವರು ಮಾತನಾಡಿದರು.

ಮುಖಂಡ ಕೆ.ಮುನಿರಾಜು ಮಾತನಾಡಿ, ಕನಕದಾಸರ ಕೀರ್ತನೆ ಪ್ರತಿದಿನ ಆಲಿಸಿದರೆ ಜ್ಞಾನಾರ್ಜನೆ ಹೆಚ್ಚಾಗುತ್ತದೆ. ಜೀವನದ ಪಾರಮಾರ್ಥ ತಿಳಿದುಕೊಳ್ಳಲು ಸಹಕಾರಿಯಾಗಲಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಚಿ.ಮಾ. ಸುಧಾಕರ್ ಮಾತನಾಡಿ, ಶರಣ ಸಾಹಿತ್ಯದ ನಂತರ ಸಾರ್ವಜನಿಕರೆಲ್ಲರಿಗೂ ಅರ್ಥವಾಗುವಂತಹ ಸರಳ ಕನ್ನಡದಲ್ಲಿ ಪುರಂದರದಾಸರು, ಕನಕದಾಸರು ಕೀರ್ತನೆ ರಚಿಸಿದ್ದಾರೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಸಾಂಸ್ಕೃತಿಕ ತಂಡದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ವಿ. ನಾಯ್ಡು ಹಾಗೂ ಘಂಟಸಾಲ ಖ್ಯಾತಿಯ ಮಹಾತ್ಮಾಂಜನೇಯ ಅವರು ಕನಕದಾಸರ ಕೀರ್ತನೆಗಳನ್ನು ಹಾಡಿದರು. ಶಿಕ್ಷಕರಾದ ಎಂ.ಶಿವಕುಮಾರ್, ಚಿದಾನಂದ ಬಿರಾದಾರ್, ಅಬ್ದುಲ್ ಸತ್ತಾರ್, ಎ.ಬಿ. ಪರಮೇಶ್, ಕೆ.ಎಚ್. ಚಂದ್ರಶೇಖರ್, ಟೌನ್ ಕಸಾಪ ಅಧ್ಯಕ್ಷ ಜೆ.ಆರ್.ಮುನಿವೀರಣ್ಣ, ಕಾರ್ಯದರ್ಶಿ ಎನ್.ಸಿ. ಮುನಿವೆಂಕಟರಮಣ, ನಾಗರಾಜು, ಜಿಲ್ಲಾ ಉಪಾಧ್ಯಕ್ಷ ವಿ.ಎನ್. ಸೂರ್ಯಪ್ರಕಾಶ್, ಮುಖಂಡ ಮುನಿರಾಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.