ನಾಗೇಶ ಪಾಂಡುರಂಗ ಮಾರೇಕರ ಎನ್ನುವವರಿಗೆ ₹2.36 ಲಕ್ಷ ಆರೋಗ್ಯ ವಿಮೆ ಮಂಜೂರು ಮಾಡುವಂತೆ ಮಹಾರಾಷ್ಟ್ರ ಏಕೀಕರಣ ಸಮಿತಿ ನೀಡಿದ ಶಿಫಾರಸು ಪತ್ರ / ಪ್ರಜಾವಾಣಿ ಚಿತ್ರ
ಮಹಾರಾಷ್ಟ್ರ ಸರ್ಕಾರ ಈಗ ನಮ್ಮ ಅಡುಗೆ ಮನೆಗೇ ನುಗ್ಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಲೂ ನಿರ್ಲಕ್ಷ್ಯ ವಹಿಸಿದರೆ ಮುಂದೆ ದೊಡ್ಡ ಆಘಾತ ಕಾದಿದೆ
ಅಶೋಕ ಚಂದರಗಿ ಅಧ್ಯಕ್ಷ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ
ಎಂಇಎಸ್ ಶಿಫಾರಸು ಮಾತ್ರ ಸಾಕು!
ಆರೋಗ್ಯ ವಿಮೆ ಪಡೆಯಲು ‘ನಾನು ಮರಾಠಿಗ’ ಎಂಬ ಮುಚ್ಚಳಿಕೆ ಕೊಡುವುದು ಕಡ್ಡಾಯ. ಆದರೆ ಯಾರಿಗೆ ಎಷ್ಟು ಹಣ ಮಂಜೂರು ಮಾಡಬೇಕು ಎಂಬುದನ್ನು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಶಿಫಾರಸು ಮಾಡುತ್ತದೆ. ಆಧಾರ್ ಕಾರ್ಡ್ ಮತದಾರರ ಗುರುತಿನ ಚೀಟಿ ರೇಷನ್ ಕಾರ್ಡ್ ಸೇರಿದಂತೆ ಕರ್ನಾಟಕದ ಯಾವುದೇ ದಾಖಲೆಯೂ ಇದಕ್ಕೆ ಬೇಕಿಲ್ಲ. ಶಿಫಾರಸು ಪತ್ರ ಒಂದಿದ್ದರೆ ಸಾಕು. ಬೆಳಗಾವಿ ಬೀದರ್ ಕಲಬುರಗಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ 12 ತಾಲ್ಲೂಕುಗಳಲ್ಲಿರುವ 865 ಹಳ್ಳಿಗಳ ಎಲ್ಲ ಭಾಷಿಕರೂ ಈ ವಿಮೆಯ ಫಲಾನುಭವಿ ಆಗಬಹುದು. ಸಣ್ಣ ಹಾಗೂ ಗಂಭೀರ ಆರೋಗ್ಯ ಸಮಸ್ಯೆಗಳನ್ನೂ ಒಳಗೊಂಡು ಒಟ್ಟು 996 ಕಾಯಿಲೆಗಳಿಗೆ ವಿಮೆ ಅನ್ವಯ. ವಾರ್ಷಿಕ ₹5 ಲಕ್ಷದವರೆಗೆ ವಿಮೆ ಸಿಗಲಿದೆ.