ಬೆಂಗಳೂರು: ಹಲಸೂರುಗೇಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಕಂಠೀರವ ಕ್ರೀಡಾಂಗಣದಿಂದ ಅ.6ರ ಮುಂಜಾನೆ 63ನೇ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನ 11ನೇ ಆವೃತ್ತಿಯ ‘ಬೆಂಗಳೂರು ಮ್ಯಾರಥಾನ್’ ಆರಂಭವಾಗಲಿದ್ದು, ನಗರದ ಹಲವು ರಸ್ತೆಗಳಲ್ಲಿ ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದ್ದು ಹಾಗೂ ಕೆಲವು ಕಡೆ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ.

ಕಂಠೀರವ ಕ್ರೀಡಾಂಗಣದಿಂದ ಮ್ಯಾರಥಾನ್ ಮುಂಜಾನೆ ಆರಂಭವಾಗಿ, ಬೆಳಿಗ್ಗೆ 11ರ ಸುಮಾರಿಗೆ ಮುಕ್ತಾಯವಾಗಲಿದೆ. ಮ್ಯಾರಥಾನ್ನಲ್ಲಿ ಅಂದಾಜು 17 ಸಾವಿರ ಸ್ಪರ್ಧಿಗಳು ಭಾಗವಹಿಸಲಿದ್ದಾರೆ.

ವಾಹನ ನಿಲುಗಡೆ ಸ್ಥಳಗಳು: ಸ್ಪರ್ಧಿಗಳು ತಮ್ಮ ವಾಹನಗಳನ್ನು ಯುಬಿ ಸಿಟಿ, ಫ್ರೀಡಂಪಾರ್ಕ್ ಹಾಗೂ ಗರುಡ ಮಾಲ್ ಆವರಣದಲ್ಲಿ ನಿಲುಗಡೆ ಮಾಡಬೇಕು

ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಹಾಗೂ ಇಳಿಸಲು ಕ್ಯಾಬ್ಗೆ ನಿಗದಿ ಪಡಿಸಿರುವ ಸ್ಥಳ:

ಮಲ್ಯ ಆಸ್ಪತ್ರೆ ರಸ್ತೆ– ಸಿದ್ದಲಿಂಗಯ್ಯ ಜಂಕ್ಷನ್ನಿಂದ ಆರ್ಆರ್ಎಂಆರ್ ಜಂಕ್ಷನ್ವರೆಗೆ ಹಾಗೂ ಹಡ್ಸನ್ ವೃತ್ತದವರೆಗೆ

ವಾಹನ ನಿಲುಗಡೆ ನಿಷೇಧಿತ ರಸ್ತೆಗಳು:
* ಕಸ್ತೂರ ಬಾ ರಸ್ತೆ–ಹಡ್ಸನ್ ವೃತ್ತದಿಂದ ಕ್ವೀನ್ಸ್ ವೃತ್ತದವರೆಗೆ
* ಎಂ.ಜಿ ರಸ್ತೆ– ಕ್ವೀನ್ಸ್ ವೃತ್ತದಿಂದ ವೆಬ್ಸ್ ಜಂಕ್ಷನ್(ಎರಡೂ ಬದಿ)
* ಡಿಕನ್ಸನ್ ರಸ್ತೆ – ವೆಬ್ಸ್ ಜಂಕ್ಷನ್ನಿಂದ ಹಲಸೂರು ರಸ್ತೆಯವರೆಗೆ
* ಕಬ್ಬನ್ ರಸ್ತೆ– ಮಣಿಪಾಲ್ ಸೆಂಟರ್ನಿಂದ ಸಿಟಿಒ ವೃತ್ತದವರೆಗೆ
* ಕಾಮರಾಜ ರಸ್ತೆ ಹಾಗೂ ಸೆಂಟ್ರಲ್ ಸ್ಟ್ರೀಟ್
* ಕ್ವೀನ್ಸ್ ರಸ್ತೆ: ಬಾಳೇಕುಂದ್ರಿ ವೃತ್ತದಿಂದ ಕ್ವೀನ್ಸ್ ವೃತ್ತದವರೆಗೆ
* ರಾಜಭವನ ರಸ್ತೆ: ಸಿಟಿಒ ವೃತ್ತದಿಂದ ರಾಜಭವನ ಜಂಕ್ಷನ್ವರೆಗೆ
* ಇನ್ಫೆಂಟ್ರಿ ರಸ್ತೆ: ರಾಜಭವನ ವೃತ್ತದಿಂದ ಟ್ರಾಫಿಕ್ ಹೆಡ್ ಕ್ವಾಟ್ರರ್ಸ್ ವೃತ್ತದವರೆಗೆ
* ಬಿ.ಆರ್ ಅಂಬೇಡ್ಕರ್ ರಸ್ತೆ– ಕೆ.ಆರ್ ವೃತ್ತದಿಂದ ಬಾಳೇಕುಂದ್ರಿ ವೃತ್ತದವರೆಗೆ
* ಕಬ್ಬನ್ ಉದ್ಯಾನದ ಒಳಭಾಗದ ರಸ್ತೆಗಳು
* ಆರ್ಆರ್ಎಂಆರ್ ರಸ್ತೆ: ರಿಚ್ಮಂಡ್ ಜಂಕ್ಷನ್ನಿಂದ ಹಡ್ಸನ್ ವೃತ್ತದವರೆಗೆ
* ವಿಠಲ್ ಮಲ್ಯ ರಸ್ತೆ: ಸಿದ್ದಲಿಂಗಯ್ಯ ವೃತ್ತದಿಂದ ಕಾಫಿ ಡೇ ಜಂಕ್ಷನ್ವರೆಗೆ

ಸಂಚಾರ ನಿಷೇಧಿತ ರಸ್ತೆಗಳು:
* ಕಸ್ತೂರ ಬಾ ರಸ್ತೆ(ಹಡ್ಸನ್ ಜಂಕ್ಷನ್ನಿಂದ ಕ್ವೀನ್ಸ್ ಜಂಕ್ಷನ್ ವರೆಗೆ)
* ಮಹಾತ್ಮ ಗಾಂಧಿ ರಸ್ತೆ (ಕ್ವೀನ್ಸ್ ಜಂಕ್ಷನ್ನಿಂದ ಮೇಯೊ ಹಾಲ್ ಜಂಕ್ಷನ್ವರೆಗೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.