ಬೆಂಗಳೂರು: ಕೆ.ಪಿ. ಅಗ್ರಹಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಸಾಗರ್ ಅಲಿಯಾಸ್ ಚಿನ್ನು ಕೊಲೆ ಪ್ರಕರಣ ಸಂಬಂಧ, ರೌಡಿ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ರೌಡಿ ಕೆ. ನವೀನ್, ಸಹಚರರಾದ ಹೇಮಂತ್ಕುಮಾರ್ ಅಲಿಯಾಸ್ ರೋಸಿ ಹಾಗೂ ಡಿ. ಕುಮಾರ್ ಅಲಿಯಾಸ್ ಡಿಯೊ ಬಂಧಿತರು.

‘ಮೇ 22ರಂದು ಚೆಲುವಪ್ಪ ಗಾರ್ಡನ್ ಬಳಿ ಸಾಗರ್ ಹಾಗೂ ಸ್ನೇಹಿತರು ಮದ್ಯದ ಪಾರ್ಟಿ ಮಾಡುತ್ತಿದ್ದರು. ಇದೇ ವೇಳೆಯೇ ಸ್ಥಳಕ್ಕೆ ಬಂದಿದ್ದ ರೌಡಿ ಕೆ. ನವೀನ್ ಹಾಗೂ ಇತರರು, ಜಗಳ ತೆಗೆದಿದ್ದರು. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು’ ಎಂದು ಪೊಲೀಸರು ಹೇಳಿದರು.

‘ಸಿಟ್ಟಾಗಿದ್ದ ರೌಡಿ ಹಾಗೂ ಇತರರು, ಸಾಗರ್ ಅವರ ಮುಖ ಹಾಗೂ ತಲೆಗೆ ಲಾಂಗ್ನಿಂದ ಹೊಡೆದು ಕೊಂದು ಪರಾರಿಯಾಗಿದ್ದರು. ಪುರಾವೆಗಳನ್ನು ಸಂಗ್ರಹಿಸಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದರು.

‘ಆರೋಪಿ ನವೀನ್ ಹೆಸರು ವಿಜಯನಗರ ಠಾಣೆಯ ರೌಡಿ ಪಟ್ಟಿಯಲ್ಲಿದೆ. ಸಾಗರ್ ಸಹ ಅಪರಾಧ ಹಿನ್ನೆಲೆಯುಳ್ಳವ. ಹಳೇ ವೈಷಮ್ಯ ಹಾಗೂ ವೈಯಕ್ತಿಕ ವರ್ಚಸ್ಸಿಗಾಗಿ ಈ ಕೊಲೆ ನಡೆದಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ’ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.