ಬೆಳಗಾವಿ: ‘ಅವರಿಬ್ಬರ ಜಗಳದಾಗ ನಾ ಯಾಕಪಾ. ಸಿ.ಎಂ ಆಗುವಷ್ಟ ಸಾಮರ್ಥ್ಯ ನನಗೂ ಐತಿ...’

ಕೆಪಿಸಿಸಿ ಪ್ರಾಚಾರ ಸಮಿತಿ ಅಧ್ಯಕ್ಷ ಡಾ.ಎಂ.ಬಿ.ಪಾಟೀಲ ಅವರು ಬೆಳಗಾವಿಯಲ್ಲಿ ಗುರುವಾರ ಮಾಧ್ಯಮದವರ ಪ್ರಶ್ನೆಗೆ ನೀಡಿದ ಉತ್ತರವಿದು.

‘ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ ಅವರು ಮುಖ್ಯಮಂತ್ರಿ ಹುದ್ದೆಗೆ ಪೈಪೋಟಿ ನಡೆಸಿದ್ದಾರೆ. ಅವರಿಬ್ಬರ ಜಗಳದಲ್ಲಿ ಎಂ.ಬಿ. ಪಾಟೀಲ ಅವರಿಗೆ ಅವಕಾಶ ಸಿಗಬಹುದೇ’ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಇಬ್ಬರ ಕದನದಲ್ಲಿ ನಾನ್ಯಾಕ್ ಬರಲಿ. ಎಂ.ಬಿ. ಪಾಟೀಲ ಇಬ್ಬರ ಕದನದಾಗ ಬರವಂಥವಲ್ಲ. ಬರಬೇಕಂದಾಗ ನೇರವಾಗಿ ಬರತೇನ್. ವಿ ಆರ್ ನಾಟ್ ಸೆಕೆಂಡ್ ಕ್ಲಾಸ್ ಸಿಟಿಜನ್ಸ್ (ನಾವು ಎರಡನೇ ದರ್ಜೆಯ ನಾಗರಿಕರಲ್ಲ)’ ಎಂದರು.

‘ಪಂಜಾಬ್ ಮಾದರಿಯಲ್ಲೇ ರಾಜ್ಯದಲ್ಲೂ ಚುನಾವಣೆಗೆ ಮುನ್ನವೇ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡಬಹುದು. ಆದರೆ, ಕಾಂಗ್ರೆಸ್‌ನಲ್ಲಿ ಮೊದಲಿನಿಂದಲೂ ಒಂದು ಪದ್ಧತಿ ಇದೆ. ಚುನಾವಣೆ ಬಳಿಕ ಶಾಸಕರೆಲ್ಲ ಒಪ್ಪಿಗೆ ನೀಡಿ ಮುಖ್ಯಮಂತ್ರಿಯನ್ನು ಆರಿಸುತ್ತಾರೆ’ ಎಂದೂ ಹೇಳಿದರು.

‘ಮುಖ್ಯಮಂತ್ರಿ ಯಾರಾಗಬೇಕು, ಯಾರಾಗುತ್ತಾರೆ ಎಂಬ ಪ್ರಶ್ನೆಗಳು ಮಾಧ್ಯಮದವರಿಗೇ ಹೆಚ್ಚಾಗಿ ಕಾಡುತ್ತಿವೆ. ಲಿಂಗಾಯತ ಸಮುದಾಯದವರೂ ಆಗಬಹುದು. ಒಕ್ಕಲಿಗ, ಮುಸ್ಲಿಂ, ಪರಿಶಿಷ್ಟ ಸೇರಿದಂತೆ ಯಾವ ಸಮುದಾಯದರೂ ಆಗಬಹುದು. ಇಂಥದ್ದೇ ಸಮಾಜದವರು ಆಗುತ್ತಾರೆ ಎಂದೇನೂ ಇಲ್ಲ. ಇಲ್ಲಿ ಯಾರು ಕೂಡ ಮೂಕ ಪ್ರೇಕ್ಷಕರಲ್ಲ’ ಎಂದೂ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇವನ್ನೂ ಓದಿ..

ಮುಖ್ಯಮಂತ್ರಿ ಕುರ್ಚಿಗೆ ಟವಲ್ ಹಾಕಿ ಕುಳಿತಿಲ್ಲ: ಸಿದ್ದರಾಮಯ್ಯ

ದಲಿತ ಮುಖ್ಯಮಂತ್ರಿ ಯಾಕಾಗಬಾರದು: ಡಿ.ಕೆ.ಶಿವಕುಮಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.