ಬೆಂಗಳೂರು: ಆತಿಥೇಯ ಕರ್ನಾಟಕದ ಆಕಾಶ್ ಅಶೋಕಕುಮಾರ್ ಅವರು ಸೋಮವಾರ ಇಲ್ಲಿ ಆರಂಭವಾದ ಎಆರ್ಸಿ 33ನೇ ರಾಷ್ಟ್ರೀಯ ಟೆನ್ಪಿನ್ ಬೌಲಿಂಗ್ ಚಾಂಪಿಯನ್ಷಿಪ್ನಲ್ಲಿ ಅಗ್ರಸ್ಥಾನಕ್ಕೇರಿದರು.

ದಿನದ ಆರಂಭದಿಂದಲೇ ಉತ್ತಮವಾಗಿ ಆಡಿದ ಆಕಾಶ್ ಅವರು ಮೊದಲ ಹಾಗೂ ಎರಡನೇ ಗೇಮ್ಗಳಲ್ಲಿ ಕ್ರಮವಾಗಿ 189 ಮತ್ತು 212 ಅಂಕಗಳನ್ನು ಕಲೆಹಾಕಿದರು. ನಂತರದ ನಾಲ್ಕು ಗೇಮ್ಗಳಲ್ಲಿ ತಮ್ಮ ಲಯವನ್ನು ಮತ್ತಷ್ಟು ಉತ್ತಮಪಡಿಸಿಕೊಂಡ ಅವರು ಕ್ರಮವಾಗಿ 221, 229, 222 ಮತ್ತು 229 ಅಂಕಗಳನ್ನು ಗಳಿಸಿದರು. ಒಟ್ಟು ಆರು ಗೇಮ್ಗಳಿಂದ 1296 ಪಿನ್ಸ್ ಗಳಿಸಿದರು. 216ರ ಸರಾಸರಿಯನ್ನೂ ಸಾಧಿಸಿದರು. ತಮಿಳುನಾಡಿನ ಶಮೀರ್ 1229 ಪಿನ್ಗಳೊಂದಿಗೆ ಎರಡನೇ ಸ್ಥಾನಕ್ಕೇರಿದ್ದಾರೆ.

ಸ್ಥಾನಗಳು: ಆಕಾಶ್ ಅಶೋಕಕುಮಾರ್ (ಕರ್ನಾಟಕ; 1296 ಪಿನ್ಸ್)–1, ಶಬೀರ್ ಧನಕೋಟ್ (ತಮಿಳುನಾಡು; 1229)–2, ಶುಜತ್ ಅಲಿ ಖಾನ್ (ಮಹಾರಾಷ್ಟ್ರ; 1177)–3, ಅಭಿಷೇಕ್ ಧುದಾಸಿಯಾ (ತಮಿಳುನಾಡು; 1174)–4, ಎಸ್.ಎ. ಹಮೀದ್ (ದೆಹಲಿ; 1174.5)–5

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.