ದೇವನಹಳ್ಳಿ: ಭಜನೆ ಮಂದಿರಗಳು ಭಕ್ತಿಯ ಸಂಕೇತವಾಗಿದೆ. ಪ್ರತಿಯೊಬ್ಬರೂ ಸಂಜೆ ವೇಳೆ ಭಜನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದರ ಮೂಲಕ ಆಧ್ಯಾತ್ಮಿಕ ಚಿಂತನೆಗಳಲ್ಲಿ ತೊಡಗಲು ಅನುಕೂಲವಾಗುತ್ತದೆ ಎಂದು ಸಿದ್ಧಗಂಗಾ ಮಠದ ಪೀಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಬಜಾರ್ ರಸ್ತೆಯಲ್ಲಿರುವ ವಿನಾಯಕಸ್ವಾಮಿ ದೊಡ್ಡಭಜನೆ ಮಂದಿರದ ಆವರಣದಲ್ಲಿ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಹಿಂದೆ ನಮ್ಮ ಹಿರಿಯರು ಭಜನೆ ಮಂದಿರಗಳನ್ನು ನಿರ್ಮಿಸಿ ಸಂಜೆ ವೇಳೆ ಭಕ್ತಿಗೀತೆಗಳನ್ನು ಹಾಡುವುದರ ಮೂಲಕ ಭಜನೆ ಮಾಡಿ ಆಧ್ಯಾತ್ಮಿಕತೆಗೆ ಒಲವು ತೋರುತ್ತಿದ್ದರು ಎಂದರು.

ಆಧುನಿಕತೆ ಬೆಳೆದಂತೆ ಭಜನೆ ಮಂದಿರಗಳು ನಶಿಸಿ ಹೋಗುತ್ತಿವೆ. ಆದರೆ, ಮೈಸೂರು ಭಾಗದಲ್ಲಿ ಭಜನೆ ಮಂದಿರಗಳನ್ನು ಕಾಣಬಹುದು. ಯುವಕರು ಹಿರಿಯರು ಹಾಕಿಕೊಟ್ಟ ದಾರಿಯಲ್ಲಿ ಸಾಗಿ, ಆಧ್ಮಾತ್ಮಿಕತೆ ಉಳಿಸಿ ಬೆಳೆಸಲು ಸಹಕಾರಿಯಾಗಬೇಕು ಎಂದರು.

ವಿನಾಯಕ ಭಕ್ತಿಸ್ವಾಮಿ ಭಕ್ತಮಂಡಳಿ ದೊಡ್ಡ ಭಜನೆ ಮಂದಿರದ ಆಧ್ಯಕ್ಷ ಸಿ.ಚಂದ್ರಶೇಖರ್ ಮಾತನಾಡಿ, ಭಜನೆ ಮಂದಿರವನ್ನು ನಮ್ಮ ಹಿರಿಯರು ಸ್ಥಾಪಿಸಿದ್ದು, ಅವರು ಹಾಕಿಕೊಟ್ಟ ಮಾರ್ಗದಲ್ಲಿ ದೇವರ ಕೆಲಸಗಳನ್ನು ಮಾಡಿಕೊಂಡು ಸಾಗುತ್ತಿದ್ದೇವೆ ಎಂದರು.

ಈ ವೇಳೆ ಮುಖಂಡರಾದ ತುಪ್ಪದ ವೀರಭದ್ರಪ್ಪ, ಚಿಕ್ಕವೀರ ಭದ್ರಪ್ಪ, ಪುರಸಭಾ ಸದಸ್ಯ ರುದ್ರೇಶ್, ರುದ್ರಪ್ಪ, ಬಿ.ವಿ.ನಾಗರಾಜ್, ವೈ.ಸಿ.ಪುಟ್ಟರುದ್ರ, ವಿ.ವಿಜಯ ಕುಮಾರ್, ವೈ,ಪಿ.ಪ್ರವೀಣ್ ಕುಮಾರ್, ಎಸ್.ವಿ.ಮಂಜುನಾಥ್, ಅರ್ಚಕ ಪದ್ಮನಾಭಯ್ಯ ಸೇರಿದಂತೆ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.