ಅಥಣಿ: ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾದ್ದರಿಂದ, ತಾಲ್ಲೂಕಿನ ಝುಂಜರವಾಡ ಹಾಗೂ ಜಮಖಂಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಶುಕ್ರವಾರ ಜಲಾವೃತವಾಗಿದೆ.

ನದಿಯ ಹಿನ್ನೀರಿನಿಂದ ಝುಂಜರವಾಡ–ತುಬಚಿ ರಸ್ತೆ ಮೇಲೆ ನೀರು ಹರಿಯುತ್ತಿದ್ದು, ಅವಳಿ ತಾಲ್ಲೂಕಿನ ಸಂಪರ್ಕ ಕಡಿತಗೊಂಡಿದ್ದರಿಂದ ಜನರು ಪರದಾಡುವಂತಾಗಿದೆ.

ತುಬಚಿ– ಝುಂಜರವಾಡ ಗ್ರಾಮಗಳಿಗೆ ಒಂದು ಕಿ.ಮೀ. ಬದಲಿಗೆ 10 ಕಿಲೋ ಮೀಟರ್ ಸುತ್ತಿಕೊಂಡು ಬರುವ ಅನಿವಾರ್ಯ ಎದುರಾಗಿದೆ.

ಅಥಣಿ– ಝುಂಜರವಾಡ ಮಾರ್ಗವಾಗಿ ಬಾಗಲಕೋಟೆ– ಜಮಖಂಡಿ ಸಂಪರ್ಕಕ್ಕೆ 15 ಕಿ.ಮೀ. ಬದಲಿಗೆ ಈಗ 40 ಕಿಲೋ ಮೀಟರ್ ಪ್ರಯಾಣಿಸಬೇಕು. ಸಾವಳಗಿ ಮಾರ್ಗವಾಗಿ ಜಮಖಂಡಿಗೆ ಹೋಗಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.