ಮೋಳೆ (ಬೆಳಗಾವಿ ಜಿಲ್ಲೆ): ‘ಕಾಗವಾಡ ಮತ ಕ್ಷೇತ್ರದ ಬಹುದಿನಗಳ ಬೇಡಿಕೆಯಾಗಿದ್ದ ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆಗೆ ಕಾಂಗ್ರೆಸ್ ಸರ್ಕಾರವಿದ್ದಾಗ ಮಂಜೂರಾತಿ ನೀಡಲಾಗಿದೆ. ಆದರೆ ತಾವು ಮಾಡಿಸಿದ್ದು ಎಂದು ಸಚಿವ ಜಗದೀಶ ಶೆಟ್ಟರ್ ಹೇಳಿಕೊಳ್ಳುತ್ತಿದ್ದಾರೆ. ಅವರಿಗೆ ನಾಚಿಕೆಯಾಗುವುದಿಲ್ಲವೇ?’ ಎಂದು ಕಾಂಗ್ರೆಸ್ ಶಾಸಕ ಎಂ.ಬಿ. ಪಾಟೀಲ ಪ್ರಶ್ನಿಸಿದರು.

ಕಾಗವಾಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ ಪರ ಗುಂಡೇವಾಡಿ ಹಾಗೂ ಅನಂತಪುರ ಗ್ರಾಮಗಳಲ್ಲಿ ಪ್ರಚಾರ ನಡೆಸಿ ಮಾತನಾಡಿದರು.

‘ಯೋಜನೆಗೆ 2017ರ ಜೂನ್ 30ರಂದು ಮಂಜೂರಾತಿ ದೊರೆತಿದೆ. ಆಗ, ಸಿದ್ದರಾಮಯ್ಯ ಮುಖ್ಯಮಂತ್ರಿ, ನಾನು ಜಲಸಂಪನ್ಮೂಲ ಸಚಿವನಾಗಿದ್ದೆ. ರಾಜು ಕಾಗೆ ಶಾಸರಾಗಿದ್ದರು. ನಾವು ಮಾಡಿದ್ದೇವೆ ಎನ್ನುತ್ತಿರುವ ಶೆಟ್ಟರ್, ಈ ಭಾಗದ ಜಾಗೃತ ದೈವ ಬಸವೇಶ್ವರ ದೇವರ ಮೇಲೆ ಪ್ರಮಾಣ ಮಾಡಲಿ’ ಎಂದು ಸವಾಲು ಹಾಕಿದರು.

‘ಸತತ ಬರಗಾಲಕ್ಕೆ ತುತ್ತಾದ ಈ ಭಾಗದ 22 ಗ್ರಾಮಗಳ 67,880 ಎಕರೆ ಭೂಮಿಗೆ ನೀರಾವರಿ ಯೋಜನೆಗೆ ₹ 1,280 ಕೋಟಿ ಅನುದಾನ ಮಂಜೂರು ಮಾಡಿ ಕಾಮಗಾರಿಗೆ ಚಾಲನೆ ನೀಡಿದ್ದೇ ನಾವು’ ಎಂದು ತಿಳಿಸಿದರು.

ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಮಾತನಾಡಿ, ‘ಪ್ರವಾಹ ಬಂದು ಜನರು ತತ್ತರಿಸುತ್ತಿದ್ದ ಸಂದರ್ಭದಲ್ಲಿ ಶ್ರೀಮಂತ ಪಾಟೀಲರು ಮುಂಬೈಯಲ್ಲಿ ತಮ್ಮನ್ನು ತಾವು ಮಾರಿಕೊಂಡು ಕ್ಷೇತ್ರದ ಮಾನ ಕಳೆದಿದ್ದಾರೆ. ಅಂಥವರಿಗೆ ಪಾಠ ಕಲಿಸಬೇಕು’ ಎಂದರು.

ಅಭ್ಯರ್ಥಿ ರಾಜು ಕಾಗೆ, ಮುಖಂಡ ಎಸ್.ಆರ್. ಪಾಟೀಲ ಮಾತನಾಡಿದರು.

ಮುಖಂಡರಾದ ರುದ್ರಗೌಡ ಪಾಟೀಲ, ದಾದಾ ಶಿಂಧೆ, ಲಕ್ಷ್ಮಣರಾವ್ ಚಿಂಗಳೆ, ದಿಗ್ವಿಜಯಪವಾರ ದೇಸಾಯಿ, ಚಂದ್ರಕಾಂತ ಇಮ್ಮಡಿ, ಬಸವರಾಜ ಅಂಗಡಿ, ಓಂಪ್ರಕಾಶ ಪಾಟೀಲ, ಗುಳಪ್ಪ ಜತ್ತಿ, ವಿಜಯಕುಮಾರ ಅಕಿವಾಟೆ, ಗಜಾನನ ಯರಂಡೋಲಿ, ವಿಜಯಾ ಹಿರೇಮಠ, ತೇಜಶ್ವಿನಿ ನಾಯಿಕವಾಡಿ, ವಿದ್ಯಾ ಹಿರೇಮಠ, ಪ್ರಕಾಶ ಹಳ್ಳೋಳ್ಳಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.