ಬೆಳಗಾವಿ: ಮಗ್ಗಗಳ ವಿದ್ಯುತ್ ದರ ಹೆಚ್ಚಿಸಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ, ವಿದ್ಯುತ್ ಶುಲ್ಕ ಪಾವತಿಸದಿರಲು ತಾಲ್ಲೂಕಿನ ಸುಳೇಭಾವಿ, ಮಾರಿಹಾಳ, ಮೋದಗಾ, ಪಂತ ಬಾಳೇಕುಂದ್ರಿ ಮತ್ತು ಸಾಂಬ್ರಾದ ನೇಕಾರರು ತೀರ್ಮಾನಿಸಿದ್ದಾರೆ. ಈ ಸಂಬಂಧ ತಾಲ್ಲೂಕಿನ ಸುಳೇಭಾವಿಯಲ್ಲಿ ಸಭೆ ಕೂಡ ನಡೆಸಿದ್ದಾರೆ.

‘ಉಚಿತವಾಗಿ ವಿದ್ಯುತ್ ಕೊಡುವುದಾಗಿ ಕಾಂಗ್ರೆಸ್ ಘೋಷಿಸಿದ್ದು ಸಂತಸದ ಸಂಗತಿ. ಆದರೆ, ಮಗ್ಗಗಳಿಗೆ ಒದಗಿಸುವ ತ್ರಿಫೇಸ್ ವಿದ್ಯುತ್ ದರ ಹೆಚ್ಚಿಸಿ ನೇಕಾರರನ್ನು ಸಂಕಷ್ಟಕ್ಕೆ ತಳ್ಳಿದೆ. ಜಿಎಸ್ಟಿ, ಕೊರೊನಾ ಮತ್ತಿತರ ಕಾರಣಗಳಿಂದ ಮೊದಲೇ ತೊಂದರೆಗೆ ಸಿಲುಕಿದ ನಮ್ಮನ್ನು ಬೀದಿಗೆ ತಂದು ನಿಲ್ಲಿಸಿದೆ’ ಎಂದು ಮುಖಂಡ ನಾರಾಯಣ ಲೋಕರೆ ತಿಳಿಸಿದ್ದಾರೆ.

‘ತ್ರಿಫೇಸ್ ವಿದ್ಯುತ್ನ ಪ್ರತಿ ಎಚ್ಪಿಗೆ ನಿಗದಿತ ದರ ₹80 ಇತ್ತು. ಈಗ ಅದನ್ನು ₹140ಕ್ಕೆ ಹೆಚ್ಚಿಸಿದೆ. ಪ್ರತಿ ಯೂನಿಟ್ಗೆ ವಿಧಿಸುತ್ತಿದ್ದ ಶುಲ್ಕವನ್ನು ₹57 ಪೈಸೆಯಿಂದ ₹2.55ಕ್ಕೆ ಏರಿಸಲಾಗಿದೆ. ಇದರೊಂದಿಗೆ ತೆರಿಗೆ ಮೊತ್ತವೂ ಹೆಚ್ಚಿದೆ. ಇದನ್ನು ಖಂಡಿಸಿ ಜೂನ್ 12ರಂದು ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ಕೂಡ ನಡೆಸುತ್ತೇವೆ’ ಎಂದು ಮುಖಂಡ ಬಾಬು ವಾಗೇರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.