ಬೆಂಗಳೂರು: ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ಈರುಳ್ಳಿ ಉತ್ತಮ ಇಳುವರಿ ಬಂದಿರುವುದರಿಂದ ಈರುಳ್ಳಿ ಬೆಲೆ ಕುಸಿತವಾಗಿದೆ. ಬೆಂಗಳೂರಿನ ಯಶವಂತಪುರ ಎಪಿಎಂಸಿಯಲ್ಲಿ ಮಂಗಳವಾರ ಸಣ್ಣ ಈರುಳ್ಳಿ ಪ್ರತಿ ಕೆ.ಜಿ.ಗೆ ₹3 ಹಾಗೂ ದೊಡ್ಡ ಈರುಳ್ಳಿ ₹14 ರವರೆಗೆ ಮಾರಾಟವಾಯಿತು.

ಮಹಾರಾಷ್ಟ್ರದಿಂದ ಹೆಚ್ಚಿನ ಪ್ರಮಾಣದಲ್ಲಿ ಬೆಂಗಳೂರಿನ ಮಾರುಕಟ್ಟೆಗೆ ಈರುಳ್ಳಿ ಆವಕವಾಗುತ್ತಿದೆ. ಬೇಡಿಕೆ ಇಲ್ಲದಿರುವುದರಿಂದ ವ್ಯಾಪಾರಿಗಳಿಗೆ ಲಾಭವಿಲ್ಲದೆ ಸಂಕಷ್ಟ ಅನುಭವಿಸಿದರೆ, ಮತ್ತೊಂದು ಕಡೆ ಮಾರುಕಟ್ಟೆಗೆ ಈರುಳ್ಳಿ ತಂದ ರೈತರು ಕಡಿಮೆ ಬೆಲೆಗೆ ಮಾರಾಟ ಮಾಡಿ ನಷ್ಟ ಅನುಭವಿಸುತ್ತಿದ್ದಾರೆ.

‘ಮಂಗಳವಾರ ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ 42,647 ಚೀಲಗಳು (ತಲಾ 50 ಕೆ.ಜಿಯ) ಪೂರೈಕೆಯಾಗಿವೆ. ಮಹಾರಾಷ್ಟ್ರ ಬಿಗ್ ಸೂಪರ್ ಈರುಳ್ಳಿ ಒಂದು ಕ್ವಿಂಟಲ್ಗೆ ₹1,300, ಮುಕ್ಕಲ್ ಈರುಳ್ಳಿ ಕ್ವಿಂಟಲ್ಗೆ ₹1,000, ಮಧ್ಯಮ ಗಾತ್ರದ ಈರುಳ್ಳಿ ಕ್ವಿಂಟಲ್ಗೆ ₹800, ಗೋಲ್ಟಾ ಈರುಳ್ಳಿ ಕ್ವಿಂಟಲ್ಗೆ ₹500, ಗೊಲ್ಟಿ ಈರುಳ್ಳಿ ಕ್ವಿಂಟಲ್ಗೆ ₹300, ಜೋಡ್ ಕ್ವಿಂಟಲ್ಗೆ ₹500 ರಂತೆ ಮಾರಾಟವಾಗಿವೆ. ಕರ್ನಾಟಕ ನಿಪ್ಪಾಣಿ ಈರುಳ್ಳಿ ಕ್ವಿಂಟಲ್ಗೆ ₹1,000 ಮತ್ತು ಚಿತ್ರದುರ್ಗದ ಈರುಳ್ಳಿ ಕ್ವಿಂಟಲ್ಗೆ ₹300 ರಂತೆ ಮಾರಾಟವಾಗಿದೆ’ ಎಂದು ಎಪಿಎಂಸಿ ಅಧಿಕಾರಿಗಳು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.