ಬೆಂಗಳೂರು: ಬಾಣಸವಾಡಿ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರನ್ನು ಚಾಕುವಿನಿಂದ ಇರಿದು ಭಾನುವಾರ ರಾತ್ರಿ ಕೊಲೆ ಮಾಡಲಾಗಿದೆ.

'ಕೊಲೆಯಾದ ವ್ಯಕ್ತಿ ಹೆಸರು ಗೊತ್ತಾಗಿಲ್ಲ. ಅವರದ್ದು 35 ವಯಸ್ಸಿರಬಹುದು. ಕೃತ್ಯ ಎಸಗಿದ್ದು ಆಫ್ರಿಕಾ ಪ್ರಜೆ ಎಂಬ ಮಾಹಿತಿ ಸಿಕ್ಕಿದೆ' ಎಂದು ಪೊಲೀಸರು ಹೇಳಿದರು.

'ಕುಳ್ಳಪ್ಪ ವೃತ್ತದಲ್ಲಿ ವ್ಯಕ್ತಿ ಹಾಗೂ ಆಫ್ರಿಕಾ ಪ್ರಜೆಗಳು ನಡೆದುಕೊಂಡು ಹೊರಟಿದ್ದರು. ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಜಗಳ ಶುರುವಾಗಿತ್ತು. ಅದೇ ಸಂದರ್ಭದಲ್ಲಿ ಆಫ್ರಿಕಾ ಪ್ರಜೆ, ಚಾಕುವಿನಿಂದ ವ್ಯಕ್ತಿಯ ದೇಹದ ಹಲವೆಡೆ ಇರಿದಿದ್ದ. ರಕ್ತಸ್ರಾವದಿಂದ ವ್ಯಕ್ತಿ ಮೃತಪಟ್ಟಿದ್ದಾನೆ' ಎಂದೂ ತಿಳಿಸಿದರು. 'ಕೊಲೆಯಾದ ವ್ಯಕ್ತಿ ಹಾಗೂ ಆರೋಪಿ, ಪರಿಚಯಸ್ಥರೆಂದು ತಿಳಿದುಬಂದಿದೆ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಳಿಕವೇ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ' ಎಂದೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.