‘ಚುನಾವಣೆಗಾಗಿ ವಕ್ಫ್ ಗದ್ದಲ’
‘ರೈತರ ಜಮೀನಿನ ಖಾತೆಯನ್ನು ವಕ್ಫ್‌ಗೆ ಬದಲಾಯಿಸುವುದು 2019ರಿಂದ ನಡೆಯುತ್ತಿದ್ದರೂ ಉಪಚುನಾವಣೆ ಬಂದಾಗಲೇ ಆ ವಿಚಾರವನ್ನು ಮುನ್ನೆಲೆಗೆ ತರಲಾಗಿದೆ. ವಿರೋಧ ಪಕ್ಷಗಳನ್ನು ಮಾಧ್ಯಮಗಳನ್ನು ತಮಗೆ ಬೇಕಾದಂತೆ ಬಳಸಿಕೊಳ್ಳುತ್ತಿವೆ’ ಎಂದು ಡಿ.ಕೆ.ಸುರೇಶ್ ಹೇಳಿದರು. ‘ರೈತರ ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ಹೆಚ್ಚು ಬದಲಾವಣೆ ಆಗಿದ್ದು 2019ರಿಂದ 2022ರ ನಡುವೆ. ಆ ಅವಧಿಯಲ್ಲಿ ಬಿಜೆಪಿ ಸರ್ಕಾರವಿತ್ತು. ಚನ್ನಪಟ್ಟಣದಲ್ಲೂ 2019ರಲ್ಲಿ ಪಹಣಿ ಬದಲಾವಣೆ ಮಾಡಲಾಗಿದೆ. ಆಗ ಚರ್ಚೆಯಲ್ಲಿ ಇಲ್ಲದ ವಿಚಾರ ಈಗ ಬಂದಿದ್ದೇಕೆ’ ಎಂದು ಪ್ರಶ್ನಿಸಿದರು. ‘ಚುನಾವಣೆ ಬಂದಾಗಲಷ್ಟೇ ಜಾತಿ ಧರ್ಮ ಎಲ್ಲವೂ ಮುನ್ನೆಲೆಗೆ ಬರುತ್ತಿದೆ. ಮತದಾನದ ದಿನ ಮಧ್ಯಾಹ್ನದವರೆಗೂ ಸುದ್ದಿವಾಹಿನಿಗಳು ಅದನ್ನೇ ಚರ್ಚೆ ಮಾಡಿದವು. ಈ ವಿಚಾರದಲ್ಲಿ ವಿರೋಧ ಪಕ್ಷಗಳ ರಾಜಕೀಯಕ್ಕೆ ಮಾಧ್ಯಮಗಳು ಅಸ್ತ್ರವಾಗುತ್ತಿವೆ’ ಎಂದರು.