ಕಾಗವಾಡ: ‘ಕಾಂಗ್ರೆಸ್ ಶಾಸಕರು ಮಾರಾಟಕ್ಕಿಲ್ಲ. ಅವರು ಸ್ವಾಭಿಮಾನಿಗಳು. ₹ 50 ಕೋಟಿ ಅಲ್ಲ, ₹ 100 ಕೋಟಿ ಕೊಟ್ಟರೂ ನಮ್ಮ ಶಾಸಕರು ಯಾರೂ ಮಾರಾಟಕ್ಕಿಲ್ಲ’ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಬಿಜೆಪಿಯವರು ಕಾಂಗ್ರೆಸ್ ಶಾಸಕರಿಗೆ ತಲಾ ₹ 50 ಕೋಟಿ ಆಮಿಷ ಒಡ್ಡಿರುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಹೇಳಿಕೆಗೆ ಶುಕ್ರವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ಮುಖ್ಯಮಂತ್ರಿಯವರು ಹೀಗೆ ಹೇಳಿದ್ದಾರೆಂದರೆ ಅವರ ಬಳಿ ಬಲವಾದ ಸಾಕ್ಷ್ಯ ಇರಬಹುದು. ಅದಕ್ಕೆ ಅವರು ಹೇಳಿರಬಹುದು’ ಎಂದರು. ‘ಏನೇ ಮಾಡಿದರೂ ಬಿಜೆಪಿಯವರ ಕನಸು ನನಸಾಗದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.