ಬೆಂಗಳೂರು:ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಲೋಕದ ಆಗುಹೋಗುಗಳ ಬಗ್ಗೆ ಒಂದೆಡೆ ಚಿಂತನ– ಮಂಥನ ನಡೆದರೆ, ಇನ್ನೊಂದೆಡೆ ಹೊಸ ಪುಸ್ತಕಗಳ ಹೂರಣಗಳ ಬಗ್ಗೆ ಅವಲೋಕನ ನಡೆಯಿತು.ಏಕಕಾಲದಲ್ಲಿ ನಾಲ್ಕು ವೇದಿಕೆಗಳಲ್ಲಿ ನಡೆದ ವಿಚಾರಗೋಷ್ಠಿಗಳು, ಸಾಹಿತ್ಯಾಸಕ್ತರನ್ನು ತನ್ನಡೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾದವು.

ಬೆಂಗಳೂರು ಸಾಹಿತ್ಯ ಉತ್ಸವದ 11ನೇ ಆವೃತ್ತಿಗೆ ಶನಿವಾರ ಚಾಲನೆ ದೊರೆಯಿತು. ನಗರದ ವಿವಿಧೆಡೆಯಿಂದ ಬಂದ ಸಾಹಿತ್ಯಾಸಕ್ತರು, ಬೆಳಿಗ್ಗೆಯಿಂದ ಸಂಜೆಯವರೆಗೆ ಉತ್ಸಾಹದಿಂದ ಗಹನವಾದ ಚರ್ಚೆಗಳನ್ನು ಆಲಿಸಿದರು.ದೇಶದ ವಿವಿಧೆಡೆಗಳಿಂದ ಬಂದಿದ್ದ ವಿದ್ವಾಂಸರು, ಲೇಖಕರು ಹಾಗೂ ವಿವಿಧ ಕ್ಷೇತ್ರಗಳ ಪ್ರಮುಖರು ಹಂಚಿಕೊಂಡ ಹೊಳಹುಗಳ ಬೆಳಕಿನೊಂದಿಗೆ ಈ ಉತ್ಸವ ಕಳೆಗಟ್ಟಿತು. ತಮ್ಮಿಷ್ಟದ ಸಾಹಿತಿಗಳ ಮಾತುಗಳನ್ನು ಆಲಿಸಿದ ಅಭಿಮಾನಿ ಬಳಗ, ಪುಸ್ತಕಗಳಿಗೆ ಅವರ ಹಸ್ತಾಕ್ಷರಗಳನ್ನು ಪಡೆದು ಸಂಭ್ರಮಿಸಿತು.

ಕನ್ನಡ ಸೇರಿ ವಿವಿಧ ಭಾಷೆಗಳಹೊಸ ಪುಸ್ತಕಗಳ ಖರೀದಿ ಭರಾಟೆಯೂ ಜೋರಾಗಿ ನಡೆಯಿತು.ಸಾಹಿತ್ಯ, ಸಂಸ್ಕೃತಿ, ಇತಿಹಾಸ, ಕಲೆ, ಸಂಗೀತ, ಸಿನಿಮಾ, ಕ್ರೀಡೆಗೆ ಸಂಬಂಧಿಸಿದ ಗೋಷ್ಠಿಗಳಲ್ಲಿ ದೇಶದ ವಿವೆಧೆಡೆಯಿಂದ ಬಂದ ವಿದ್ವಾಂಸರು ವಿಷಯ ಮಂಡಿಸಿದರು.

ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕದ ಪ್ರಮುಖರು, ಓದುಗರು, ಪ್ರಕಾಶಕರು, ವಿದ್ಯಾರ್ಥಿಗಳು ಮತ್ತು ಯುವ ವೃತ್ತಿಪರರು ಒಂದೆಡೆ ಸೇರಿಸಿ, ವಿಚಾರ ವಿನಿಮಯ ಮಾಡಲು
ಉತ್ಸವದ ವೇದಿಕೆ ಸಹಕಾರಿಯಾಯಿತು.ಮಕ್ಕಳಿಗೆ ಪ್ರತ್ಯೇಕವಾಗಿ ಎರಡು ವೇದಿಕೆಗಳನ್ನು ರೂಪಿಸಲಾಗಿತ್ತು. ಮಕ್ಕಳ ಜತೆಗೆ ಸಂಭಾಷಣೆ ನಡೆಸಿದ ಲೇಖಕರು, ಕಥೆಗಳನ್ನು ಹೇಳಿ ರಂಜಿಸಿದರು.

ಅಮರ ಚಿತ್ರಕಥಾ ರಸಪ್ರಶ್ನೆ, ಮನರಂಜನೆಯ ಕಾರ್ಯಕ್ರಮಗಳನ್ನೂ ಮಕ್ಕಳಿಗಾಗಿ ರೂಪಿಸಲಾಗಿತ್ತು. ಇದರಿಂದಾಗಿ ವಿವಿಧ ವಯೋಮಾನದ ಮಕ್ಕಳು ಆಟಗಳನ್ನು ಆಡಿ ಸಂಭ್ರಮಿಸಿದರು.

ಭಾನುವಾರವೂ ಬೆಳಿಗ್ಗೆ 10ರಿಂದ ಸಂಜೆ 7 ಗಂಟೆಯವರೆಗೆ ಲಲಿತ್ ಅಶೋಕ್ ಹೋಟೆಲ್ ಆವರಣದ ನಾಲ್ಕು ವೇದಿಕೆಯಲ್ಲಿವಿಚಾರಗೋಷ್ಠಿಗಳು ನಡೆಯಲಿವೆ. ವಿವಿಧ ವಿಷಯಗಳ ಬಗ್ಗೆ ತಜ್ಞರು ಚರ್ಚಿಸಲಿದ್ದಾರೆ. ಪ್ರವೇಶ ಉಚಿತ ಇರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.