ಬೆಳಗಾವಿ: ಕೃಷಿ ಇಲಾಖೆಯಿಂದ ಅನುಷ್ಠಾನಗೊಳಸುತ್ತಿರುವ ರಾಷ್ಟ್ರೀಯ ಸುಸ್ಥಿರ ಕೃಷಿ ಅಭಿಯಾನ-ಮಳೆಯಾಶ್ರಿತ ಪ್ರದೇಶ ಅಭಿವೃದ್ಧಿ ಯೋಜನೆಯಡಿ ಜಿಲ್ಲೆಯ ಸಹಾಯಧನ ಪಡೆಯಲು ಆಯ್ದ ಗ್ರಾಮಗಳ ರೈತರಿಂದ ಅರ್ಜಿ ಅಹ್ವಾನಿಸಲಾಗಿದೆ.

ತಾಲ್ಲೂಕಿನ ಚಂದಗಡ, ಖಾನಾಪುರ ತಾಲ್ಲೂಕಿನ ಸೋರಾಪೂರ, ಭಾಗ್ಯನಗರ, ಚಿಕ್ಕೋಡಿಯ ದುಳಗನವಾಡಿ, ಬೈಲಹೊಂಗಲದ ಅಮಟೂರ, ಅಥಣಿಯ ಕನ್ನಾಳ, ಗೋಕಾಕದ ಕಳ್ಳಿಗುದ್ದಿ, ಹುಕ್ಕೇರಿಯ ಗೋಟೂರ, ರಾಯಬಾಗದ ಜೋಡಟ್ಟಿ, ರಾಮದುರ್ಗದ ಕಲ್ಲೂರ, ಸವದತ್ತಿ ತಾಲ್ಲೂಕಿನ ಹಳಕಟ್ಟಿ ಗ್ರಾಮಗಳಲ್ಲಿ ಒಂದೇ ಭೂ ಪ್ರದೇಶದಲ್ಲಿ ಗುಚ್ಚ ಮಾದರಿಯಲ್ಲಿ ಉಪಚಾರಗಳನ್ನು ಕೈಗೊಳ್ಳಬೇಕಾಗಿದೆ.

ತೋಟಗಾರಿಕೆ ಮಿಶ್ರ ಬೆಳೆಗಳ ಆಧಾರಿತ ಪದ್ಧತಿಗಳನ್ನು ಅಳವಡಿಸಿದಲ್ಲಿ ಪ್ರತಿ ಫಲಾನುಭವಿಗಳ ಕುಟುಂಬಕ್ಕೆ ಗರಿಷ್ಠ 2 ಹೆಕ್ಟೇರ್ ಪ್ರದೇಶದವರೆಗೆ ಸಹಾಯಧನ ನೀಡಲಾಗುವುದು. ಘಟಕ ವೆಚ್ಚವು ಹೆಕ್ಟೇರ್‌ಗೆ ಗರಿಷ್ಠ ₹ 50ಸಾವಿರ ಇದ್ದು, ಇದರಲ್ಲಿ ಘಟಕ ವೆಚ್ಚದ ಶೇ 50 ಅಥವಾ ಹೆಕ್ಟೇರ್‌ಗೆ ಗರಿಷ್ಠ ₹ 25ಸಾವಿರ ಸಹಾಯಧನ ನೀಡಲು ಅವಕಾಶವಿದೆ. ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಅರ್ಜಿಗಳನ್ನು ಪಡೆದು ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.