ನಿರಂತರ ನೀರು ಯೋಜನೆಗೆ ₹100 ಕೋಟಿ ಸುರಿದವರು ಕನಿಷ್ಠ ರಸ್ತೆ ದುರಸ್ತಿ ಮಾಡಿಸಿಲ್ಲ
ಬಿ.ಎಂ. ಶಿರಸಂಗಿ
Published : 21 ಅಕ್ಟೋಬರ್ 2024, 7:06 IST
Last Updated : 21 ಅಕ್ಟೋಬರ್ 2024, 7:06 IST
ಫಾಲೋ ಮಾಡಿ
Comments
ಸವದತ್ತಿಯಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಅವ್ಯವಸ್ಥೆ
ಸವದತ್ತಿ ಪಟ್ಟಣದಲ್ಲಿ ಕುಡಿಯುವ ನೀರಿನ ಕಾಮಗಾರಿಗಾಗಿ ಕಾಂಕ್ರೀಟ್ ರಸ್ತೆ ಅಗೆದು ಹಾಳು ಮಾಡಲಾಗಿದೆ
ಆಟೊ ಚಾಲಕರಿಂದಲೇ ದುರಸ್ತಿ
ಸವದತ್ತಿ ಪಟ್ಟಣದ ಆನಿ ಅಗಸಿಯಲ್ಲಿರುವ ಮಲಪ್ರಭಾ ಆಟೊ ಚಾಲಕರ ಸಂಘದವರೇ ಕಿತ್ತುಹೋದ ರಸ್ತೆಗೆ ಮಣ್ಣು ಹಾಕಿ ಸರಿಪಡಿಸಿದ್ದಾರೆ. ಒಳಚರಂಡಿ ಮಂಡಳಿ ಮತ್ತು ಪುರಸಭೆಗೆ ಇವೆಲ್ಲ ಸಮಸ್ಯೆಗಳನ್ನು ತಿಳಿಸಿದರೂ ಪ್ರಯೋಜನವಾಗುತ್ತಿಲ್ಲ. ಆಟೊಗಳು ಓಡಾಡಲು ರಸ್ತೆಗಳು ಅಯೋಗ್ಯವಾಗಿವೆ. ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಎಚ್ಚರ ವಹಿಸಿ ಸಾಗುವ ಪ್ರಸಂಗವಿದೆ. ಜನಪ್ರತಿನಿಧಿಗಳೂ ಇತ್ತ ಗಮನ ಹರಿಸದ ಕಾರಣ ನಾವೇ ದುರಸ್ತಿ ಮಾಡಿದ್ದೇವೆ ಎಂಬುದು ಚಾಲಕರ ಹೇಳಿಕೆ.