ಬೆಳಗಾವಿ: ಭೀಕರ ಬರ ಮತ್ತು ಕೀಟಬಾಧೆಯಿಂದ ಈ ಬಾರಿ ಎಳನೀರಿನ ಇಳುವರಿ ಕುಸಿತವಾಗಿದೆ. ಮತ್ತೊಂದೆಡೆ ಬಿಸಿಲಿನ ಬೇಗೆ ಹೆಚ್ಚುತ್ತಿರುವುದರಿಂದ ಚಳಿಗಾಲದಲ್ಲೂ ಬೇಡಿಕೆ ಹೆಚ್ಚಿದೆ. ಇದರಿಂದಾಗಿ ಇಲ್ಲಿನ ಮಾರುಕಟ್ಟೆಯಲ್ಲಿ ಪ್ರತಿ ಎಳನೀರಿನ ದರ ₹35ಕ್ಕೆ ಏರಿಕೆಯಾಗಿದೆ.

‘ಬಾಗಲಕೋಟೆ, ದಾವಣಗೆರೆ ಮತ್ತಿತರ ಜಿಲ್ಲೆಗಳಿಂದ ಎಳನೀರು ತರಿಸುತ್ತಿದ್ದೆವು. ಎರಡು ತಿಂಗಳ ಹಿಂದೆ ಪ್ರತಿ 100 ಎಳನೀರಿಗೆ ₹1,800(ಸಾರಿಗೆ ವೆಚ್ಚ ಸೇರಿ) ದರವಿತ್ತು. ಈಗ ₹2,400ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಭೂಬಾಡಿಗೆ ತುಂಬುವುದು, ಇತರೆ ಖರ್ಚುಗಳಿವೆ. ಹಾಗಾಗಿ ಎಳನೀರಿನ ದರವನ್ನು ₹30ರಿಂದ ₹35ಕ್ಕೆ ಹೆಚ್ಚಿಸಿದ್ದೇವೆ. ಒಂದುವೇಳೆ ಪೂರೈಕೆ ಹೆಚ್ಚಿದರೆ, ದರ ಇಳಿಸುತ್ತೇವೆ’ ಎಂದು ಸ್ಥಳೀಯ ವ್ಯಾಪಾರಿ ಮಹಮ್ಮದ್‌ಹನೀಫ್ ಬಾಬಾಖಾನ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪೂರೈಕೆಯಾಗುತ್ತಿಲ್ಲ: ‘ಮಂಡ್ಯ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಿಂದ ನಿಯಮಿತವಾಗಿ ಎಳನೀರು ಪೂರೈಕೆಯಾಗುತ್ತಿತ್ತು. ಆದರೆ, ಮಳೆ ಕೈಕೊಟ್ಟ ಕಾರಣ ಈ ಸಲ ತೆಂಗಿನಕಾಯಿ ಸರಿಯಾಗಿ ಬೆಳೆದಿಲ್ಲ. ಎಷ್ಟೇ ಬೇಡಿಕೆ ಸಲ್ಲಿಸಿದರೂ ಸಕಾಲಕ್ಕೆ ಪೂರೈಕೆಯಾಗುತ್ತಿಲ್ಲ. ಒಂದುವೇಳೆ ಪರಿಸ್ಥಿತಿ ಹೀಗೆ ಮುಂದುವರಿದರೆ, ಎಳನೀರಿನ ದರ ₹40ಕ್ಕೆ ಏರುವ ಸಾಧ್ಯತೆ ಇದೆ’ ಎಂದು ಮತ್ತೊಬ್ಬ ವ್ಯಾಪಾರಿ ಅಕ್ಬರ್ ಹೇಳಿದರು.

‘ಪ್ರತಿವರ್ಷ ಈ ಅವಧಿಯಲ್ಲಿ ಎಳನೀರಿಗೆ ಹೆಚ್ಚಿನ ಬೇಡಿಕೆ ಇರುತ್ತಿರಲಿಲ್ಲ. ಮಳೆ–ಚಳಿ ಕಾರಣಕ್ಕೆ ಜನರೂ ಅಷ್ಟಾಗಿ ಸೇವಿಸುತ್ತಿರಲಿಲ್ಲ. ಈ ಸಲ ಅಕ್ಟೋಬರ್‌ನಲ್ಲೇ ಗರಿಷ್ಠ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್ ಇದ್ದು, ಚಳಿಯ ಪ್ರಮಾಣ ಕಡಿಮೆಯಿದೆ. ಹಾಗಾಗಿ ಸಮೃದ್ಧ ಪೋಷಕಾಂಶಗಳಿರುವ ಎಳನೀರಿನ ಸೇವನೆಗೆ ಜನರು ಆದ್ಯತೆ ನೀಡಿದ್ದಾರೆ’ ಎಂದರು.

‘ತಿಂಗಳ ಹಿಂದಷ್ಟೇ ಬೆಳಗಾವಿಯಲ್ಲಿ ₹25ರಿಂದ ₹30ಕ್ಕೆ ಒಂದು ಎಳನೀರು ಸಿಗುತ್ತಿತ್ತು. ಈಗ ₹35ಕ್ಕೆ ಏರಿಕೆಯಾಗಿದೆ. ಆದರೆ, ಬಿಸಿಲಿನ ಝಳದಿಂದ ಪಾರಾಗಲು ತಂಪುಪಾನೀಯ ಸೇವಿಸುವುದಕ್ಕಿಂತ, ಇದನ್ನು ಸೇವಿಸುತ್ತಿದ್ದೇವೆ’ ಎನ್ನುತ್ತಾರೆ ಗ್ರಾಹಕ ಹರೀಶ ಕರಿಗನ್ನವರ.

ಇಳುವರಿ ಕುಸಿತದಿಂದ ದರ ಹೆಚ್ಚಳ

‘ಉತ್ತರ ಕರ್ನಾಟಕಕ್ಕಿಂತ ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಎಳನೀರಿನ ಗಿಡಗಳಿವೆ. ಈ ಬಾರಿ ಬರದ ಪರಿಸ್ಥಿತಿಯಿದೆ. ಜತೆಗೆ ಕಪ್ಪುತಲೆಯ ಹುಳುವಿನ ಕಾಟದಿಂದ ಇಳುವರಿ ಕುಸಿದಿದೆ. ಇದೇ ದರ ಹೆಚ್ಚಳಕ್ಕೆ ಕಾರಣ’ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಹಾಂತೇಶ ಮುರಗೋಡ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.