ಕಿತ್ತೂರು ಉತ್ಸವ ಪ್ರಯುಕ್ತ ಚನ್ನಮ್ಮನ ಕಿತ್ತೂರಿನ ಗುರುಸಿದ್ಧೇಶ್ವರ ಪ್ರೌಢಶಾಲೆ ಆಟದ ಮೈದಾನದಲ್ಲಿ ನಡೆದ ಹಗ್ಗಜಗ್ಗಾಟ ಸ್ಪರ್ಧೆ (ಸಂಗ್ರಹ ಚಿತ್ರ)
ತಾಲ್ಲೂಕು ಕ್ರೀಡಾಂಗಣ ನಿರ್ಮಿಸಲು ಹಿಂದೆ ನೀಡಿದ್ದ ನಿವೇಶನ ಸೂಕ್ತವಾಗಿರದ ಕಾರಣ ಬೇರೆ ನಿವೇಶನದ ಹುಡುಕಾಟ ನಡೆಸಲಾಗಿದೆ. ಶೀಘ್ರ ಒಂದು ಜಾಗ ಅಂತಿಮವಾಗಲಿದೆ
- ಬಾಬಾಸಾಹೇಬ ಪಾಟೀಲ, ಶಾಸಕ ಚನ್ನಮ್ಮನ ಕಿತ್ತೂರು
ಜಾಗದ ಕೊರತೆಯಿಂದ ಹೊಸ ತಾಲ್ಲೂಕುಗಳಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಹಿನ್ನಡೆಯಾಗಿದೆ. ಈಗ ನಾಲ್ಕು ಕಡೆ ಜಾಗ ಸಿಕ್ಕಿದ್ದು ಕಾಮಗಾರಿ ಆರಂಭಿಸಲಾಗುವುದು
-ಬಿ.ಶ್ರೀನಿವಾಸ, ಉಪನಿರ್ದೇಶಕ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೆಳಗಾವಿ
ಜಾಗದ ಕೊರತೆ ಇರುವುದರಿಂದ ಮೂಡಲಗಿಯಲ್ಲಿ ಕ್ರೀಡಾಂಗಣ ನಿರ್ಮಾಣಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿಲ್ಲ. ಅರಭಾವಿ ಭಾಗದಲ್ಲಿ ಸರ್ಕಾರಿ ಜಾಗಗಳಿವೆ. ಆದರೆ ಮೂಡಲಗಿ ಕೇಂದ್ರಸ್ಥಳದಿಂದ ಅವು ದೂರದಲ್ಲಿವೆ