ಬೆಳಗಾವಿ: 'ಕಿತ್ತೂರು ರಾಣಿ ಚನ್ನಮ್ಮನ ಹೋರಾಟ, ಬಾಬಾಸಾಹೇಬ ಅಂಬೇಡ್ಕರ್ ಅವರು ಬರೆದ ಸಂವಿಧಾನ, ಬಸವಣ್ಣವರ ಸಮಾನತೆ, ಬುದ್ಧನ ತತ್ವ, ಶಾಹೂ ಮಹಾರಾಜರ ಶಿಕ್ಷಣ ಕ್ರಾಂತಿ; ಇಂಥ ವಿಷಯಗಳನ್ನು ಮನನ ಮಾಡಿಕೊಳ್ಳಲು ವರ್ಷದಲ್ಲಿ ಒಂದಿಷ್ಟು ಸಮಯ ಮೀಸಲಿಡಬೇಕು' ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಚನ್ನಮ್ಮನ ಹುಟ್ಟೂರು ಕಾಕತಿಯಲ್ಲಿ ಸೋಮವಾರ ಏರ್ಪಡಿಸಿದ್ದ ಜಿಲ್ಲಾಮಟ್ಟದ ಕಿತ್ತೂರಾಣಿ ಚನ್ನಮ್ಮ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

'ಮಹಾತ್ಮರ ಚರಿತ್ರೆ ತಿಳಿದರೆ ವೈಯಕ್ತಿಕ ಬೆಳವಣಿಗೆ ಜತೆಗೆ ದೇಶದ ಅಭಿವೃದ್ಧಿಗೂ ದಾರಿ ಈಆಣಲಿದೆ' ಎಂದರು.

ವೀರಜ್ಯೋತಿಯು ರಾಜ್ಯದಾದ್ಯಂತ ಸಂಚರಿಸುವ ಮೂಲಕ ಕಿತ್ತೂರಿನ ಐತಿಹಾಸಿಕ ಘಟನೆ, ಪರಂಪರೆ, ಸ್ವಾತಂತ್ರ್ಯ ಹೋರಾಟ, ತತ್ವಾದರ್ಶ, ಚರಿತ್ರೆಯನ್ನು ಎಲ್ಲೆಡೆ ಸಾರಿದೆ. ಸಮಾಜಕ್ಕೆ ಇಂಥ ಉತ್ಸವಗಳ ಅವಶ್ಯಕತೆ ಇದ್ದು, ದಸರಾ ಉತ್ಸವ, ಕಿತ್ತೂರು ಉತ್ಸವ, ರನ್ನ ಉತ್ಸವ ಸೇರಿದಂತೆ ವಿವಿಧ ಉತ್ಸವಗಳ ಆಚರಣೆ ಜೊತೆಗೆ ಅವುಗಳ ಇತಿಹಾಸ ತಿಳಿದುಕೊಂಡು ಬದುಕಿನಲ್ಲಿ ಅಳವಡಿಸಿಕೊಂಡರೆ ಮಾತ್ರ ಉತ್ಸವಗಳು ಅರ್ಥಪೂರ್ಣವಾಗುವುದು' ಎಂದು ಹೇಳಿದರು.

ಕಾಕತಿ ಅಭಿವೃದ್ಧಿಗೆ ಕ್ರಮ- ಭರವಸೆ

'ಕಿತ್ತೂರು ಪ್ರಾಧಿಕಾರದಿಂದ ಬಂದ ಅನುದಾನದಿಂದ ಕಾಕತಿಯಲ್ಲಿ ಕೆಲವು ಕಾಮಗಾರಿಗಳು ಪೂರ್ಣಗೊಳಿಸಲಾಗಿದೆ. ಉಳಿದ ಕಾಮಗಾರಿಗಳನ್ನು ಮುಂದಿನ ದಿನಗಳಲ್ಲಿ ಮಾಡುತ್ತೇವೆ' ಎಂದು ಭರವಸೆ ನೀಡಿದರು.

'ಕಾಕತಿ ಕೋಟೆ ಅರಣ್ಯ ಇಲಾಖೆ ಅಧೀನದಲ್ಲಿದ್ದು, ವೀರರಾಣಿ ಚನ್ನಮ್ಮನ ಜನ್ಮಸ್ಥಳ ಖಾಸಗಿ ಒಡೆತನದಲ್ಲಿದ್ದು ಈ ಎರಡು ಸಮಸ್ಯೆಗಳಿಂದ ಅಭಿವೃದ್ಧಿ ಕುಂಠಿತವಾಗಿದೆ. ಆದರೆ, ಇದೀಗ ಜಿಲ್ಲಾಡಳಿತದಿಂದ ಭೂ ಸ್ವಾಧೀನ ಮಾಡಿ ವಶಕ್ಕೆ ಪಡೆದು ಆದಷ್ಟು ಬೇಗ ಅಭಿವೃದ್ಧಿಗೊಳಿಸಲಾಗುವುದು' ಎಂದು ಸಚಿವ ಜಾರಕಿಹೊಳಿ ಹೇಳಿದರು.

'ಸರ್ಕಾರ ಕೊಟ್ಟ ಕಡಿಮೆ ಅನುದಾನದಲ್ಲಿ ಜಿಲ್ಲಾಡಳಿತ ಅಚ್ಚುಕಟ್ಟಾಗಿ ಉತ್ಸವ ನಡೆಸುತ್ತದೆ. ಆದರೆ, ಇದಕ್ಕೆ ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ಕೊಟ್ಟು ಇನ್ನಷ್ಟು ವಿಜೃಂಭಣೆಯಿಂದ ಆಚರಿಸಲು ಪ್ರಯತ್ನ ಮಾಡುತ್ತವೆ' ಎಂದು ಸಚಿವ ಹೇಳಿದರು.

ಇದೇ ವೇಳೆ ವಿಶೇಷ ಉಪನ್ಯಾಸ ನೀಡಿದ ಬೆಳಗಾವಿ ಆರ್.ಪಿ.ಡಿ. ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥ ಎಚ್. ಬಿ. ಕೋಲಕಾರ, 'ಇಡೀ ನಾಡಿಗೆ ಅದಮ್ಯ ಚೇತನ, ಪ್ರತಿಭೆ, ಜನಶಕ್ತಿ ವೀರ ರಾಣಿ ಕಿತ್ತೂರು ಚನ್ನಮ್ಮ. ಬೆಳಗಾವಿ ಜಿಲ್ಲೆಯಲ್ಲಿ ಜನ ಬದುಕಿನ ಹಿತ, ಜನಮುಖಿ ಕಾಳಜಿ ಪ್ರಧಾನವಾಗಿ ಇಟ್ಟುಕೊಂಡು ಆಡಳಿತ ನಡೆಸಿ

ಇತಿಹಾಸದಲ್ಲಿ ಅಜರಾಮರಳಾದಂತಹ ಕೀರ್ತಿ ಚನ್ನಮ್ಮನಿಗೆ ಸಲ್ಲುತ್ತದೆ' ಎಂದರು.

'ಬ್ರಿಟಿಷ್ ಕಂಪನಿ ಆಳ್ವಿಕೆ ಪ್ರಾಬಲ್ಯ ಬಲಿಷ್ಠ, ವಾಗಿರುವುದರಿಂದ ನಿರಂತರ ದಾಳಿಗೊಳಗಾದ ಸಂದರ್ಭದಲ್ಲಿ ಚನ್ನಮ್ಮ ತನ್ನ ಬಲ ಹೆಚ್ಚಿಸಿಕೊಳ್ಳಲು ಸಂಗೊಳ್ಳಿ ರಾಯಣ್ಣ, ಅಮಟೂರು ಬಾಳಪ್ಪ, ಬಿಚ್ಚುಗತ್ತಿ ಚೆನ್ನಬಸಪ್ಪರನ್ನು ಇವುರುಗಳನ್ನು ಅಂಗರಕ್ಷಕ ಪಡೆಯಲ್ಲಿ ಸೇರಿಸಿಕೊಂಡು ಹೋರಾಡಿದ ವೀರ ಮಹಿಳೆ' ಎಂದು ಹೇಳಿದರು.

'ಭಾರತದ ಸ್ವಾತಂತ್ರ್ಯದ ಬೆಳ್ಳಿಚುಕ್ಕಿ ಎಂಬ ಮೊಟ್ಟ ಮೊದಲ ಕಾದಂಬರಿ, ಕಿತ್ತೂರು ಸಂಸ್ಥಾನ ಸಂದೇಶ ಸಾರುವ ಕನ್ನಡ ನೆಲದ ಮಹಾ ಸೌಭಾಗ್ಯ ವೀರರಾಣಿ ಕಿತ್ತೂರು ಚನ್ನಮ್ಮ ಎಂಬ ಗ್ರಂಥಗಳು ರಚನೆಯಾಗಿವೆ ಇವುಗಳನ್ನು ಎಲ್ಲರೂ ತಿಳಿದುಕೊಳ್ಳಬೇಕು' ಎಂದು ಹೇಳಿದರು.

ವಿದ್ವಾಂಸರಾದ ಕ.ಸ ಹಾಲಪ್ಪನವರು ವೀರರಾಣಿ ಕಿತ್ತೂರು ಚನ್ನಮ್ಮಳ ಆಡಳಿತ ವೈಖರ್ಯ ಮೆಚ್ಚಿ ಭಾರತದ ಸ್ವಾತಂತ್ರ್ಯದ ಬೆಳ್ಳಿಚುಕ್ಕಿ ಎಂದು ಹೇಳಿದರು.

ಶಾಸಕ ಆಸೀಫ್ (ರಾಜು) ಸೇಠ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಹರ್ಷಲ್ ಭೋಯರ್, ಕಾಕತಿ ಶಿವಪೂಜೆ ಮಠದ ರಾಚಯ್ಯ ಸ್ವಾಮಿಗಳು, ಕಾಕತಿ ಶಿವಪೂಜಿಮಠದ ಉದಯ ಸ್ವಾಮೀಜಿ, ಕಾಕತಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವರ್ಷಾ ಮುಚ್ಚಂಡಿಕರ, ಉಪಾಧ್ಯಕ್ಷೆ ರೇಣುಕಾ ಕೊಳಿಕರ, ಕಾಕತಿ ಉತ್ಸವ ಸಮಿತಿ ಅಧ್ಯಕ್ಷ, ಉಪವಿಭಾಗಾಧಿಕಾರಿ ಶ್ರವಣ ನಾಯ್ಕ, ತಹಶೀಲ್ದಾರ ಬಸವರಾಜ ನಾಗರಾಳ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.