ಚನ್ನಮ್ಮನ ಕಿತ್ತೂರು (ಬೆಳಗಾವಿ): ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನ ಡಿಕ್ಕಿಯಾಗಿದ್ದಕ್ಕೆ ಕೋಪಗೊಂಡ ಯುವಕನೊಬ್ಬ ಹಲ್ಲೆ ಮಾಡಿದ್ದರಿಂದ ವೃದ್ಧರೊಬ್ಬರು ಸಾವಿಗೀಡಾದ ಘಟನೆ ಇಲ್ಲಿಯ ಚೌಕೀಮಠದ ಬಳಿ ಗುರುವಾರ ನಡೆದಿದೆ. ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ಘಟನೆಯ ದೃಶ್ಯಾವಳಿ ವೈರಲ್ ಆಗಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸೋಮವಾರ ಪೇಟೆಯ ವಿಜಯಮಹಾಂತೇಶ ವಿರೂಪಾಕ್ಷಯ್ಯ ಹಿರೇಮಠ (74) ಕೊಲೆಯಾದರು.

ಮುಂಜಾನೆ ಎಸ್‌ಬಿಐಗೆ ಶಾಖೆಗೆ ಹೋಗಿದ್ದ ವಿಜಯಮಹಾಂತೇಶ ಅವರು ಮನೆಗೆ ಮರಳಿ ಬರುವಾಗ ಚೌಕೀಮಠ ಬಳಿ ಮಾತನಾಡುತ್ತಾ ನಿಂತಿದ್ದ ಮೂವರಲ್ಲಿ ಒಬ್ಬರಿಗೆ ಡಿಕ್ಕಿ ಮಾಡಿದ್ದಾರೆ. ಆಗ ವ್ಯಕ್ತಿಯೊಬ್ಬರು ಕೆಳಗೆ ಬಿದ್ದಿದ್ದಾರೆ. ಇದರಿಂದ ಕುಪಿತನಾದ ತಾಲ್ಲೂಕಿನ ಎತ್ತಿನಕೇರಿ ಗ್ರಾಮದ ಅದೃಶ್ಯಪ್ಪ ಬಾಳಪ್ಪ ಶಿವಲಿಂಗನವರ (32) ಸವಾರನನ್ನು ಥಳಿಸಿದ್ದಾರೆ. ಕೆಳಕ್ಕೆ ಬಿದ್ದ ಅವರ ಮೇಲೆ ನಾಲ್ಕೈದು ಬಾರಿ ಒದ್ದಿದ್ದಾರೆ. ಇದರಿಂದ ಪ್ರಾಣ ಹೋಗಿದೆ ಎನ್ನಲಾಗುತ್ತಿದೆ. ಈ ದೃಶ್ಯಗಳು ಸಮೀಪದ ಅಂಗಡಿಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಅದನ್ನು ಪೊಲೀಸರು ವಶಕ್ಕೆ ಪಡೆದು ಪರಿಶೀಲಿಸಿದ್ದಾರೆ.

ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.