ಬೆಂಗಳೂರು: ನಗರದ ಆಯ್ದ ಸ್ಥಳಗಳು ಹಾಗೂ ಪ್ರಮುಖ ವಾಹನ ದಟ್ಟಣೆಯುಳ್ಳ ವೃತ್ತಗಳಲ್ಲಿ ಎರಡು ಸಂಸ್ಥೆಗಳು ಡ್ರೋನ್ ಬಳಸಿ ವಾಯು ಮಾಲಿನ್ಯ ಅಧ್ಯಯನ ಆರಂಭಿಸಿವೆ.

ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (ಇಎಂಪಿಆರ್ಐ) ಹಾಗೂ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ (ಎನ್ಐಎಎಸ್) ಸಹಭಾಗಿತ್ವದಲ್ಲಿ ಈ ಅಧ್ಯಯನ ಆರಂಭವಾಗಿದೆ. ವಾಯು ಮಾಲಿನ್ಯದ ದುಷ್ಪರಿಣಾಮಗಳ ತಡೆಗೆ ಅಧ್ಯಯನ ಸಹಕಾರಿ ಆಗಲಿದೆ ಎಂದು ನಿರೀಕ್ಷಿಸಲಾಗಿದೆ.

ನಗರದಲ್ಲಿ ವಾಯು ಮಾಲಿನ್ಯವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೈಗಾರಿಕೆಗಳು ಹಾಗೂ ವಾಹನಗಳಿಂದ ವಾಯು ಮಾಲಿನ್ಯ ಹೆಚ್ಚಾಗಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸುತ್ತಾರೆ.

ಡ್ರೋನ್ ತಂತ್ರಜ್ಞಾನ ಆಧರಿತ ಅಧ್ಯಯನವು ನಿಖರವಾದ ಅಂಕಿ–ಅಂಶವನ್ನು ಒದಗಿಸಲಿದೆ ಎಂಬ ಆಶಯವನ್ನು ನಿರೀಕ್ಷಿಸಲಾಗಿದೆ.

ಸದ್ಯ ತಂಡವೊಂದು ಅಧ್ಯಯನದಲ್ಲಿ ತೊಡಗಿದೆ. ಮೂರು ಡ್ರೋನ್ ಬಳಕೆ ಮಾಡಲಾಗುತ್ತಿದೆ. ಹೆಚ್ಚಿನ ವಾಹನ ದಟ್ಟಣೆಯುಳ್ಳ 42 ಜಂಕ್ಷನ್ಗಳಲ್ಲಿ, 36 ಕೊಳೆಗೇರಿಗಳು, 6 ಘನತ್ಯಾಜ್ಯ ನಿರ್ವಹಣಾ ಘಟಕಗಳು ಹಾಗೂ ಮೂರು ಕೈಗಾರಿಕಾ ಪ್ರದೇಶ, ನಗರ ಪ್ರವೇಶಿಸುವ ಪ್ರಮುಖವಾದ 8 ಸ್ಥಳಗಳಲ್ಲಿ ಈ ಅಧ್ಯಯನ ನಡೆಯಲಿದೆ. ವಾಹನ ದಟ್ಟಣೆ, ಜನಸಂದಣಿ, ಕೈಗಾರಿಕೆಗಳು, ಕಸದ ರಾಶಿಯ ದೃಶ್ಯವನ್ನು ಸೆರೆ ಹಿಡಿಯಲಿವೆ. ಅದರ ಅಧಾರದ ಮೇಲೆ ವಾಯು ಮಾಲಿನ್ಯದ ವಿಶ್ಲೇಷಣೆ ನಡೆಸಲಾಗುವುದು ಎಂದು ಸಂಸ್ಥೆ ತಿಳಿಸಿದೆ.

‘ಈ ಅಧ್ಯಯನ ವರದಿ, ಮುಂದಿನ ದಿನಗಳಲ್ಲಿ ವಾಯು ಮಾಲಿನ್ಯ ತಡೆಗೆ ಸಹಕಾರಿ ಆಗಲಿದೆ. ಇದು ವರ್ಷದ ಯೋಜನೆಯಾಗಿದೆ. ಕಳೆದ ಬುಧವಾರದಿಂದ ಡ್ರೋನ್ ಬಳಸಿ ವಿಶ್ಲೇಷಣೆ ನಡೆಸಲಾಗುತ್ತಿದೆ’ ಎಂದು ಯೋಜನೆ ಸಮನ್ವಯಕಾರರಾದ ಡಾ.ಎಂ.ಇ.ತೇಜಸ್ವಿನಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.