ಬೆಂಗಳೂರು: ನಸುಕಿನ ವೇಳೆ ಕಿಟಕಿ ಸರಳು ಮುರಿದು ‘ಜನ ಸ್ಮಾಲ್ ಫೈನಾನ್ಸ್’ ಬ್ಯಾಂಕ್‌ಗೆ ನುಗ್ಗಿದ ದುಷ್ಕರ್ಮಿ ಹಣವಿದ್ದ ಲಾಕರ್ ಒಡೆಯಲು ಯತ್ನಿಸಿ ವಿಫಲನಾಗಿ ಬರಿಗೈಲಿ ಹೊರಟು ಹೋಗಿದ್ದಾನೆ.

ಕೆಂಗೇರಿ ಉಪನಗರದ 80 ಅಡಿ ರಸ್ತೆಯಲ್ಲಿರುವ ಬ್ಯಾಂಕ್ ಶಾಖೆಯಲ್ಲಿ ಭಾನುವಾರ ಬೆಳಿಗ್ಗೆ ಈ ಪ್ರಕರಣ ನಡೆದಿದ್ದು, ಈ ಸಂಬಂಧ ಬ್ಯಾಂಕ್ ವ್ಯವಸ್ಥಾಪಕ ಎ.ಆರ್.ವಿನೋದ್ ಅವರು ಕೆಂಗೇರಿ ಠಾಣೆಗೆ ದೂರು ಕೊಟ್ಟಿದ್ದಾರೆ. ಪೊಲೀಸರು ಸಿ.ಸಿ ಟಿ.ವಿ ಕ್ಯಾಮೆರಾದ ದೃಶ್ಯಾವಳಿ ಆಧರಿಸಿ ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.

‘ಸೋಮವಾರ ಬೆಳಿಗ್ಗೆ 8ರ ಸುಮಾರಿಗೆ ಕೆಲಸಕ್ಕೆ ಬಂದಾಗ, ಷಟರ್‌ನ ಬೀಗ ಮುರಿದಿತ್ತು. ಅದನ್ನು ನೋಡಿ ಗಾಬರಿಯಾಯಿತು. ಒಳಗೆ ಹೋಗಿ ನೋಡಿದರೆ, ಕಿಟಕಿ ಸರಳು ಕತ್ತರಿಸಲಾಗಿತ್ತು’ ಎಂದು ದೂರಿನಲ್ಲಿ ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.