ಬೆಂಗಳೂರು: ‘ಪರಿಷ್ಕೃತ ಮಾಸ್ಟರ್ ಪ್ಲಾನ್– 2041’ ಸಿದ್ಧತೆಯನ್ನು ಆರಂಭಿಸಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಡ್ರೋನ್ ಮೂಲಕ 3ಡಿ ಸರ್ವೆ ನಡೆಸಲು ಟೆಂಡರ್ ಆಹ್ವಾನಿಸಿದೆ.

ಬಿಬಿಎಂಪಿ ವ್ಯಾಪ್ತಿ ಹೊರತುಪಡಿಸಿದಂತೆ ಬಿಡಿಎ ವ್ಯಾಪ್ತಿಯ 440 ಚದರ ಕಿ.ಮೀ ವ್ಯಾಪ್ತಿಯಲ್ಲಿ ಸರ್ವೆ ನಡೆಸಬೇಕು. ‘ಬೇಸ್ ಮ್ಯಾಪ್’ ಹಾಗೂ ಭೂಬಳಕೆಯ ನಕ್ಷೆಯನ್ನು ಡ್ರೋನ್ ಸರ್ವೆ ಆಧರಿಸಿ ‘ಆರ್ಥೋ ರೆಕ್ಟಿಫೈಯ್ಡ್ ಇಮೇಜಸ್ ಮತ್ತು ಡಿಜಿಟಲ್ ಎಲಿವೇಷನ್ ಮಾಡಲ್’ಗಳನ್ನು ಸಿದ್ಧಪಡಿಸಿಕೊಂಡು ಮಾಸ್ಟರ್ ಪ್ಲಾನ್ ರಚಿಸಲು ಯೋಜಿಸಲಾಗಿದೆ.

ರಕ್ಷಣಾ ಸಚಿವಾಲಯ ಸೇರಿದಂತೆ ಎಲ್ಲ ಸಂಸ್ಥೆಗಳಿಂದ ಅನುಮತಿಗಳನ್ನು ಗುತ್ತಿಗೆದಾರರೇ ಪಡೆದುಕೊಳ್ಳಬೇಕು. ಎಲ್ಲ ರೀತಿಯ ಬಫರ್ ಝೋನ್ಗಳನ್ನೂ ಗುರುತಿಸಬೇಕು. 360 ಡಿಗ್ರಿ ಚಿತ್ರಗಳನ್ನೂ ಸಂಗ್ರಹಿಸಿಕೊಂಡು, ವಾಸ್ತವದಲ್ಲಿನ ಭೂಮಿಯೊಂದಿಗೆ ಅದನ್ನು ‘3ಡಿ ರಿಯಾಲಿಟಿ ಮೆಷ್ ಮಾಡಲ್’ನಲ್ಲಿ ಅಳವಡಿಸಬೇಕು.

ಬಿಡಿಎ ಈ ಹಿಂದೆ, ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ ಮೂಲಕ ಸರ್ವೆ ನಡೆಸಲು ನಿರ್ಧರಿಸಿತ್ತು. ರಾಜ್ಯ ಸರ್ಕಾರ ಬದಲಾದ ಮೇಲೆ ಈ ಯೋಜನೆಯನ್ನು ಖಾಸಗಿ ಸಂಸ್ಥೆಯಿಂದ ನಡೆಸಲು ಟೆಂಡರ್ ಆಹ್ವಾನಿಸಿದೆ. ಜೂನ್ 15ರಂದು ಟೆಂಡರ್ ಸಲ್ಲಿಸಲು ಅಂತಿಮ ದಿನವಾಗಿದ್ದು, ಜೂನ್ 21ರಂದು ಆರ್ಥಿಕ ಬಿಡ್ ತೆರೆಯಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.