ಬೆಳಗಾವಿ: ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಎಸ್ಡಿಎ ರುದ್ರಣ್ಣ ಯಡವಣ್ಣವರ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಕೋರಿ ಅನಾಮಿಕರು ರಾಷ್ಟ್ರಪತಿ, ಪ್ರಧಾನಿಗೆ ಪತ್ರ ಬರೆದಿದ್ದಾರೆ. ಪ್ರಕರಣ ಮುಚ್ಚಿಹಾಕಲು ಏನೆಲ್ಲ ಪ್ರಯತ್ನ ನಡೆದಿದೆ ಎಂದೂ ಪತ್ರದಲ್ಲಿದೆ.

ನ.18ರಂದು ಖಡೇಬಜಾರ್ ಪೊಲೀಸ್ ಠಾಣೆಗೆ ಮೊದಲ ಪತ್ರ ಬಂದಿತ್ತು. ರುದ್ರಣ್ಣನದು ಆತ್ಮಹತ್ಯೆಯಲ್ಲ ಕೊಲೆ ಎಂಬ ಮಾಹಿತಿ ಅದರಲ್ಲಿ ನೀಡಲಾಗಿತ್ತು.

ನ.5ರಂದು ರುದ್ರಣ್ಣ ಆತ್ಮಹತ್ಯೆಗೆ ಶರಣಾದರು. ತಹಶೀಲ್ದಾರ್ ಬಸವರಾಜ ನಾಗರಾಳ, ಎಫ್ಡಿಎ ಅಶೋಕ ಕಬ್ಬಲಿಗೇರ ಮತ್ತು ಸೋಮು ದೊಡವಾಡಿ ಅವರ ಕಿರುಕುಳವೇ ತನ್ನ ಸಾವಿಗೆ ಕಾರಣ ಎಂಬ ವಾಟ್ಸ್ಆ್ಯಪ್ ಸಂದೇಶ ಕೂಡ ಹರಿಬಿಟ್ಟಿದ್ದರು. ಆರೋಪಿಗಳಿಗೆ ಜಾಮೀನು ಮಂಜೂರಾದ ಮೇಲೆ ಅನಾಮಿಕ ಪತ್ರಗಳು ಹರಿದಾಡುತ್ತಿವೆ.

ಪತ್ರದಲ್ಲೇನಿದೆ?: ‘ತನಿಖೆಯ ದಿಕ್ಕು ತಪ್ಪಿಸಲು ಕಚೇರಿಯ ಸಿಬ್ಬಂದಿ ತಹಶೀಲ್ದಾರ್ ಬೆನ್ನಿಗೆ ನಿಂತಿದ್ದಾರೆ. ಗ್ರಾಮ ಆಡಳಿತಾಧಿಕಾರಿಗಳಾದ ಎಸ್.ಪಿ.ಶಿಂಧೆ, ಕಿರಣ್ ತೋರಗಲ್, ಬಸನಗೌಡ ಪಾಟೀಲ ಹಾಗೂ ಎಸ್ಡಿಎ ಸುರೇಖಾ ನೇರ್ಲಿ ಇವರೆಲ್ಲ ಸೇರಿಕೊಂಡು ತಹಶೀಲ್ದಾರ್ ವಿರುದ್ಧ ಯಾವುದೇ ಹೇಳಿಕೆ ನೀಡದಂತೆ ಸಿಬ್ಬಂದಿಗೆ ಎಚ್ಚರಿಕೆ ನೀಡುತ್ತಿದ್ದಾರೆ. ಘಟನೆ ನಡೆದ ದಿನ ಮೃತನ ಪತ್ನಿ ಗಿರಿಜಾ ಅಂಕಲಗಿ ಅವರು ಪೊಲೀಸರಿಗೆ ದೂರು ನೀಡಲು ಹೋದಾಗ ಸುರೇಖಾ ದಾರಿ ತಪ್ಪಿಸಲು ಯತ್ನಿಸಿದ್ದಾರೆ. ‘ಸತ್ತವನು ಸತ್ತ. ಮುಂದೇ ಏನಾಗಬೇಕು ಎಂಬುದರತ್ತ ಗಮನಹರಿಸು’ ಎಂದು ಗಿರಿಜಾ ಅವರಿಗೆ ಹೇಳಿದ್ದರು’ ಎಂದು ಪತ್ರದಲ್ಲಿ ಬರೆಯಲಾಗಿದೆ.

‘ಈ ಹಿಂದೆ ಇದೇ ತಹಶೀಲ್ದಾರ್ ಕಚೇರಿಯ ಸಿಬ್ಬಂದಿ ಪ್ರದೀಪ ಪಾಟೀಲ ಕೂಡ ಆತ್ಮಹತ್ಯೆ ಮಾಡಿಕೊಂಡರು. ಅದಕ್ಕೂ ಸುರೇಖಾ ನೇರ್ಲಿ ಕಾರಣರಾಗಿದ್ದಾರೆ. ಆ ಪ್ರಕರಣವೂ ಸಮಗ್ರ ತನಿಖೆಯಾಗಬೇಕಿದೆ. ಆ ಸಂದರ್ಭದಲ್ಲಿ ತಹಶೀಲ್ದಾರ್ ಕಾರ್ ಚಾಲಕರಾಗಿದ್ದ ಯಲ್ಲಪ್ಪ ಬಡಸದ ಹಾಗೂ ಎಸ್.ಪಿ.ಶಿಂಧೆ ಮುಂದೆ ನಿಂತು ಪ್ರಕರಣ ಮುಚ್ಚಿಹಾಕಿದ್ದಾರೆ’ ಎಂದೂ ಆರೋಪಿಸಲಾಗಿದೆ.
.ಬೆಳಗಾವಿ | ಎಸ್ಡಿಎ ಆತ್ಮಹತ್ಯೆ: ಎಲ್ಲ ಸಿಬ್ಬಂದಿ ವಿಚಾರಣೆ.ಬೆಳಗಾವಿ: ಎಸ್ಡಿಎ ಆತ್ಮಹತ್ಯೆ; ಆರೋಪಿಗಳಿಗೆ ನಿರೀಕ್ಷಣಾ ಜಾಮೀನು.
‘ನವೆಂಬರ್ 14ರಂದು ಆರೋಪಿಗಳಿಗೆ ಜಾಮೀನು ಮಂಜೂರಾಯಿತು. ಅದೇ ದಿನ ಎಸ್.ಪಿ.ಶಿಂಧೆ ಅವರು ಕಚೇರಿಯಲ್ಲಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ತಮ್ಮ ಆಪ್ತ ವಕೀಲರ ಮುಖಾಂತರ ಜಾಮೀನು ಮಂಜೂರಿಗೂ ಕೆಲಸ ಮಾಡಿದ್ದಾರೆ. ಗ್ರಾಮ ಆಡಳಿತಾಧಿಕಾರಿಗಳ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷರೂ ಆಗಿರುವ ಶಿಂಧೆ, ಸಂಘದ ಮೂಲಕವೇ ಎಲ್ಲರ ಬಾಯಿ ಮುಚ್ಚಿಸುತ್ತಿದ್ದಾರೆ. ವಿರುದ್ಧವಾಗಿ ಮಾತನಾಡಿದವರಿಗೆ ಮಾನಸಿಕ ಹಿಂಸೆ ನೀಡಿದ ಉದಾರಣೆಗಳೂ ಇವೆ’ ಎಂದು ಬರೆಯಲಾಗಿದೆ.

‘ಘಟನೆ ನಡೆದಾಗಿನಿಂದ ಕಿರಣ ತೋರಗಲ್ ಸರಿಯಾಗಿ ಕಚೇರಿಗೆ ಬರುತ್ತಿಲ್ಲ. ಈ ಪ್ರಕರಣಕ್ಕಾಗಿಯೇ ಓಡಾಟ ನಡೆಸಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ತನಿಖೆಗೆ ಒಳಪಡಿಸಿದರೆ ಏನು ಮಾಡುವುದು ಎಂಬ ಯೋಚನೆ ಮಾಡುತ್ತಿದ್ದಾರೆ’ ಎಂದೂ ಪತ್ರದಲ್ಲಿ ಇದೆ.

‘ಬಸನಗೌಡ ಪಾಟೀಲ ತಹಶೀಲ್ದಾರರ ಬಲಗೈ ಬಂಟ ಇದ್ದಂತೆ. ಜಾಮೀನಿಗೆ ಇವರೇ ಹಣ ನೀಡಿದ್ದಾರೆ ಎಂಬ ಮಾತು ಕಚೇರಿಯಲ್ಲಿ ಕೇಳಿಬರುತ್ತಿವೆ. ಅಲ್ಲದೇ, ಬೆಳಗಾವಿ ತಾಲ್ಲೂಕಿನ ಅಷ್ಟೇ ಗ್ರಾಮದ ಜಮೀನೊಂದರ ಮಾಲೀಕ ಮಹೇಶ ಪುಂಡಲೀಕ ಚೌಗುಲೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಅದಕ್ಕೂ ಬಸನಗೌಡ ಪಾಟೀಲ ಹಾಗೂ ಶ್ರೀಕಾಂತ ಹೈಗರ ಕಾರಣ ಎಂದು ದೂರು ದಾಖಲಾಗಿತ್ತು. ಆದರೆ, ಸರಿಯಾಗಿ ವಿಚಾರಣೆ ನಡೆಸಲಿಲ್ಲ. ಈ ಪ್ರಕರಣದ ಬಗ್ಗೆಯೂ ತನಿಖೆಯಾಗಬೇಕಿದೆ. ರಾಜಕೀಯ ಒತ್ತಡ ಇರುವುದರಿಂದ ಈ ಪ್ರಕರಣಗಳನ್ನು ಸಿಬಿಐಗೆ ಒಪ್ಪಿಸಬೇಕು. ನೊಂದ ಕುಟುಂಬದವರಿಗೆ ನ್ಯಾಯ ಕೊಡಿಸಬೇಕು’ ಎಂದೂ ಮನವಿ ಮಾಡಲಾಗಿದೆ.

ಮೂರು ಪುಟಗಳಷ್ಟು ಪತ್ರವನ್ನು ಟೈಪಿಸಿ ಪ್ರಿಂಟ್ ತೆಗೆದು ರವಾನಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ರಾಜ್ಯಪಾಲ ಥಾವರಚಂದ್ ಗೆಹಲೋತ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹಸಚಿವ ಡಾ.ಜಿ.ಪರಮೇಶ್ವರ, ಕಂದಾಯ ಸಚಿವ ಕೃಷ್ಣ ಬೈರೇಗೌಡ, ವಿಪಕ್ಷ ನಾಯಕ ಆರ್.ಅಶೋಕ, ಜಿಲ್ಲಾಧಿಕಾರಿ, ನಗರ ಪೊಲೀಸ್ ಆಯುಕ್ತ, ಖಡೇಬಜಾರ್ ಸಿಪಿಐ ಹಾಗೂ ಕೆಲವು ಮಾದ್ಯಮ ಕಚೇರಿಗಳಿಗೂ ಪತ್ರದ ಪ್ರತಿಗಳನ್ನು ರವಾನಿಸಿದ್ದಾಗಿ ಬರೆದುಕೊಂಡಿದ್ದಾರೆ.

ತಹಶೀಲ್ದಾರ್ ಕಚೇರಿಯ ದೈನಂದಿನ ಪ್ರತಿ ವಿಷಯಗಳೂ ಪತ್ರ ಬರೆದವರಿಗೆ ನಿಖರವಾಗಿ ತಿಳಿದಿವೆ ಎಂಬುದು ಗಮನಾರ್ಹ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.