ಬೆಳಗಾವಿ: ಟೆರಿಟೋರಿಯಲ್ ಆರ್ಮಿಯಲ್ಲಿನ ಸೈನಿಕರ ಹುದ್ದೆಗಳ ನೇಮಕಾತಿ ರ್ಯಾಲಿಗೆ ಸಾವಿರಾರು ಸಂಖ್ಯೆಯಲ್ಲಿ ಯುವಕರು ಬಂದ ಕಾರಣ, ಇಲ್ಲಿನ ಸಿಪಿಎಡ್ ಮೈದಾನ ಮುಂಭಾಗದ ರಸ್ತೆಯಲ್ಲಿ ಭಾನುವಾರ ನೂಕುನುಗ್ಗಲು ಉಂಟಾಗಿತ್ತು.

16 ಜಿಲ್ಲೆಗಳ ಯುವಕರಿಗಾಗಿ ಈ ರ್ಯಾಲಿ ಸಂಘಟಿಸಲಾಗಿತ್ತು. ಶನಿವಾರ ಮಧ್ಯರಾತ್ರಿಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಬಂದ ಯುವಕರು, ಸಿಪಿಎಡ್ ಮೈದಾನದ ಮುಂಭಾಗದಲ್ಲಿ ರಸ್ತೆಯಲ್ಲಿ ಸೇರಿದರು. ಏಕಾಏಕಿಯಾಗಿ ಹೆಚ್ಚಿನ ಯುವಕರು ಬಂದಿದ್ದರಿಂದ ಪರಸ್ಪರರ ಮಧ್ಯೆ ತಳ್ಳಾಟ, ನೂಕಾಟವಾಯಿತು. ಅವರನ್ನು ಚದುರಿಸಲು ಪೊಲೀಸರು ಲಾಠಿ ಬೀಸಿದರು.

ರಸ್ತೆಬದಿಯಲ್ಲಿ ಯುವಕರ ಎತ್ತರ ಪರೀಕ್ಷಿಸಲಾಯಿತು. ನಂತರ ರಾಷ್ಟ್ರೀಯ ಮಿಲಿಟರಿ ಶಾಲೆ ಮೈದಾನದಲ್ಲಿ ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆಯಿತು.

‘ಈ ರ್ಯಾಲಿಗೆ 30 ಸಾವಿರಕ್ಕೂ ಅಧಿಕ ಯುವಕರು ಬಂದಿದ್ದರಿಂದ ಜನದಟ್ಟಣೆ ಉಂಟಾಗಿತ್ತು. ಈಗ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದೇವೆ’ ಎಂದು ಪೊಲೀಸರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.