ಚಿಕ್ಕೋಡಿ: ಚಿಕ್ಕೋಡಿ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ 2ನೇ ಅವಧಿಯ ಚುನಾವಣೆ ಸೆ.12ರಂದು ನಡೆಯಲಿದ್ದು, ಗದ್ದುಗೆ ಏರಲು ಬಿಜೆಪಿ ಹಾಗೂ ಕಾಂಗ್ರೆಸ್ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದೆ.

ಒಟ್ಟು 23 ಸ್ಥಾನಗಳ ಪೈಕಿ ಬಿಜೆಪಿ ಬೆಂಬಲಿತ 13 ಜನ ಸದಸ್ಯರು ಹಾಗೂ ಕಾಂಗ್ರೆಸ್ ಬೆಂಬಲಿತ 10 ಸದಸ್ಯರು ಇದ್ದಾರೆ. ಮೊದಲನೇ ಅವಧಿಯ (2020 -2023) ಅಧ್ಯಕ್ಷ -ಉಪಾಧ್ಯಕ್ಷರ ಆಯ್ಕೆಯ ಸಂದರ್ಭದಲ್ಲಿ ಬಿಜೆಪಿ ಚುಕ್ಕಾಣಿಯಲ್ಲಿ ರಾಜ್ಯ ಸರ್ಕಾರವಿತ್ತು. ಸಂಸತ್ ಸ್ಥಾನವೂ ಬಿಜೆಪಿಯದ್ದೇ ಆಗಿತ್ತು. ಹೀಗಾಗಿ ಬಿಜೆಪಿ ಬೆಂಬಲಿತ ಸದಸ್ಯರನ್ನು ಅಧ್ಯಕ್ಷ -ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡುವುದು ಸುಲಭವಾಗಿತ್ತು.

ಇದೀಗ ರಾಜ್ಯ ಸರ್ಕಾರದ ಆಡಳಿತ ಚುಕ್ಕಾಣಿ ಕಾಂಗ್ರೆಸ್ ಕೈಯಲ್ಲಿದ್ದು, ಚಿಕ್ಕೋಡಿ ಸಂಸತ್ ಸದಸ್ಯೆ ಪ್ರಿಯಾಂಕಾ ಜಾರಕಿಹೊಳಿ ಹಾಗೂ ಸ್ಥಳೀಯ ಶಾಸಕ ಗಣೇಶ ಹುಕ್ಕೇರಿ ಅವರು ಕಾಂಗ್ರೆಸ್ ಪಕ್ಷದವರೇ ಆಗಿದ್ದಾರೆ. ಹೀಗಾಗಿ 10 ಜನ ಕಾಂಗ್ರೆಸ್ ಬೆಂಬಲಿತ ಸದಸ್ಯರು ಹಾಗೂ ಇಬ್ಬರು ಜನಪ್ರತಿನಿಧಿಗಳ ಮತ ಸೇರಿದರೆ ಬಹುಮತ ಸಾಬೀತಿಗೆ ಒಂದು ಸ್ಥಾನದ ಕೊರತೆ ಮಾತ್ರ ಇದೆ. ಹೀಗಾಗಿ ಬಿಜೆಪಿ ಬೆಂಬಲಿತ ಸದಸ್ಯರೊಬ್ಬರಿಗೆ ಉಪಾಧ್ಯಕ್ಷ ಸ್ಥಾನವನ್ನು ಕೊಟ್ಟು, ಅಥವಾ ಅಧ್ಯಕ್ಷ ಸ್ಥಾನವನ್ನಾದರೂ ನೀಡಿ, ಚಿಕ್ಕೋಡಿ ಪುರಸಭೆ ಆಡಳಿತವನ್ನು ಕಾಂಗ್ರೆಸ್ ತನ್ನ ‘ಕೈ’ವಶ ಮಾಡಿಕೊಳ್ಳುವ ಹವಣಿಕೆಯಲ್ಲಿರುವ ಮಾತುಗಳು ಕೇಳಿಬರುತ್ತಿದೆ.

ಸೆ.10 ರಂದು ನಡೆದ ಯಕ್ಸಂಬಾ ಪಟ್ಟಣ ಪಂಚಾಯಿತಿ ಅಧ್ಯಕ್ಷ -ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಬೀಗಿದ್ದು, ಚಿಕ್ಕೋಡಿ ಪುರಸಭೆ ಗದ್ದುಗೆ ಏರುವ ಸುಳಿವನ್ನೂ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ –2 ಪ್ರಕಾಶ ಹುಕ್ಕೇರಿ ನೀಡಿದ್ದಾರೆ. ಚಿಕ್ಕೋಡಿ ಪುರಸಭೆಯ ಮಾಜಿ ಅಧ್ಯಕ್ಷರೂ, ಹಾಲಿ ಸದಸ್ಯರೂ ಆಗಿರುವ ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಅವರ ಸಹೋದರ ಜಗದೀಶ ಕವಟಗಿಮಠ ಅವರು ಪುರಸಭೆ ಅಧಿಕಾರವನ್ನು ಬಿಜೆಪಿಯಲ್ಲಿಯೇ ಉಳಿಸಿಕೊಳ್ಳುವ ಸರ್ವ ಪ್ರಯತ್ನದಲ್ಲಿ ತೊಡಗಿದ್ದಾರೆ.

ಚಿಕ್ಕೋಡಿ ಪುರಸಭೆಯ 23 ಸದಸ್ಯರ ಪೈಕಿ ಯಾರೊಬ್ಬರೂ ಪಕ್ಷದ ಚಿಹ್ನೆಯ ಅಡಿ ಆಯ್ಕೆಯಾಗಿಲ್ಲದ್ದರಿಂದ ಪಕ್ಷಾಂತರವಾದರೂ ಕೂಡ ಯಾವ ಪಕ್ಷವೂ ಕೂಡ ವಿಪ್ ಜಾರಿ ಮಾಡಲಾಗುವುದಿಲ್ಲ. ಹೀಗಾಗಿ ಹೊಂದಾಣಿಕೆ ರಾಜಕಾರಣದ ಅಪಖ್ಯಾತಿಯನ್ನೂ ಬೆಳಗಾವಿ ಜಿಲ್ಲೆಯ ರಾಜಕಾರಣ ಹೊಂದಿರುವುದರಿಂದ ಕೊನೆಗಳಿಗೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಒಳಒಪ್ಪಂದ ಮಾಡಿಕೊಂಡು ತಲಾ ಒಂದೊಂದು ಸ್ಥಾನವನ್ನು ಪಡೆದುಕೊಳ್ಳಬಹುದು ಎಂಬ ಮಾತುಗಳೂ ಕೇಳಿ ಬರುತ್ತಿವೆ.

2023ರ ಏಪ್ರಿಲ್ 19ರಿಂದ ಇಂದಿನವರೆಗೆ ಆಡಳಿತಾಧಿಕಾರಿಯನ್ನು ಹೊಂದಿದ್ದ ಚಿಕ್ಕೋಡಿ ಪುರಸಭೆಯ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿದ್ದು, ಅಧ್ಯಕ್ಷ -ಉಪಾಧ್ಯಕ್ಷರು ಆಯ್ಕೆಯಾದಲ್ಲಿ ಮತ್ತೆ ಚಿಕ್ಕೋಡಿ ಪುರಸಭೆಯ ಆಡಳಿತದಲ್ಲಿ ಚುರುಕು ಮೂಡಿ ಅಭಿವೃದ್ಧಿ ಕಾರ್ಯಗಳು ಕೈಗೊಂಡರೇ ಸಾಕು ಎಂಬುವುದು ಸಾಮಾನ್ಯ ಜನರ ಅಭಿಪ್ರಾಯವಾಗಿದೆ.

ಚಿಕ್ಕೋಡಿ ಪುರಸಭೆಯನ್ನು ಮತ್ತೆ ಬಿಜೆಪಿ ಪಾಲಿಗೆ ಉಳಿಸಿಕೊಳ್ಳುತ್ತೇವೆ. ಈ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ
-ಜಗದೀಶ ಕವಟಗಿಮಠ ಚಿಕ್ಕೋಡಿ ಪುರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ

ಚಿಕ್ಕೋಡಿ ಪುರಸಭೆಯನ್ನು ಕೈವಶ ಮಾಡಿಕೊಳ್ಳುತ್ತೇವೆ. ಯಾವುದಕ್ಕೂ ಕಾದು ನೋಡಿ. ಈಗಲೇ ಏನೂ ಹೇಳಲು ಆಗುವುದಿಲ್ಲ
-ಪ್ರಕಾಶ ಹುಕ್ಕೇರಿ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.