ಬೆಳಗಾವಿ: ಇದೇ ಪ್ರಥಮ ಬಾರಿಗೆ ವಿವಿಧ ರಾಜಕೀಯ ಪಕ್ಷಗಳು ಕಣಕ್ಕಿಳಿದಿದ್ದರಿಂದ ರಾಜ್ಯದ ಗಮನಸೆಳೆದಿದ್ದ ಇಲ್ಲಿನ ಮಹಾನಗರಪಾಲಿಕೆ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಗಳಿಸಿದೆ. ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿದೆ.

ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮತ್ತು ಶಿವಸೇನೆ ಸಂಪೂರ್ಣ ನೆಲ ಕಚ್ಚಿದೆ. ಇವುಗಳ ಬೆಂಬಲಿತರು 23 ವಾರ್ಡ್ಗಳಲ್ಲಿ ಸ್ಪರ್ಧಿಸಿದ್ದರು. ಅದರಲ್ಲಿ ಎರಡು ಕಡೆಗಳಲ್ಲಷ್ಟೆ ಗೆಲುವು ಸಿಕ್ಲಿದೆ. 7 ವಾರ್ಡ್ಗಳಲ್ಲಿ ಕಣಕ್ಕಿಳಿದಿದ್ದ ಎಐಎಂಐಎಂ ಖಾತೆ ತೆರೆದಿದೆ. 27ರಲ್ಲಿ ಸ್ಪರ್ಧಿಸಿದ್ದ ಆಮ್ ಆದ್ಮಿ ಪಕ್ಷ(ಎಎಪಿ)ದವರಿಗೆ ಗೆಲುವು ದಕ್ಕಿಲ್ಲ.

ಇಲ್ಲಿ ಹಿಂದಿನಿಂದಲೂ ಕನ್ನಡ, ಮರಾಠಿ ಹಾಗೂ ಉರ್ದು ಭಾಷೆಗಳ ಆಧಾರದ ಮೇಲೆ ಚುನಾವಣೆ ನಡೆಯುತ್ತಿತ್ತು. 55 ವಾರ್ಡ್ಗಳಲ್ಲಿ ಕಣಕ್ಕಿಳಿದಿದ್ದ ಬಿಜೆಪಿಯು 35 ಸ್ಥಾನಗಳನ್ನು ಪಡೆಯುವ ಮೂಲಕ ಅಧಿಕಾರದ ಗದ್ದುಗೆಗೆ ಏರಲು ಸಿದ್ಧತೆ ನಡೆಸಿದೆ. ಇದರೊಂದಿಗೆ ನಗರದ ಮತದಾರರು ಭಾಷಾ ರಾಜಕಾರಣವನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದು ಅಭಿವೃದ್ಧಿ ಪರವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮುಖ್ಯವಾಹಿನಿಯಲ್ಲಿ ಸೇರ ಬಯಸಿರುವ ಪ್ರಜ್ಞಾವಂತ ಮರಾಠಿ ಭಾಷಿಕರು ಈ ಚುನಾವಣೆಯ ಮೂಲಕ ನೆರೆಯ ಮಹಾರಾಷ್ಟ್ರ ಸರ್ಕಾರಕ್ಕೂ ಸ್ಪಷ್ಟವಾದ ಸಂದೇಶವನ್ನೂ ರವಾನಿಸಿದ್ದಾರೆ. ಮರಾಠಿ ಭಾಷಿಕರ ಮತವನ್ನು ಸೆಳೆಯುವಲ್ಲಿ ಬಿಜೆಪಿಯವರು ಯಶಸ್ವಿಯಾಗಿದ್ದಾರೆ. ಎಂಇಎಸ್ನವರು ಪ್ರಯೋಗಿಸಿದ್ದ ‘ಎಂ ಪ್ಲಸ್ ಎಂ’ (ಮರಾಠಿ ಮತ್ತು ಮುಸ್ಲಿಂ) ಸೂತ್ರಕ್ಕೆ ಮತದಾರರು ಮನ್ನಣೆ ನೀಡಿಲ್ಲ.

ಬೆಳಗಾವಿ ಮಹಾನಗರಪಾಲಿಕೆ ಪಕ್ಷಗಳ ಬಲಾಬಲ

ಒಟ್ಟು ಸ್ಥಾನ: 58
ಬಿಜೆಪಿ: 35
ಕಾಂಗ್ರೆಸ್:10
ಪಕ್ಷೇತರರು: 12
ಎಐಎಂಐಎಂ:1

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.