ಬೆಳಗಾವಿ: ‘ತಹಶೀಲ್ದಾರ್ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರುದ್ರಣ್ಣ ಯಡವಣ್ಣವರ ಅವರ ಪ್ರಕರಣದಲ್ಲಿ ನನ್ನ ಆಪ್ತ ಸಹಾಯಕ ಸೋಮು ಬಾಗಿಯಾದ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಈ ವಿಚಾರದಲ್ಲಿ ನಿಷ್ಪಕ್ಷಪಾತ ತನಿಖೆಯಾಗಬೇಕು. ನೊಂದ ಕುಟುಂಬಕ್ಕೆ ನ್ಯಾಯ ಸಿಗಬೇಕು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಪ್ರತಿಕ್ರಿಯಿಸಿದರು.

ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ನಮ್ಮ ಕೆಲಸಕ್ಕೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಪಿ.ಎ.ಗಳನ್ನು ನೇಮಕ ಮಾಡಿಕೊಂಡಿರುತ್ತೇವೆ. ಸಚಿವರಿಗೆ ಹತ್ತು ಹದಿನೈದು ಪಿ.ಎ.ಗಳು ಇರುವುದು ಸಹಜ. ಸೋಮು ಹೆಸರು ಪ್ರಕರಣದಲ್ಲಿರುವುದು ನನಗೆ ಮಾಧ್ಯಮಗಳ ಮೂಲಕವೇ ಗೊತ್ತಾಗಿದೆ. ನಾನು ರುದ್ರಣ್ಣ ಅವರನ್ನು ಯಾವತ್ತೂ ಭೇಟಿಯಾಗಿಲ್ಲ, ಯಾವ ಕೆಲಸಕ್ಕೂ ಸಂಪರ್ಕಿಸಿಲ್ಲ’ ಎಂದರು.
.ಬೆಳಗಾವಿ | ಕಿರುಕುಳ ಆರೋಪ; ತಹಶೀಲ್ದಾರ್ ಕಚೇರಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು.
‘ಇಂಥ ಘಟನೆ ನಡೆಯಬಾರದಿತ್ತು. ರುದ್ರಣ್ಣ ಅವರ ಕುಟುಂಬಕ್ಕೆ ನಾನು ಧೈರ್ಯ ಹೇಳುತ್ತೇನೆ. ಈಗ ಪ್ರಾಥಮಿಕ ತನಿಖೆ ಶುರುವಾಗಿದೆ. ಸತ್ಯಾಸತ್ಯ ಹೊರಬರಲಿ ಎಂಬುದೇ ನನ್ನ ಆಸೆ. ಮಂಗಳವಾರ ಇಡೀ ದಿನ ಕಾರ್ಯಕ್ರಮಗಳಲ್ಲಿ ಇದ್ದ ಕಾರಣ ನನಗೆ ಪ್ರತಿಕ್ರಿಯೆ ನೀಡಲು ಆಗಲಿಲ್ಲ’ ಎಂದೂ ಅವರು ಹೇಳಿದರು.

‘ನೈತಿಕ ಹೊಣೆ ಹೊತ್ತು ನಾನು ರಾಜೀನಾಮೆ ನೀಡಬೇಕು ಎಂದು ಬಿಜೆಪಿಯವರು ಪ್ರತಿಭಟನೆ ಮಾಡಿದ್ದಾರೆ. ಪ್ರತಿಭಟನೆಗೂ ಮುನ್ನ ಅವರು ಪ್ರಕರಣವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ರುದ್ರಣ್ಣ ಎಲ್ಲಿಯೂ ನನ್ನ ಹೆಸರು ಹೇಳಿಲ್ಲ, ಬರೆದಿಲ್ಲ. ಸೋಮು ಹೆಸರಿನ ಜತೆಗೂ ನನ್ನ ಹೆಸರು ಸೇರಿಸಿ ಬಳಸಿಲ್ಲ. ಮೇಲಾಗಿ, ‘ಹೆಬ್ಬಾಳಕರ ಮೇಡಮ್ಗೆ ಯಾವುದೇ ವಿಚಾರ ಗೊತ್ತಿಲ್ಲ’ ಎಂದು ಪತ್ರಕರ್ತರ ಮುಂದೆ ಅವರೇ ಹೇಳಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
.ತಹಶೀಲ್ದಾರ್ ಕಚೇರಿ ಸಿಬ್ಬಂದಿ ಆತ್ಮಹತ್ಯೆ ಪ್ರಕರಣ: ಹೆಬ್ಬಾಳಕರ ರಾಜೀನಾಮೆಗೆ ಆಗ್ರಹ.
‘ಕೆ.ಎಸ್.ಈಶ್ವರಪ್ಪ ಪ್ರಕರಣ ಹಾಗೂ ಈ ಪ್ರಕರಣದಲ್ಲಿ ವ್ಯತ್ಯಾಸ ಇದೆ. ಗುತ್ತಿಗೆದಾರ ಸಂತೋಷ ಪಾಟೀಲ ಅವರು ಈಶ್ವರಪ್ಪ ಅವರ ಹೆಸರು ಬರೆದಿಟ್ಟು, ಕಮಿಷನ್ ಕೇಳಿದ ದಾಖಲೆಗಳನ್ನು ನೀಡಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ, ರುದ್ರಣ್ಣ ನನ್ನ ಬಗ್ಗೆ ಎಲ್ಲೂ ಏನೂ ಹೇಳಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುವ ಹಿಂದಿನ ದಿನ ನನ್ನನ್ನು ಭೇಟಿಯಾಗಲು ಬಂದಿದ್ದರು ಎಂಬುದೂ ನನಗೆ ಗೊತ್ತಿಲ್ಲ. ಪ್ರತಿದಿನ ಸಾವಿರಾರು ಜನ ಬರುತ್ತಾರೆ’ ಎಂದು ಸಚಿವೆ ಹೇಳಿದರು.

‘ಈ ಪ್ರಕರಣದಲ್ಲಿ ಊಹಾಪೋಹಗಳು ಹೆಚ್ಚಾಗುತ್ತಿವೆ. ಅದು ಆಗಬಾರದು. ತಹಶೀಲ್ದಾರ್ ಕಚೇರಿಯಲ್ಲಿ ಸಾಕಷ್ಟು ಅನ್ಯಾಯ ನಡೆಯುತ್ತಿದೆ ಎಂದು ರುದ್ರಣ್ಣ ವಾಟ್ಸ್ಆ್ಯಪ್ ಗ್ರೂಪಿನಲ್ಲಿ ಮೆಸೇಜ್ ಹಾಕಿದ್ದಾರೆ. ಅದರ ಬಗ್ಗೆಯೂ ಸ್ಪಷ್ಟ ತನಿಖೆ ನಡೆಯಬೇಕು’ ಎಂದರು.ಹೆಬ್ಬಾಳಕರ
.ಸಚಿವೆ ಹೆಬ್ಬಾಳಕರ ರಾಜೀನಾಮೆಗೆ ಆಗ್ರಹ.
‘ಈ ಪ್ರಕರಣದ ವಿಚಾರವಾಗಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ‘ಲಕ್ಷ್ಮಿ ಹೆಬ್ಬಾಳಕರ ಪಾಪದ ಕೊಡ ತುಂಬಿದೆ’ ಎಂದು ಹೇಳಿಕೆ ನೀಡಿದ್ದಾರೆ. ಹಿರಿಯರಾದ ಅವರಿಗೆ ಯಾರ ಪಾಪದ ಕೊಡ ತುಂಬಿದೆ ಎಂದು ಗೊತ್ತಾಗಬೇಕಿತ್ತು’ ಎಂದು ತಿರುಗೇಟು ನೀಡಿದರು.

ಲೋಕಾಯುಕ್ತರಿಂದ ಮುಖ್ಯಮಂತ್ರಿ ವಿಚಾರಣೆ ಕುರಿತು ಪ್ರತಿಕ್ರಿಯಿಸಿದ ಅವರು, ‘ಇದೆಲ್ಲ ರಾಜಕೀಯ ಷಡ್ಯಂತ್ರ ಎಂದು ಮೊದಲಿನಿಂದಲೂ ಹೇಳುತ್ತಿದ್ದೇನೆ. ಬಿಜೆಪಿಯವರು ಎಷ್ಟೇ ಸುಣ್ಣ– ಬಣ್ಣ ಬಳಿಯಲಿ. ಅವರ ಪ್ರಯತ್ನ ಸಫಲವಾಗುವುದಿಲ್ಲ’ ಎಂದರು.
.ಲಕ್ಷ್ಮಿ ಹೆಬ್ಬಾಳಕರ ವಜಾ ಮಾಡಿ: ಅಶೋಕ ಒತ್ತಾಯ.
ಪಿ.ಎ.ಗಳನ್ನು ನಂಬುವುದಿಲ್ಲ

‘ಸರ್ಕಾರಿ ನೌಕರಿ ಎಂದಮೇಲೆ ಒತ್ತಡಗಳು ಇದ್ದೇ ಇರುತ್ತವೆ. ಆದರೆ, ರುದ್ರಣ್ಣ ಅವರ ಸಾವು ಸಂಭವಿಸಿದ್ದು ದುಃಖ ತಂದಿದೆ. ಇದರಲ್ಲಿ ಸಚಿವರ ಆಪ್ತ ಸಹಾಯಕ ಆರೋಪಿ ಎಂದು ಹೇಳಲಾಗುತ್ತಿದೆ. ಸೋಮು ಹಣ ಪಡೆದು ವ್ಯವಹಾರ ನಡೆಸಿದ ವಿಚಾರ ನಮಗೇನೂ ಗೊತ್ತಿಲ್ಲ. ನಾವು ಪಿಎಗಳನ್ನು ನಂಬಿ ಕೆಲಸ ಮಾಡುವುದಿಲ್ಲ. ಜನರೊಂದಿಗೆ ನೇರವಾಗಿ ಸಂಪರ್ಕ ಹೊಂದಿದ್ದೇವೆ’ ಎಂದು ವಿಧಾನ ಪರಿಷತ್ ಸದಸ್ಯ, ಲಕ್ಷ್ಮಿ ಅವರ ಸಹೋದರ ಚನ್ನರಾಜ ಹಟ್ಟಿಹೊಳಿ ಹೇಳಿದರು.

‘ಸೋಮು ನಮ್ಮ ಕ್ಷೇತ್ರದ ಹುಡುಗ. ಬಹಳ ವರ್ಷಗಳಿಂದ ಲಕ್ಷ್ಮಿ ಹೆಬ್ಬಾಳಕರ ಅವರೊಂದಿಗೆ ಕೆಲಸ ಮಾಡುತ್ತಿದ್ದಾನೆ. ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಲಿ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ’ ಎಂದರು.
.ಮಹಿಳಾ ಇಲಾಖೆಗೆ ಅನುದಾನ: ಕೇಂದ್ರಕ್ಕೆ ಹೆಬ್ಬಾಳಕರ ಒತ್ತಾಯ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.