ಬೆಳಗಾವಿ: ರಾಜಭವನದ ಉದ್ಯಾನ ನಿರ್ವಹಣೆಗೆ 2014–2017ರ ಅವಧಿಯಲ್ಲಿ ರಾಜ್ಯ ಸರ್ಕಾರದ ಬೊಕ್ಕಸದಿಂದ ₹ 3.27 ಕೋಟಿ ವೆಚ್ಚ ಮಾಡಲಾಗಿದೆ.

ಇಲ್ಲಿನ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಅವರು ಮಾಹಿತಿ ಹಕ್ಕು ಕಾಯ್ದೆ (ಆರ್ಟಿಐ)ಯಲ್ಲಿ ಪಡೆದ ದಾಖಲೆಗಳಿಂದ ಈ ಮಾಹಿತಿ ತಿಳಿದುಬಂದಿದೆ. ದಾಖಲೆಗಳನ್ನು ಅವರು ಮಾಧ್ಯಮಕ್ಕೆ ಗುರುವಾರ ಬಿಡುಗಡೆ ಮಾಡಿದ್ದಾರೆ.

‘ಈ ಅವಧಿಯಲ್ಲಿ ಉದ್ಯಾನದ ದಿನಗೂಲಿ ನೌಕರರ ವೇತನಕ್ಕಾಗಿ ₹ 11.59 ಲಕ್ಷ, ರಾಜ್ಯಪಾಲರ ನಿವಾಸ, ಡೈನಿಂಗ್ ಹಾಲ್, ಪ್ರಧಾನ ಕಚೇರಿಯ ಗಣ್ಯ ವ್ಯಕ್ತಿಗಳ ಕೊಠಡಿಯಲ್ಲಿನ ಪಾಟ್ಗಳಿಗೆ ಬಿಡಿ ಹೂವುಗಳ ಖರೀದಿಗೆಂದು ₹ 4.80 ಲಕ್ಷ, ಬ್ರಷ್ ಕಟ್ಟರ್ ಹಾಗೂ ಪವರ್ ಟಿಲ್ಲರ್ ಇಂಧನ ಖರೀದಿಗೆ ₹ 52,428, ತರಕಾರಿ ಬೀಜ, ಹೂವಿನ ಸಸಿಗಳು, ಸಸ್ಯ ಸಂರಕ್ಷಣಾ ಔಷಧಿ ಮತ್ತು ಕೆಂಪು ಮಣ್ಣು ಖರೀದಿಗಾಗಿ ₹ 15.05 ಲಕ್ಷ, ಹೊಸ ತೋಟ ಅಭಿವೃದ್ಧಿ ಹಾಗೂ ತುಂತುರು ನೀರಾವರಿಗಾಗಿ ಕಾಮಗಾರಿಗಾಗಿ 2017ನೇ ಸಾಲಿನಲ್ಲಿ ₹ 2.95 ಕೋಟಿ ವೆಚ್ಚ ಮಾಡಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

‘ಉದ್ಯಾನ ನಿರ್ವಹಣೆಗೆಂದೇ ₹ 3.27 ಕೋಟಿ ವೆಚ್ಚ ಮಾಡಿದ್ದರೂ ರಾಜ್ಯಪಾಲರ ನಿವಾಸ, ಡೈನಿಂಗ್ ಹಾಲ್, ಪ್ರಧಾನ ಕಚೇರಿಯ ಗಣ್ಯ ವ್ಯಕ್ತಿಗಳ ಕೊಠಡಿಯಲ್ಲಿ ಪಾಟ್ಗಳಿಗೆ ಅಲಂಕಾರಕ್ಕಾಗಿ ಬಿಡಿ ಹೂವುಗಳನ್ನು ಖರೀದಿಸಲೆಂದು ಪ್ರತ್ಯೇಕವಾಗಿ ₹ 4.80 ಲಕ್ಷ ವ್ಯಯಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಈ ಬಗ್ಗೆ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.