ಹೊಸಕೋಟೆ: ಶಾಸನಗಳು ಗತಕಾಲದ ಚರಿತ್ರೆ ಬಗ್ಗೆ ನಿಖರವಾದ ಮಾಹಿತಿಯನ್ನು ತಿಳಿಸುತ್ತವೆ. ತಾಲ್ಲೂಕಿನಲ್ಲಿ ಈವರೆಗೆ 210ಕ್ಕೂ ಹೆಚ್ಚು ಶಾಸನಗಳು ಸಿಕ್ಕಿರುವ ಕುರಿತು ದಾಖಲೆಗಳಲ್ಲಿ ನಮೂದಾಗಿವೆ. ಅದರಲ್ಲಿ ಸುಮಾರು 50ಕ್ಕೂ ಹೆಚ್ಚು ಶಾಸನಗಳು ಕಣ್ಮರೆಯಾಗಿವೆ.

ಮುಖ್ಯವಾಗಿ ಹೊಸಕೋಟೆ ಪ್ರಾಂತ್ಯ ಆಳ್ವಿಕೆ ಮಾಡಿದ ಬಹುತೇಕ ರಾಜ ಮನೆತನಗಳ ಕುರಿತು ಬಹುಮುಖ್ಯವಾದ ಮಾಹಿತಿ ಒದಗಿಸುವ ಶಾಸನಗಳ ರಕ್ಷಣೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮುಂದಾಗಬೇಕಿದೆ. ಇದಕ್ಕೆ ಸ್ಥಳೀಯ ಸರ್ಕಾರ ಮತ್ತು ಅಧಿಕಾರಿಗಳು ಕೈಜೋಡಿಸಬೇಕು ಎಂದು ಸಾರ್ವಜನಿಕರ ಒತ್ತಾಯವಾಗಿದೆ.

ಶಿಲಾಶಾಸನಗಳ ರಕ್ಷಣೆಯಲ್ಲಿ ನಿರ್ಲಕ್ಷ್ಯ: ಶಾಸನಗಳಲ್ಲಿ ಪ್ರಮುಖವಾಗಿ ಲೋಹ ಶಾಸನಗಳು ಮತ್ತು ಶಿಲಾಶಾಸನಗಳು ಮುಖ್ಯವಾದವುಗಳಾದರೂ, ಅದರಲ್ಲಿ ಲೋಹ ಶಾಸನಗಳ ಪೈಕಿ ಬಹುತೇಕ ಸಂರಕ್ಷಿಸಲ್ಪಟ್ಟಿವೆ. ಆದರೆ ಶಿಲಾ ಶಾಸನಗಳು ಸಂಪೂರ್ಣ ನಿರ್ಲಕ್ಷ್ಯಕ್ಕೀಡಾಗಿದ್ದು, ನೂರಾರು ಶಾಸನಗಳು ಇಂದು ಹೇಳ ಹೆಸರಿಲ್ಲದಂತೆ ನಾಶವಾಗಿವೆ. ಅವುಗಳಲ್ಲಿ ಕೆಲವನ್ನು ಗ್ರಾಮಸ್ಥರು ತಮ್ಮ ವಿವಿಧ ಕಾಮಗಾರಿಗಳಿಗೆ ಕಲ್ಲುಗಳಾಗಿ ಬಳಸಿಕೊಂಡಿದ್ದರೆ, ಕೆಲವು ಅರಿವಿನ ಕೊರತೆಯಿಂದ ವಿನಾಶದ ಅಂಚಿಗೆ ತಳ್ಳಲ್ಪಡುತ್ತಿವೆ.

ತಾಲ್ಲೂಕನ್ನು ಆಳ್ವಿಕೆ ಮಾಡಿದ ರಾಜ ಮನೆತನಗಳು: ಹೊಸಕೋಟೆಗೆ ಹಲವು ಶತಮಾನಗಳ ಇತಿಹಾಸವಿದೆ. ಈ ಪ್ರಾಂತ್ಯವನ್ನು ಹಲವು ರಾಜ ಮನೆತನಗಳು ಆಳ್ವಿಕೆ ಮಾಡಿವೆ. ಅದರಲ್ಲಿ ಪ್ರಮುಖವಾಗಿ ನೊಳಂಬರು, ಗಂಗರು, ಹೊಯ್ಸಳರು, ಚೋಳರು, ವಿಜಯನಗರದ ಅರಸರು, ಸುಗುಟೂರು ಪಾಳೆಗಾರರೆಂದು ಗುರುತಿಸಬಹುದು. ಈ ಎಲ್ಲ ರಾಜರು ಆಳ್ವಿಕೆ ಮಾಡಿದ ಸಂದರ್ಭದಲ್ಲಿ ಹೊಸಕೋಟೆ ಪ್ರಾಂತ್ಯದ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರ್ಥಿಕ ಸ್ಥಿತಿಗತಿಗಳನ್ನು ಪರಿಚಯಿಸುವ ಹಲವಾರು ಶಾಸನಗಳು ಈ ಪ್ರಾಂತ್ಯದಲ್ಲಿ ಸಿಕ್ಕಿವೆ.

ತಾಲ್ಲೂಕಿನಲ್ಲಿ ಪ್ರಮುಖವಾಗಿ ದಾನ ಶಾಸನಗಳು, ಕೆರೆ ಕಟ್ಟಿಸಿದ ಶಾಸನ, ಕೆರೆ ಜೀರ್ಣೋದ್ಧಾರ ಶಾಸನ, ದೇವಾಲಯ ಜೀರ್ಣೋದ್ಧಾರ ಶಾಸನ, ತುರುಗೋಳ್ ಶಾಸನ, ವೀರಗಲ್ಲು ಶಾಸನ, ಮಾಸ್ತಿಕಲ್ಲು ಶಾಸನ, ಊರಳಿವು ಶಾಸನ, ಹಂದಿ ಬೇಟೆ ವೀರಗಲ್ಲು ಶಾಸನ, ಹುಲಿ ಬೇಟೆ ವೀರಗಲ್ಲು ಶಾಸನ, ಹೆಣ್ಣಿನ ಸಿಡಿತಲೆ ಕಲ್ಲು ಶಾಸನ ಸೇರಿದಂತೆ ಹಲವು ಬಗೆಯ ಶಾಸನಗಳು ಸಿಕ್ಕಿವೆ. ಆದರೆ ಅಗೆದಷ್ಟು ಚಿನ್ನ ಎಂಬಂತೆ ಸಂಶೋಧಕರಿಗೆ ಇಂದಿಗೂ ಹೊಸ ಹೊಸ ಶಾಸನಗಳು ಸಿಗುತ್ತಲೇ ಇವೆ.

ಕಳೆದ ಮೂರ್ನಾಲ್ಕು ವರ್ಷಗಳಲ್ಲಿ 15–20 ಹೊಸ ಶಾಸನಗಳು ಪತ್ತೆಯಾಗಿವೆ. ಇತಿಹಾಸ ಮತ್ತು ಸಾಹಿತ್ಯ ಕ್ಷೇತ್ರದ ಸಂಶೋಧಕರು ನಡೆಸಿದ ಸಂಶೋಧನೆಯಲ್ಲಿ ಹಲವು ಶಾಸನಗಳು ಪತ್ತೆ ಆಗಿವೆ. ದಾಖಲೆಗಳಲ್ಲಿ ಇಲ್ಲದ, ಸಂಶೋಧಕರ ಕಣ್ಣಿಗೆ ಬೀಳದ ಸುಮಾರು 15–20 ಶಾಸನಗಳನ್ನು ಪತ್ತೆ ಹಚ್ಚಿದ್ದಾರೆ. ತಾಲ್ಲೂಕಿನಲ್ಲಿ ಇನ್ನೂ ಹಲವು ಶಾಸನಗಳನ್ನು ಪತ್ತೆ ಹಚ್ಚಲು ಹಿರಿಯರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸುತ್ತಿದ್ದೇವೆ. ಹಲವು ಹೊಸ ಶಾಸನಗಳು ಸಿಗಲಿವೆ ಎಂದು ಸಂಶೋಧಕ ವಿಜಯಶಂಕರ ತಿಳಿಸುತ್ತಾರೆ.

ಬಿದ್ದಿದ್ದ ಶಾಸನಗಳು ಕಣ್ಮರೆ: ತಾಲ್ಲೂಕಿನ ನಂದಗುಡಿ ಹೋಬಳಿಯ ಬನಹಳ್ಳಿ ಗ್ರಾಮದಲ್ಲಿ ನೊಳಂಬರ ಕಾಲಕ್ಕೆ ಸಂಬಂಧಿಸಿದ ಹಲವು ವೀರಗಲ್ಲು ಶಾಸನಗಳು ಕೆರೆಯಲ್ಲಿ ಮುರಿದು ಬಿದ್ದ ಸ್ಥಿತಿಯಲ್ಲಿ ಕಂಡು ಬಂದಿದ್ದವು. ಅವುಗಳು ಕಾಲ ಕಳೆದಂತೆ ಮಾಯವಾಗಿವೆ. ಅವುಗಳು ಯಾವುದೊ ಕಾಮಗಾರಿಗಳಿಗೆ ಬಳಕೆಯಾಗಿವೆ ಎಂಬ ಆರೋಪ ವ್ಯಕ್ತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.