ಬೆಳಗಾವಿ: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸಂಸದೆ ಮಂಗಲಾ ಸುರೇಶ ಅಂಗಡಿ ಪುತ್ರಿಯರ ಜೊತೆ ಬಂದು ಮತದಾನ ಮಾಡಿದರು.

ವಾರ್ಡ್ ನಂ.17ರ ಸದಾಶಿವ ನಗರದ ಮತಗಟ್ಟೆ ಕೇಂದ್ರ 110ರಲ್ಲಿ ಪುತ್ರಿಯರಾದ ಶ್ರದ್ಧಾ ಶೆಟ್ಟರ್ ಮತ್ತು ಸ್ಫೂರ್ತಿ ಪಾಟೀಲ ಜೊತೆ ಬಂದು ಹಕ್ಕು ಚಲಾಯಿಸಿದರು.

ನಂತರ ಮಾತನಾಡಿದ ಸಂಸದೆ, ‘ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀಡಿರುವ ಅಭಿವೃದ್ಧಿ ಯೋಜನೆಗಳನ್ನು ನೋಡಿ ಜನ ಬೆಂಬಲ ನೀಡಿದ್ದಾರೆ. ಮಹಾನಗರ ಪಾಲಿಕೆ ಮೇಲೆ ಈ ಬಾರಿ ಬಿಜೆಪಿ ಧ್ವಜ ಹಾರಲಿದೆ. 45ಕ್ಕೂ ಹೆಚ್ಚು ಸ್ಥಾನಗಳನ್ನು ನಮ್ಮ ಪಕ್ಷ ಗೆಲ್ಲಲಿದೆ’ ಎಂದರು.

‘ಕೊರೊನಾದಿಂದಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿ ಹೋಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.