ಬೆಳಗಾವಿ: ಇಲ್ಲಿನ ಅನಗೋಳದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಕಾರ್ಯಕರ್ತರು ನಿರ್ಮಿಸಿದ್ದ ‘ಜೈ ಮಹಾರಾಷ್ಟ್ರ ಚೌಕ್’ ಎಂಬ ಫಲಕವನ್ನು ಗುರುವಾರ ರಾತ್ರಿ ಪೊಲೀಸ್ ಬಿಗಿ ಭದ್ರತೆಯಲ್ಲಿ ತೆರವುಗೊಳಿಸಲಾಯಿತು.

ಈ ಫಲಕ ತೆರವುಗೊಳಿಸಬೇಕು ಎಂದು ಆಗ್ರಹಿಸಿ ಕರುನಾಡು ವಿಜಯಸೇನೆ ಸಂಘಟನೆ ಕಾರ್ಯಕರ್ತರು ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲಿ ಆಯುಕ್ತರ ಕಾರಿಗೆ ಗುರುವಾರ ಮುತ್ತಿಗೆ ಹಾಕಿದರು. ರಾತ್ರಿ 8.30ರವರೆಗೂ ಪಾಲಿಕೆ ಎದುರು ಧರಣಿ ಕುಳಿತರು.

‘ಫಲಕ ತೆರವಿಗಾಗಿ ಹಲವು ಸಲ ಮನವಿ ಸಲ್ಲಿಸಿದರೂ ಪ್ರಯೋಜನ ಆಗಿಲ್ಲ. ಈ ಹಿಂದೆ ತಾಲ್ಲೂಕಿನ ಯಳ್ಳೂರಿನಲ್ಲಿ ಅಳವಡಿಸಲಾಗಿದ್ದ ‘ಮಹಾರಾಷ್ಟ್ರ ರಾಜ್ಯಕ್ಕೆ ಸ್ವಾಗತ’ ಎಂಬ ಫಲಕವನ್ನು ಅಂದಿನ ಅಧಿಕಾರಿಗಳು ಅದನ್ನು ಕಿತ್ತೊಗೆದಿದ್ದರು. ಅನ್ಯ ರಾಜ್ಯದ ಫಲಕ ಇಲ್ಲಿ ಏಕೆ ಅಳವಡಿಸಬೇಕು’ ಎಂದು ಮುಖಂಡ ಸಂಪತಕುಮರ ದೇಸಾಯಿ ಪ್ರಶ್ನಿಸಿದರು.

ಕನ್ನಡ ಹೋರಾಟಗಾರರು ಪಟ್ಟು ಸಡಿಲಿಸದ ಕಾರಣ, ಪಾಲಿಕೆ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಆಗ ಸ್ಥಳಕ್ಕೆ ಬಂದ ಎಂಇಎಸ್‌ನ ಕೆಲ ಸದಸ್ಯರು ಫಲಕ ತೆರವು ಮಾಡದಂತೆ ಬೆದರಿಕೆ ಹಾಕಿದರು. ನಂತರ ಸ್ಥಳದಲ್ಲಿ ಪೊಲೀಸ್ ಭದ್ರತೆ ನಿಯೋಜಿಸಿದ ಅಧಿಕಾರಿಗಳು, ಫಲಕ ತೆರವು ಮಾಡಿದರು.

‘ಮಹಾರಾಷ್ಟ್ರ ಚೌಕ್ ಎಂಬ ಫಲಕ ಇರುವುದು ನನ್ನ ಗಮನಕ್ಕೆ ಬಂದಿದೆ. ಶೀಘ್ರ ತೆರವಿಗೆ ಪಾಲಿಕೆ ಆಯುಕ್ತರಿಗೆ ಸೂಚಿಸಿದ್ದೇನೆ’ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಪ್ರತಿಕ್ರಿಯೆ ನೀಡಿದ್ದರು.

‘ರಾತ್ರಿ 8.30ರ ಸುಮಾರಿಗೆ ಫಲಕ ತೆರವು ಮಾಡಲಾಗಿದೆ. ಸ್ಥಳದಲ್ಲಿ ವಾತಾವರಣ ಶಾಂತವಾಗಿದೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ’ ಎಂದು ಡಿಸಿಪಿ ರೋಹನ್ ಜಗದೀಶ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.