ಇಮಾಮ್‌ಹುಸೇನ್ ಗೂಡುನವರ

ಬೆಳಗಾವಿ: ಇಲ್ಲಿನ ವಡಗಾವಿಯ ಸರ್ಕಾರಿ ಪಿಯು ಕಾಲೇಜಿನ ಕಟ್ಟಡದಲ್ಲಿರುವ ಬೆಳಗಾವಿ ಶೈಕ್ಷಣಿಕ ಜಿಲ್ಲೆಯ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರ (ಡಿಡಿಪಿಯು) ಕಚೇರಿಯನ್ನು ನಗರದ ಹೃದಯಭಾಗಕ್ಕೆ ಸ್ಥಳಾಂತರಿಸಬೇಕೆಂಬ ಬಲವಾದ ಒತ್ತಾಯ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಿಂದ ಕೇಳಿಬರುತ್ತಿದೆ.

ಉತ್ತಮ ಕಟ್ಟಡಕ್ಕಾಗಿ ಅಧಿಕಾರಿಗಳೂ ಹುಡುಕಾಟ ನಡೆಸಿದ್ದಾರೆ. ಹಾಗಾಗಿ ಈ ಕಚೇರಿ ಐದನೇ ಬಾರಿ ಸ್ಥಳಾಂತರವಾಗುವ ಪರಿಸ್ಥಿತಿ ಬಂದಿದೆ.

ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 147 ಪಿಯು ಕಾಲೇಜುಗಳಿವೆ. ಆದರೆ, ಇವೆಲ್ಲ ಕಾಲೇಜುಗಳನ್ನು ನಿರ್ವಹಣೆ ಮಾಡುವ ಡಿಡಿಪಿಯು ಕಚೇರಿಗೇ ಸ್ವಂತ ಕಟ್ಟಡವಿಲ್ಲ. ಆರಂಭದಲ್ಲಿ ಚವಾಟ್ ಗಲ್ಲಿಯ ಸರ್ಕಾರಿ ಶಾಲೆ, ಕ್ಲಬ್ ರಸ್ತೆಯಲ್ಲಿ ಕಾರ್ಯನಿರ್ವಹಿಸಿದ್ದ ಕಚೇರಿ, ನಂತರ ಗೊಂಧಳಿ ಗಲ್ಲಿಯ ಬಾಡಿಗೆ ಕಟ್ಟಡದಲ್ಲಿ ಹಲವು ವರ್ಷ ಕಾರ್ಯನಿರ್ವಹಿಸಿತ್ತು.

ಇಕ್ಕಟ್ಟಿನಿಂದ ಕೂಡಿದ್ದ ಆ ಕಟ್ಟಡದಲ್ಲಿ ವಿವಿಧ ಕಡತಗಳನ್ನು ಇರಿಸಲು ಸೂಕ್ತ ವ್ಯವಸ್ಥೆ ಇಲ್ಲದ್ದರಿಂದ 2022ರ ಮಾರ್ಚ್‌ನಲ್ಲಿ ವಡಗಾವಿಯ ಸರ್ಕಾರಿ ಕಾಲೇಜಿಗೆ ಸ್ಥಳಾಂತರಿಸಲಾಗಿತ್ತು. ಅಲ್ಲಿ ಸುಸಜ್ಜಿತ ಕಟ್ಟಡ, ಉತ್ತಮ ಭೌತಿಕ ಸೌಕರ್ಯಗಳೂ ಇವೆ.

ಬೆಳಗಾವಿಯ ಹೃದಯಭಾಗಕ್ಕೆ ಕಚೇರಿ ಸ್ಥಳಾಂತರಿಸಬೇಕೆಂದು ಉಪನ್ಯಾಸಕರು ಮತ್ತು ಪಾಲಕರು ಒತ್ತಾಯಿಸುತ್ತಿದ್ದಾರೆ. ಇದಕ್ಕಾಗಿ ಉತ್ತಮ ಕಟ್ಟಡ ಹುಡುಕಾಡುತ್ತಿದ್ದೇವೆ. ಡಿಡಿಪಿಯು ಕಚೇರಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ನಿವೇಶನ ಮಂಜೂರುಗೊಳಿಸುವಂತೆ ಮಹಾನಗರ ಪಾಲಿಕೆಗೆ ಶೀಘ್ರ ಮನವಿ ಸಲ್ಲಿಸುತ್ತೇವೆ.
ಎಂ.ಎಂ.ಕಾಂಬಳೆ, ಡಿಡಿಪಿಯು ಬೆಳಗಾವಿ

ಆದರೆ, ನಗರದ ಕೇಂದ್ರೀಯ ಬಸ್ ನಿಲ್ದಾಣದಿಂದ ಈ ಕಾಲೇಜು 5 ಕಿ.ಮೀ ದೂರದಲ್ಲಿದೆ. ಅಲ್ಲಿಗೆ ಸಮರ್ಪಕವಾಗಿ ಬಸ್ ಸೌಕರ್ಯವಿಲ್ಲ. ಹಾಗಾಗಿ ವಿವಿಧ ಕೆಲಸಗಳ ನಿಮಿತ್ತ ಕಚೇರಿಗೆ ಬರುವ ಪಿಯು ಕಾಲೇಜುಗಳ ಪ್ರಾಚಾರ್ಯರು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಹಾಗಾಗಿ ನಗರದ ಹೃದಯಭಾಗದ ಕಟ್ಟಡವೊಂಡದಕ್ಕೆ ಅದನ್ನು ಸ್ಥಳಾಂತರಿಸಬೇಕು ಎಂದು ಅವರು ಒತ್ತಾಯಿಸುತ್ತಿದ್ದಾರೆ.

ಸಿಗದ ಸ್ಪಂದನೆ:

ಪದೇಪದೆ ಕಚೇರಿ ಸ್ಥಳಾಂತರಿಸುವುದನ್ನು ತಪ್ಪಿಸಲು ಇದಕ್ಕೊಂದು ಸ್ವಂತ ಕಟ್ಟಡ ನಿರ್ಮಿಸಬೇಕೆಂದು ಪದವಿಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು ಸ್ಥಳೀಯ ಶಾಸಕರಿಗೆ ಮನವಿ ಸಲ್ಲಿಸುತ್ತಲೇ ಇದ್ದಾರೆ. ಆದರೆ, ಈವರೆಗೆ ಸ್ಪಂದನೆ ಸಿಕ್ಕಿಲ್ಲ.

‘ನನ್ನ ಪುತ್ರನ ಪಿಯು ವ್ಯಾಸಂಗ ಪ್ರಮಾಣಪತ್ರ ಪಡೆಯಲು ನಿಪ್ಪಾಣಿಯಿಂದ ಬಂದಿದ್ದೇನೆ. ಆದರೆ, ಬೆಳಗಾವಿ ಬಸ್ ನಿಲ್ದಾಣದಿಂದ ಅಲ್ಲಿಗೆ ಹೋಗಲು ಸೂಕ್ತ ಬಸ್ ಸೌಲಭ್ಯವಿರದ ಕಾರಣ ಪರದಾಡುವಂತಾಯಿತು. ಅದೇ ಆವರಣದಲ್ಲಿ ಮಂಗಳವಾರ ನಡೆಯುತ್ತಿದ್ದ ಇಲಾಖೆ ಪರೀಕ್ಷೆ ಮುಗಿಯುವವರೆಗೆ ಕಾಯುವಂತಾಯಿತು’ ಎಂದು ವಿದ್ಯಾರ್ಥಿ ಪಾಲಕ ಸಚಿನ ಹೊನಶೆಟ್ಟಿ ‘ಪ್ರಜಾವಾಣಿ’ ಎದುರು ಅಳಲು ತೋಡಿಕೊಂಡರು.

ಬೆಳಗಾವಿಯ ಹೃದಯಭಾಗಕ್ಕೆ ಕಚೇರಿ ಸ್ಥಳಾಂತರಿಸಬೇಕೆಂದು ಉಪನ್ಯಾಸಕರು ಮತ್ತು ಪಾಲಕರು ಒತ್ತಾಯಿಸುತ್ತಿದ್ದಾರೆ. ಇದಕ್ಕಾಗಿ ಉತ್ತಮ ಕಟ್ಟಡ ಹುಡುಕಾಡುತ್ತಿದ್ದೇವೆ. ಡಿಡಿಪಿಯು ಕಚೇರಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ನಿವೇಶನ ಮಂಜೂರುಗೊಳಿಸುವಂತೆ ಮಹಾನಗರ ಪಾಲಿಕೆಗೆ ಶೀಘ್ರ ಮನವಿ ಸಲ್ಲಿಸುತ್ತೇವೆ –ಎಂ.ಎಂ.ಕಾಂಬಳೆ ಡಿಡಿಪಿಯು ಬೆಳಗಾವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.