ಬೆಳಗಾವಿ: ಜಿಲ್ಲೆಯ ಅಥಣಿಯ ಬಣಜವಾಡ ವಸತಿ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಮೂರನೆ ರ್‍ಯಾಂಕ್ ಪಡೆದಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಗೌರಿ ಸಂಜೀವ ಸೂರ್ಯವಂಶಿ ಅವರು 596 ಅಂಕ ಪಡೆದಿದ್ದಾರೆ. ಕನ್ನಡ, ಭೌತವಿಜ್ಞಾನ, ರಸಾಯನ ವಿಜ್ಞಾನ, ಜೀವ ವಿಜ್ಞಾನ ಹಾಗೂ ಗಣಿತ ವಿಷಯಗಳಲ್ಲಿ ನೂರಕ್ಕೆ 100, ಇಂಗ್ಲಿಷ್‌ನಲ್ಲಿ ಮಾತ್ರ 96 ಅಂಕ ಗಳಿಸಿದ್ದಾರೆ. ಇವರ ತಂದೆ ಪಿಡಿಒ, ತಾಯಿ ಶಿಕ್ಷಕಿ ಆಗಿದ್ದಾರೆ.

ಇದೇ ಕಾಲೇಜಿನ ಜಿ.ಕೆ.ದಿವ್ಯಾ ಅವರು ವಾಣಿಜ್ಯ ವಿಭಾಗದಲ್ಲಿ 594 ಅಂಕ ಪಡೆದು ರಾಜ್ಯಕ್ಕೆ ಮೂರನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಕನ್ನಡ, ಇತಿಹಾಸ, ಅರ್ಥಶಾಸ್ತ್ರ ವಿಷಯಗಳಲ್ಲಿ ನೂರಕ್ಕೆ 100, ಅಕೌಂಟೆನ್ಸಿಯಲ್ಲಿ 99, ಬಿಜಿನೆಸ್ ಸ್ಟಡೀಸ್‌ನಲ್ಲಿ 98, ಇಂಗ್ಲೀಷ್‌ನಲ್ಲಿ 97 ಅಂಕ ಪಡೆದಿದ್ದಾರೆ. ಇವರ ತಂದೆ ಖಾಸಗಿ ಕಂಪನಿಯ ಉದ್ಯೋಗಿ ಆಗಿದ್ದು, ತಾಯಿ ಗೃಹಿಣಿ.

ಸವದತ್ತಿಯ ಕುಮಾರೇಶ್ವರ ಪದವಿಪೂರ್ವ ಕಾಲೇಜಿನ ವಿಜಯಲಕ್ಷ್ಮಿ ಕೊಟ್ರೆಪ್ಪ ಗುಲಗಂಜಿ, ಸವದತ್ತಿ ತಾಲ್ಲೂಕಿನ ಮುನವಳ್ಳಿಯ ಅನ್ನದಾನೇಶ್ವರ ಪದವಿಪೂರ್ವ ಕಾಲೇಜಿನ ಗಂಗವ್ವ ನಾಗೇಶ ಸುಣಧೋಳಿ ಅವರು ಕಲಾ ವಿಭಾಗದಲ್ಲಿ ತಲಾ 592 ಅಂಕ ಪಡೆದ ರಾಜ್ಯಕ್ಕೆ ಐದನೇ ರ್‍ಯಾಂಕ್ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.