ಬೆಳಗಾವಿ: ‘ಸ್ಮಾರ್ಟ್‌ಸಿಟಿ ಯೋಜನೆಯಡಿ ಮಾಡಿದ ಕಾಮಗಾರಿಗೆ ಮಹಾನಗರ ಪಾಲಿಕೆ ಪರಿಹಾರ ಕೊಡುವುದು ಸರಿಯಲ್ಲ. ಇದರಲ್ಲಿ ರಾಜಕೀಯ ಹಿತಾಸಕ್ತಿ ಇದೆ. ಇದರ ಮಹಾನಗರ ಪಾಲಿಕೆಯಲ್ಲಿ ಮಂಗಳವಾರ ಕೈಗೊಂಡ ನಿರ್ಣಯಕ್ಕೆ ನನ್ನ ಸಮ್ಮತಿ ಇಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

‘ನಗರದಲ್ಲಿ ರಸ್ತೆಯೊಂದರ ವಿಸ್ತರಣೆಗಾಗಿ ಭೂ ಸ್ವಾಧೀನ ಮಾಡಿಕೊಳ್ಳಲಾಗಿದೆ. ಇದಕ್ಕೆ ₹20 ಕೋಟಿ ಪರಿಹಾರ ಕೊಡುವಂತೆ ಮಾಲೀಕರು ನ್ಯಾಯಾಲಯ ಮೊರೆ ಹೋಗಿದ್ದರು. ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶ ನೀಡಿದೆ. ಆದರೆ, ಈ ಮೊತ್ತವನ್ನು ಸ್ಮಾರ್ಟ್‌ಸಿಟಿ ಭರಿಸಬೇಕಿತ್ತು. ರಾಜಕೀಯ ಮಾಡಿ ಮಹಾನಗರ ಪಾಲಿಕೆ ಮೇಲೆ ಹೊರಿಸಲಾಗಿದೆ’ ಎಂದು ಅವರು ಬುಧವಾರ ಸುದ್ದಿಗಾರರಿಗೆ ತಿಳಿಸಿದರು.

‘₹35 ಸಾವಿರಕ್ಕೆ ಒಂದು ಚದರ ಅಡಿಯಂತೆ ಪರಿಹಾರ ನಿಗದಿ ಮಾಡಲಾಗಿದೆ. ಆಗಿನ ಪಾಲಿಕೆ ಆಯುಕ್ತರ ಮೇಲೆ ರಾಜಕೀಯ ಒತ್ತಡ ಹೇರಿ ದೊಡ್ಡ ಮೊತ್ತದ ಪರಿಹಾರ ಘೋಷಿಸುವಂತೆ ಮಾಡಲಾಗಿದೆ. ಆಗಿನ ಆಯುಕ್ತರೂ ಸೇರಿ ಪ್ರಕರಣದ ಸಮಗ್ರ ತನಿಖೆ ಮಾಡುವಂತೆ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಲಾಗುವುದು’ ಎಂದರು.

‘ಶಾಸಕರೊಬ್ಬರು ಪ್ರಭಾವ ಬೀರಿ ಇದನ್ನು ಮಾಡಿಸಿದ್ದಾರೆ. ಈಗ ಪಾಲಿಕೆ ಮೇಲೂ ಪ್ರಭಾವ ಬೀರಿ ಅವರೊಬ್ಬರೇ ಪರಿಹಾರ ಕೊಡಿಸುವ ನಿರ್ಧಾರ ಮಾಡಿದ್ದಾರೆ’ ಎಂದು ಅವರು ಪರೋಕ್ಷವಾಗಿ ಶಾಸಕ ಅಭಯ ಪಾಟೀಲ ವಿರುದ್ಧ ಹರಿಹಾಯ್ದರು.

ಇದೇ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡಿದ ಮಹಿಳಾ ಮತ್ತು ಮತ್ತು ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ, ‘ಕೆಲ ರಾಜಕಾರಣಿಗಳ ಹಿಡನ್ ಅಜೆಂಡಾದಿಂದ ಪಾಲಿಕೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಈ ಪ್ರಕರಣದಲ್ಲಿ ಅಧಿಕಾರಿಗಳು ಎಷ್ಟು ತಪ್ಪು ಮಾಡಿದ್ದಾರೋ ಶಾಸಕ ಕೂಡ ಅಷ್ಟೇ ತಪ್ಪು ಮಾಡಿದ್ದಾರೆ’ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.