ಬೆಂಗಳೂರು: ಬಾರ್ನಲ್ಲಿ ನಡೆದ ಗಲಾಟೆ ವೇಳೆ ಕ್ಯಾಷಿಯರ್ಗೆ ಬಾಟಲ್ಯಿಂದ ಇರಿದಿದ್ದ ಪ್ರಕರಣದ ಸಂಬಂಧ ಇಬ್ಬರು ಆರೋಪಿಗಳನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಚೇತನ್ ಹಾಗೂ ಕಾರ್ತಿಕ್ ಬಂಧಿತರು. ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.

ವಿದ್ಯಾರಣ್ಯಪುರದ ನರಸೀಪುರದ ಜಯಶ್ರೀ ಬಾರ್ನಲ್ಲಿ ಮೂವರು ಆರೋಪಿಗಳೂ ಮದ್ಯ ಸೇವಿಸಲು ಬಂದಿದ್ದರು. ಮದ್ಯ ಸೇವನೆ ಬಳಿಕ ಬಾರ್ ಕ್ಯಾಷಿಯರ್ ಬಿಲ್ ನೀಡಿದ್ದರು. ಪಾವತಿಸಬೇಕಾದ ಹಣಕ್ಕಿಂತಲೂ ₹20 ಹೆಚ್ಚಿನ ಮೊತ್ತವನ್ನು ಬಿಲ್ನಲ್ಲಿ ನಮೂದಿಸಲಾಗಿತ್ತು ಎಂಬ ಕಾರಣಕ್ಕೆ ಆರೋಪಿಗಳು ಗಲಾಟೆ ಮಾಡಿದ್ದರು. ಬಾಟಲ್ನಿಂದ ಕ್ಯಾಷಿಯರ್ ರಂಜಿತ್ ಎಂಬುವವರ ಮೇಲೆ ಹಲ್ಲೆ ನಡೆಸಿದ್ದರು. ಬಳಿಕ ಅದೇ ಬಾಟಲಿಯಿಂದ ಇರಿದಿದ್ದರು. ಘಟನೆ ಸಂಬಂಧ ನೀಡಿದ್ದ ದೂರು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.