ಬೆಳಗಾವಿ: ತಾಲ್ಲೂಕಿನ ಸಾಂಬ್ರಾದ ಏರ್‌ಮೆನ್ ತರಬೇತಿ ಶಾಲೆಯ 153 ಯುವತಿಯರು ಶನಿವಾರ ಅಗ್ನಿವೀರ ವಾಯುಸೇನೆಗೆ ಸೇರಿದರು. ಇದು ದೇಶದ ಮೊದಲ ಮಹಿಳಾ ತಂಡ.

ಮಹಿಳೆಯರು ಅಧಿಕಾರಿಗಳಾಗಿ ಸೇನೆಯಲ್ಲಿದ್ದರು. ಆದರೆ, ‘ಅಗ್ನಿಪಥ’ ಯೋಜನೆಯಡಿ ನೇಮಕಗೊಂಡ 153 ಮಹಿಳಾ ಅಗ್ನಿವೀರವಾಯು ಪ್ರಶಿಕ್ಷಣಾರ್ಥಿಗಳ ಮೊದಲ ತಂಡಕ್ಕೆ ಇಲ್ಲಿ 22 ವಾರ ಕಠಿಣ ತರಬೇತಿ ನೀಡಲಾಯಿತು.

153 ಮಹಿಳಾ ಮತ್ತು 2,127 ಪುರುಷ ಅಗ್ನಿವೀರವಾಯು ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಆಕರ್ಷಕವಾಗಿ ನಡೆಯಿತು. ವಿವಿಧ ಟ್ರೇಡ್‌ಗಳ ಅನುಸಾರ ಎಲ್ಲರೂ 8 ವಾರ ಮತ್ತೊಂದು ಹಂತದ ತರಬೇತಿ ಪಡೆದು, ಕರ್ತವ್ಯಕ್ಕೆ ಸೇರ್ಪಡೆ ಆಲಿದ್ದಾರೆ.

ಆರಂಭದಲ್ಲಿ ಕಠಿಣ ಎನಿಸಿತು: ‘ಆರಂಭಿಕ ಹಂತದಲ್ಲಿ ಅಗ್ನಿವೀರವಾಯು ತರಬೇತಿ ಕಠಿಣವೆನಿಸಿದರೂ ನಂತರ ಹೊಂದಾಣಿಕೆಯಾಯಿತು. ಶಿಕ್ಷಕಿಯಾಗುವ ಕನಸಿತ್ತು. ಆದರೆ, ಈಗ ಅಗ್ನಿವೀರವಾಯು ಸೇರುತ್ತಿರುವುದಕ್ಕೆ ಹೆಮ್ಮೆಯಿದೆ’ ಎಂದು ಉತ್ತರ ಪ್ರದೇಶದ ಆಯುಷಿ ಗುಪ್ತಾ ‘ಪ‍್ರಜಾವಾಣಿ’ಗೆ ತಿಳಿಸಿದರು.

ರಾಜಸ್ಥಾನದ ಪ್ರಿಯಾಂಕಾ ಬಡಸರಾ ಮಾತನಾಡಿ, ‘ನಮ್ಮದು ಸೈನಿಕರ ಕುಟುಂಬ. ಕುಟುಂಬದಲ್ಲಿ 13 ಮಂದಿ ಸೇನೆಯಲ್ಲಿದ್ದಾರೆ. ದೇಶಸೇವೆ ಮಾಡಬೇಕು ಎಂಬ ಸೆಳೆತ ಬಾಲ್ಯದಿಂದ ಇತ್ತು. ಕನಸು ಸಾಕಾರವಾಗಿದ್ದಕ್ಕೆ ಖುಷಿಯಿದೆ’ ಎಂದರು.

‘ಮಗಳು ಆಶಿ 6ನೇ ತರಗತಿ ಓದುತ್ತಿದ್ದಾಗಲೇ ಪತಿ ಮೃತಪಟ್ಟರು. ಹಾಗಾಗಿ ಕುಟುಂಬ ಆರ್ಥಿಕ ಬವಣೆಗೆ ಸಿಲುಕಿತು. ಆದರೂ ಛಲ ಬಿಡದ ಮಗಳು ಕೆಲಸ ಮಾಡುತ್ತಲೇ ಓದಿದಳು. ಓದಿಗೆ ತಾನೇ ಹಣ ಹೊಂದಿಸಿಕೊಂಡಳು. ಆಕೆ ಈಗ ಅಗ್ನಿವೀರವಾಯು ಆಗಿ ಹೊರಹೊಮ್ಮಿರುವುದು ಖುಷಿ ತಂದಿದೆ. ನನ್ನ ನೋವುಗಳನ್ನೆಲ್ಲ ಮರೆಸಿದೆ’ ಎಂದು ಬಿಹಾರದ ಅಂಜುದೇವಿ ಶರ್ಮಾ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.