ಎಲ್ಲ ನಾಟಕಗಳಲ್ಲೂ ಜಾತಿಯ ವಿಚಾರ ಪ್ರಸ್ತಾಪವಾಗುತ್ತಿದೆ. ಜಾತಿ ಬದುಕಿನ ಭಾಗವಾಗಿದೆ. ಜಾತಿ ಬದುಕಿನ ಭಾಗ ಆಗದಿದ್ದರೆ, ರಂಗದ ಮೇಲೂ ತರುತ್ತಿರಲಿಲ್ಲ.
–ಕೆ.ಪಿ.ಲಕ್ಷ್ಮಣ, ಜಂಗಮ ಕೆನಕ್ಟೀವ್ ಸದಸ್ಯ
ಕಣ್ಣೀರಿನಲ್ಲಿ ಗಂಡು ಹೆಣ್ಣು, ಆ ಧರ್ಮ ಈ ಧರ್ಮ, ಆ ಜಾತಿ ಈ ಜಾತಿ ಎಂದೇನೂ ಇರುವುದಿಲ್ಲ. ಸಾಹಿತ್ಯದಲ್ಲಿ ಮುಖ್ಯವಾಗಿರಬೇಕಾದದ್ದು ಮಾನವೀಯತೆ ಮತ್ತು ಪ್ರೀತಿಗಳು ಮಾತ್ರ. ಮೇಲ್ವರ್ಗದ ಲೇಖಕರನ್ನು ಜಾತಿಯಿಂದ ಗುರುತಿಸುತ್ತಿಲ್ಲವಷ್ಟೆ. ಹೀಗಾಗಿ ಮುಂದಿನ ಸಾಹಿತ್ಯೋತ್ಸವದಿಂದಲಾದರೂ ದಲಿತ ಲೇಖಕರನ್ನು ‘ದಲಿತ ಲೇಖಕ‘ ಎಂದು ಗುರುತಿಸದೆ ಕೇವಲ ಒಬ್ಬ ಲೇಖಕ ಎಂದಷ್ಟೆ ಗುರುತಿಸುವಂತಾಗಲಿ.