ಪರ್ತ್: ಆಸ್ಟ್ರೇಲಿಯಾದಂಥ ಶ್ರೇಷ್ಠ ವೇಗದ ಪಡೆಯೆದುರು ಭಾರತದ ಬ್ಯಾಟಿಂಗ್ ಉತ್ತಮವಾಗಬೇಕಾದರೆ,
ವಿರಾಟ್ ಕೊಹ್ಲಿ ತಮ್ಮ ವೈಭವದ ಆಟಕ್ಕೆ ಮರಳಬೇಕು. ಅದಾಗಲಿಲ್ಲ. ಭಾರತ 150 ರನ್ನಿಗೆ ಉರುಳಿತು. ಭಾರತದ ಬೌಲಿಂಗ್ ಪರಿಣಾಮಕಾರಿ ಎನಿಸಬೇಕಾದರೆ ಜಸ್ಪ್ರೀತ್ ಬೂಮ್ರಾ ಅವರು ಮಿಂಚಬೇಕು. ಅದು ಈಡೇರಿತು. ಬ್ಯಾಟಿಂಗ್ನಲ್ಲಿ ವಿಫಲವಾದರೂ, ಬೌಲಿಂಗ್ ಮೂಲಕ ಭಾರತ ತನ್ನ ಹಿನ್ನಡೆಯನ್ನು ಬಹುತೇಕ ಸರಿದೂಗಿಸಿಕೊಂಡಿತು.

ಬಾರ್ಡರ್–ಗಾವಸ್ಕರ್ ಟ್ರೋಫಿ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಶುಕ್ರವಾರ ಆಸ್ಟ್ರೇಲಿಯಾ 7 ವಿಕೆಟ್ಗೆ 67 ರನ್ ಗಳಿಸಿದ್ದು, ಮೊದಲ ದಿನದ ಕೊನೆಗೆ ಸಂಕಷ್ಟಕ್ಕೆ ಸಿಲುಕಿದೆ. ಒಪ್ಟಸ್ ಕ್ರೀಡಾಂಗಣದಲ್ಲಿ ಮೊದಲ ದಿನವೇ 17 ವಿಕೆಟ್ಗಳು ಉರುಳಿದವು.

ಆಸ್ಟ್ರೇಲಿಯಾದ ವೇಗದ ದಾಳಿಯೆದು ಭಾರತದ ಇನಿಂಗ್ಸ್ 50 ಓವರುಗಳಲ್ಲಿ ಕೊನೆಗೊಂಡಿತು. ಜೋಶ್ ಹ್ಯಾಜಲ್ವುಲ್ (29ಕ್ಕೆ4), ಮಿಚೆಲ್ ಸ್ಟಾರ್ಕ್ (14ಕ್ಕೆ2), ಪ್ಯಾಟ್ ಕಮಿನ್ಸ್ (67ಕ್ಕೆ2) ಮತ್ತು ಮಿಚೆಲ್ ಮಾರ್ಷ್ (12ಕ್ಕೆ2) ಇದಕ್ಕೆ ಕಾರಣರಾದರು.

ಆದರೆ ಇದೇ ಮದ್ದನ್ನು ಪ್ರವಾಸಿ ತಂಡ ತಮಗೂ ಅರೆಯಬಹುದೆಂಬುದು
ತಿಳಿಯಲು ಆತಿಥೇಯರಿಗೆ ಹೆಚ್ಚು ಸಮಯ ಹಿಡಿಯಲಿಲ್ಲ. ಬೂಮ್ರಾ (17ಕ್ಕೆ4), ಅನುಕೂಲಕರ ಪಿಚ್ನಲ್ಲಿ ಶ್ರೇಷ್ಠ ಮಟ್ಟದಲ್ಲಿ ಬೌಲಿಂಗ್ ಮಾಡಿದರು. ಮೊಹಮ್ಮದ್ ಸಿರಾಜ್ (17ಕ್ಕೆ2) ಕೂಡ ಹಲವು ದಿನಗಳ ನಂತರ ಲಯಕ್ಕೆ ಮರಳಿದರು. ಪದಾರ್ಪಣೆ ಮಾಡಿದ ಹರ್ಷಿತ್ ರಾಣಾ (33ಕ್ಕೆ1) ಕೂಡ ಸಾಮರ್ಥ್ಯ ತೋರಿದರು. ಆದರೆ ಅವರಲ್ಲಿ ಅನುಭವದ ಕೊರತೆಯೂ ಕಂಡಿತು. ಹೀಗಾಗಿ ಸುಲಭ ರನ್ಗಳನ್ನೂ ಬಿಟ್ಟುಕೊಟ್ವರು. ಇದು ಅಲ್ಪಸ್ಕೋರುಗಳ ಪಂದ್ಯದಲ್ಲಿ ನಿರ್ಣಾಯಕ ಕೂಡ. ಔಟ್ಫೀಲ್ಡ್ ನಿಧಾನಗತಿಯಲ್ಲಿದ್ದುದೂ ರನ್ವೇಗ ಕುಂಠಿತಗೊಳಿಸಿತು.

ನಿರ್ಣಾಯಕ ಮೇಲುಗೈ ತಮಗೆ ದೊರೆತಿದೆ ಎಂದು ಯಾವ ತಂಡವೂ ಹೇಳುವಂತಿರಲಿಲ್ಲ. ಆದರೆ ಭಾರತ ಹೆಚ್ಚು ತೃಪ್ತಿಯಿಂದ ದಿನ ಮುಗಿಸಿತು. ಆಸ್ಟ್ರೇಲಿಯಾ, ಭಾರತದ ಮೊತ್ತಕ್ಕಿಂತ ಇನ್ನೂ 83 ರನ್ ಹಿಂದೆಯಿದೆ. ಅಲೆಕ್ಸ್ ಕ್ಯಾರಿ (ಔಟಾಗದೇ 19) ಜೊತೆಗೆ ಮಿಚೆಲ್ ಸ್ಟಾರ್ಕ್ (ಔಟಾಗದೇ 6)
ಕ್ರೀಸ್ನಲ್ಲಿದ್ದಾರೆ.

ಭಾರತ ಈ ಪಂದ್ಯಕ್ಕೆ ವಾಷಿಂಗ್ಟನ್ ಸುಂದರ್ ಅವರಿಗೆ ಅವಕಾಶ ನೀಡಲು ಅನುಭವಿ ಸ್ಪಿನ್ನರ್ಗಳಾದ ಆರ್.ಅಶ್ವಿನ್ ಮತ್ತು ರವೀಂದ್ರ ಜಡೇಜ (ಇವರಿಬ್ಬರು 850 ವಿಕೆಟ್ ಹಂಚಿಕೊಂಡಿದ್ದಾರೆ) ಅವರನ್ನು ಕೈಬಿಟ್ಟಿತು.

ಪಿಚ್ ಬೌಲರ್ಗಳಿಗೆ ಹಿತಕರವಾಗಿದ್ದರೂ, ಬ್ಯಾಟರ್ಗಳಿಗೆ ತೀರಾ ನಿರಾಶೆ ಮೂಡಿಸುವ ರೀತಿಯಲ್ಲಿರಲಿಲ್ಲ. ಕೆ.ಎಲ್.ರಾಹುಲ್ (26, 73ಎ) ಮತ್ತು ರಿಷಭ್ ಪಂತ್ (37, 78ಎ) ಮಾತ್ರವಲ್ಲ, ಪದಾರ್ಪಣೆ ಮಾಡಿದ ನಿತೀಶ್ ರೆಡ್ಡಿ (41, 59ಎ) ಅವರು ಇಲ್ಲಿ ವಿವೇಚನೆ ಬಳಸಿದರೆ ರನ್ ಗಳಿಸುವುದು ತೀರಾ ಕಷ್ಟವೇನಲ್ಲ ಎಂದು ತೋರಿಸಿಕೊಟ್ಟರು.

ಜಾಣ್ಮೆಯಿಂದ ಬೌಲಿಂಗ್ ಮಾಡಿದರೆ ಫಲ ಸಿಕ್ಕೇಸಿಗುತ್ತದೆ ಎಂಬುದಕ್ಕೆ ಹೇಜಲ್ವುಡ್ ನಿದರ್ಶನವಾದರು. ಅವರು ಕರಾರುವಾಕ್ ಆಗಿದ್ದರು. ಕೊಹ್ಲಿ ಅವರ ವಿಕೆಟ್ ಕೂಡ ಅವರ ಪಾಲಾಯಿತು. ಕ್ರೀಸ್ನಿಂದ ಹೊರಗೆ ಇದ್ದ ಕೊಹ್ಲಿ (5, 12ಎ), ಶರವೇಗದ ಎಸೆತವನ್ನು ಬಿಡಲು ಮನಸ್ಸು ಮಾಡಿದರೂ, ಅಷ್ಟರಲ್ಲಿ ಚೆಂಡು ಬ್ಯಾಟಿಗೆ ಮುತ್ತಿಕ್ಕಿ ಮೊದಲ ಸ್ಲಿಪ್ನಲ್ಲಿದ್ದ ಉಸ್ಮಾನ್ ಖ್ವಾಜಾ ಕೈಸೇರಿತು.

ದೇವದತ್ತ ಪಡಿಕ್ಕಲ್ (0, 29ಎ) ಅವರು ರಕ್ಷಣಾತ್ಮಕವಾಗಲು ಹೋಗಿ ದಂಡತೆತ್ತರು. ಆಸ್ಟ್ರೇಲಿಯಾದ ಕಡೆ ಮಾರ್ನಸ್ ಲಾಬುಷೇನ್ (2, 52ಎ) ಕಥೆ ಇದಕ್ಕಿಂತ ಭಿನ್ನವಾಗಿರಲಿಲ್ಲ.

ಭಾರತವನ್ನು ಅಲ್ಪಮೊತ್ತಕ್ಕೆ ಉರುಳಿಸಿದ ನಂತರ ಆಸ್ಟ್ರೇಲಿಯಾಕ್ಕೆ ಉತ್ತಮ ಮೊತ್ತ ಗಳಿಸಲು ಸುವರ್ಣಾವಕಾಶವಿತ್ತು. ಆದರೆ ಬೂಮ್ರಾ ನೇತೃತ್ವದ ಬೌಲರ್ಗಳ ಪಡೆ ಇದಕ್ಕೆ ಅವಕಾಶ ನೀಡಲಿಲ್ಲ. ಹೀಗಾಗಿ ತಂಡ ದಿನದಾಟದಲ್ಲಿ ಸ್ವಲ್ಪವಾದರೂ ಮೇಲುಗೈ ಸಾಧಿಸಿತು.

ಬಾರ್ಡರ್–ಗಾವಸ್ಕರ್ ಟ್ರೋಫಿ 1996ರಲ್ಲಿ ಆರಂಭವಾದ ನಂತರ, ಮೊದಲ ಬಾರಿ ಈ ದಿಗ್ಗಜರು (ಅಲನ್ ಬಾರ್ಡರ್ ಮತ್ತು ಸುನಿಲ್ ಗಾವಸ್ಕರ್) ಟಾಸ್ಗೆ ಮೊದಲು ಟ್ರೋಫಿಯನ್ನು ಮೈದಾನಕ್ಕೆ ತಂದರು.

ಭಾರತ: ಮೊದಲ ಇನಿಂಗ್ಸ್: 150
(49.4 ಓವರ್ಗಳಲ್ಲಿ)

ಜೈಸ್ವಾಲ್ ಸಿ ಮೆಕ್ಸ್ವೀನಿ ಬಿ ಸ್ಟಾರ್ಕ್ 0 (8ಎ)

ರಾಹುಲ್ ಸಿ ಕ್ಯಾರಿ ಬಿ ಸ್ಟಾರ್ಕ್ 26 (74ಎ, 4x3)

ಪಡಿಕ್ಕಲ್ ಸಿ ಕ್ಯಾರಿ ಬಿ ಹ್ಯಾಜಲ್ವುಡ್ 0 (23ಎ)

ಕೊಹ್ಲಿ ಸಿ ಖ್ವಾಜಾ ಬಿ ಹ್ಯಾಜಲ್ವುಡ್ 5 (12ಎ)

ರಿಷಭ್ ಸಿ ಸ್ಮಿತ್ ಬಿ ಕಮಿನ್ಸ್ 37 (78ಎ, 4x3, 6x1)

ಜುರೇಲ್ ಸಿ ಲಾಬುಷೇನ್ ಬಿ ಮಾರ್ಷ್ 11 (20ಎ, 4x2)

ವಾಷಿಂಗ್ಟನ್ ಸಿ ಕ್ಯಾರಿ ಬಿ ಮಾರ್ಷ್ 4 (15ಎ)

ನಿತೀಶ್ ಕುಮಾರ್ ಸಿ ಖ್ವಾಜಾ ಬಿ ಕಮಿನ್ಸ್ 41 (59ಎ, 4x6, 6x1)

ಹರ್ಷಿತ್ ಸಿ ಲಾಬುಷೇನ್ ಬಿ ಹ್ಯಾಜಲ್ವುಡ್ 7 (5ಎ, 4x1)

ಬೂಮ್ರಾ ಸಿ ಕ್ಯಾರಿ ಬಿ ಹ್ಯಾಜಲ್ವುಡ್ 8 (8ಎ, 6x1)

ಮೊಹಮ್ಮದ್ ಸಿರಾಜ್ ಔಟಾಗದೇ 0 (0ಎ)

ಇತರೆ: 11 (ಬೈ 4, ಲೆಗ್ಬೈ 1, ನೋಬಾಲ್ 4, ವೈಡ್ 2)

ವಿಕೆಟ್ ಪತನ: 1-5 (ಯಶಸ್ವಿ ಜೈಸ್ವಾಲ್, 2.1), 2-14 (ದೇವದತ್ತ ಪಡಿಕ್ಕಲ್, 10.6), 3-32 (ವಿರಾಟ್ ಕೊಹ್ಲಿ, 16.2), 4-47 (ಕೆ.ಎಲ್.ರಾಹುಲ್, 22.2), 5-59 (ಧ್ರುವ್ ಜುರೇಲ್ , 27.5), 6-73 (ವಾಷಿಂಗ್ಟನ್ ಸುಂದರ್, 31.4), 7-121 (ರಿಷಭ್ ಪಂತ್, 45.5), 8-128 (ಹರ್ಷಿತ್ ರಾಣಾ, 46.4), 9-144 (ಜಸ್ಪ್ರೀತ್ ಬೂಮ್ರಾ, 48.6), 10-150 (ನಿತೀಶ್ ಕುಮಾರ್ ರೆಡ್ಡಿ, 49.4)

ಬೌಲಿಂಗ್: ಮಿಚೆಲ್ ಸ್ಟಾರ್ಕ್ 11–3–14–2, ಜೋಶ್ ಹ್ಯಾಜಲ್ವುಡ್ 13–5–29–4, ಪ್ಯಾಟ್ ಕಮಿನ್ಸ್ 15.4–2–67–2, ನೇಥನ್ ಲಯನ್ 5–1–23–0, ಮಿಚೆಲ್ ಮಾರ್ಷ್ 5–1–12–2

ಆಸ್ಟ್ರೇಲಿಯಾ: 7ಕ್ಕೆ 67 (27 ಓವರ್ಗಳಲ್ಲಿ)

ಖ್ವಾಜಾ ಸಿ ಕೊಹ್ಲಿ ಬಿ ಬೂಮ್ರಾ 8 (19ಎ, 4x1)

ಮೆಕ್ಸ್ವೀನಿ ಎಲ್ಬಿಡಬ್ಲ್ಯು ಬಿ ಬೂಮ್ರಾ 10 (13ಎ, 4x2)

ಲಾಬುಷೇನ್ ಎಲ್ಬಿಡಬ್ಲ್ಯು ಬಿ ಸಿರಾಜ್ 2 (52ಎ)

ಸ್ಮಿತ್ ಎಲ್ಬಿಡಬ್ಲ್ಯು ಬಿ ಬೂಮ್ರಾ 0 (1ಎ)

ಟ್ರಾವಿಸ್ ಹೆಡ್ ಬಿ ರಾಣಾ 11 (13ಎ, 4x2)

ಮಾರ್ಷ್ ಸಿ ರಾಹುಲ್ ಬಿ ಸಿರಾಜ್ 6 (19ಎ, 4x1)

ಅಲೆಕ್ಸ್ ಕ್ಯಾರಿ ಔಟಾಗದೇ 19 (28ಎ, 4x3)

ಕಮಿನ್ಸ್ ಸಿ ಪಂತ್ ಬಿ ಬೂಮ್ರಾ 3 (5ಎ)

ಮಿಚೆಲ್ ಸ್ಟಾರ್ಕ್ ಔಟಾಗದೇ 6 (14ಎ, 4x1)

ಇತರೆ: 2 (ನೋಬಾಲ್ 2)

ವಿಕೆಟ್ ಪತನ: 1-14 (ನೇಥನ್ ಮೆಕ್ಸ್ವೀನಿ, 2.3), 2-19 (ಉಸ್ಮಾನ್ ಖ್ವಾಜಾ, 6.4), 3-19
(ಸ್ಟೀವನ್ ಸ್ಮಿತ್, 6.5), 4-31 (ಟ್ರಾವಿಸ್ ಹೆಡ್, 11.1), 5-38 (ಮಿಚೆಲ್ ಮಾರ್ಷ್, 16.5), 6-47 (ಮಾರ್ನಸ್ ಲಾಬುಷೇನ್, 20.6), 7-59
(ಪ್ಯಾಟ್ ಕಮಿನ್ಸ್, 24.2)

ಬೌಲಿಂಗ್: ಜಸ್ಪ್ರೀತ್ ಬೂಮ್ರಾ 10–3–17–4, ಮೊಹಮ್ಮದ್ ಸಿರಾಜ್ 9–6–17–2,
ಹರ್ಷಿತ್ ರಾಣಾ 8–1–33–1

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.