ಮಂಗಳೂರು: ಕಳೆದ ಬಾರಿ ಅದ್ಧೂರಿಯಾಗಿ ನಡೆದ ಬೆಂಗಳೂರು ಕಂಬಳ ಈ ಬಾರಿ ನಡೆಯುವುದು ಸಂದೇಹ. ವೇಳಾಪಟ್ಟಿಯಂತೆ ಈ ಋತುವಿನ ಮೊದಲ ಕಂಬಳ ರಾಜಧಾನಿಯಲ್ಲಿ ಇದೇ 26ರಂದು ನಡೆಯಬೇಕಿತ್ತು. ಆದರೆ ಸದ್ಯ ಕಂಬಳ ಆಯೋಜಿಸಲು ಅಲ್ಲಿನ ತುಳು ಕೂಟ ಸಿದ್ಧವಿಲ್ಲ.

ತುಳು ಕೂಟದ 50ನೇ ವರ್ಷಾಚರಣೆ ಅಂಗವಾಗಿ ಕಳೆದ ಋತುವಿನ ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಂಬಳ ಆಯೋಜಿಸಲಾಗಿತ್ತು. ಈ ವರ್ಷದ ಮೊದಲ ಕಂಬಳ ಆಯೋಜಿಸುವ ಅವಕಾಶವನ್ನು ತುಳುಕೂಟಕ್ಕೆ ನೀಡಲಾಗಿತ್ತು. ಆದರೆ ಫೆಬ್ರುವರಿ ಅಥವಾ ಮಾರ್ಚ್ನಲ್ಲಿ ಮಾತ್ರ ಸ್ಪರ್ಧೆ ಆಯೋಜಿಸಲು ಸಾಧ್ಯ ಎಂದು ತುಳು ಕೂಟ ತಿಳಿಸಿದೆ. ಆ ಸಂದರ್ಭದಲ್ಲಿ ಪ್ರತಿ ವಾರಾಂತ್ಯದಲ್ಲೂ ಸ್ಥಳೀಯ ಕಂಬಳ ಇದೆ. ಆದ್ದರಿಂದ ಬೆಂಗಳೂರಿಗಾಗಿ ದಿನಾಂಕ ಮರು ನಿಗದಿ ಮಾಡುವುದು ಸವಾಲಾಗಿದೆ ಎನ್ನುತ್ತವೆ ಜಿಲ್ಲಾ ಕಂಬಳ ಸಮಿತಿಯ ಮೂಲಗಳು.

‘ಬೆಂಗಳೂರಲ್ಲಿ ಕಂಬಳ ಆಯೋಜಿಸುವುದು ಖಚಿತ. ಆದರೆ ಸದ್ಯ ಅನುಮತಿ ಪಡೆಯಲು ಪೂರಕ ವಾತಾವರಣ ಇಲ್ಲ. ಹೀಗಾಗಿ ಮುಂದಿನ ವರ್ಷದಲ್ಲಿ ನಡೆಸುವ ಕುರಿತು ಚಿಂತನೆ ನಡೆದಿದೆ’ ಎಂದು ತುಳು ಕೂಟದ ಅಧ್ಯಕ್ಷ ಸುಂದರರಾಜ್ ರೈ ತಿಳಿಸಿದರು.

‘ಋತುವಿನ ಮಧ್ಯದಲ್ಲಿ ಬೆಂಗಳೂರಿಗೆ ಹೋಗಿ ಬರುವುದು ಕಷ್ಟಸಾಧ್ಯ. ಸದ್ಯ ಬೆಂಗಳೂರು ಕಂಬಳವನ್ನು ಕೈಬಿಟ್ಟು ವೇಳಾಪಟ್ಟಿಯಲ್ಲಿರುವ ಉಳಿದ ಕಂಬಳಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ’ ಎಂದು ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಳಪು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.