ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು ತಂತ್ರಜ್ಞಾನ ಶೃಂಗಕ್ಕೆ ಸಂಭ್ರಮದ ತೆರೆ

Published : 21 ನವೆಂಬರ್ 2024, 20:42 IST
Last Updated : 21 ನವೆಂಬರ್ 2024, 20:42 IST
ಫಾಲೋ ಮಾಡಿ
Comments
ವಸ್ತು ಪ್ರದರ್ಶದಲ್ಲಿ ಏರ್ಪಡಿಸಲಾಗಿದ್ದ ಸ್ಪರ್ಧೆಯಲ್ಲಿ ಮಣ್ಣಿನ ಕಲಾಕೃತಿಗಳನ್ನು ಮಾಡಿದ ವಿದ್ಯಾರ್ಥಿಗಳು
ಪ್ರಜಾವಾಣಿ ಚಿತ್ರ: ರಂಜು ಪಿ
ವಸ್ತು ಪ್ರದರ್ಶದಲ್ಲಿ ಏರ್ಪಡಿಸಲಾಗಿದ್ದ ಸ್ಪರ್ಧೆಯಲ್ಲಿ ಮಣ್ಣಿನ ಕಲಾಕೃತಿಗಳನ್ನು ಮಾಡಿದ ವಿದ್ಯಾರ್ಥಿಗಳು ಪ್ರಜಾವಾಣಿ ಚಿತ್ರ: ರಂಜು ಪಿ
ಪ್ರದರ್ಶನ ಕೇಂದ್ರದ ಆವರಣದಲ್ಲಿ ನಡೆಸಲಾದ ಡ್ರೋನ್ ಷೋ ಅವನ್ನು ಬೆರಗುಗಣ್ಣಿನಿಂದ ನೋಡಿದ ಚಿಟಾಣಿ ಮತ್ತು ಪೋಷಕರು
ಪ್ರಜಾವಾಣಿ ಚಿತ್ರ: ರಂಜು ಪಿ
ಪ್ರದರ್ಶನ ಕೇಂದ್ರದ ಆವರಣದಲ್ಲಿ ನಡೆಸಲಾದ ಡ್ರೋನ್ ಷೋ ಅವನ್ನು ಬೆರಗುಗಣ್ಣಿನಿಂದ ನೋಡಿದ ಚಿಟಾಣಿ ಮತ್ತು ಪೋಷಕರು ಪ್ರಜಾವಾಣಿ ಚಿತ್ರ: ರಂಜು ಪಿ
ಬೆಂಗಳೂರು ಅದ್ಭುತ ಕಲ್ಪನೆಗಳ ತವರೂರು. ಈ ಶೃಂಗವು ನವೋದ್ಯಮಗಳಿಗೆ ಜಾಗತಿಕ ಮಟ್ಟದ ಅವಕಾಶಗಳನ್ನು ತೆರೆದಿಟ್ಟಿತು. ಅಂತರರಾಷ್ಟ್ರೀಯ ಮಟ್ಟದ ಸಹಕಾರಗಳಿಗೆ ವೇದಿಕೆಯಾಯಿತು. ಉದ್ಯಮಿಗಳು ತಮ್ಮ ಕನಸು ನನಸು ಮಾಡಿಕೊಳ್ಳಲು ನೆರವಾಯಿತು. ಭವಿಷ್ಯವನ್ನು ರೂಪಿಸುವ ಪರಿಕಲ್ಪನೆಗಳನ್ನು ಅನುಷ್ಠಾನಕ್ಕೆ ತರುವ ಸಾಧ್ಯತೆಗಳನ್ನು ಸರ್ಕಾರಗಳಿಗೆ ಉದ್ಯಮಿಗಳಿಗೆ ಹೂಡಿಕೆದಾರರಿಗೆ ಮತ್ತು ನವೋದ್ಯಮಗಳಿಗೆ ತೆರೆದಿಟ್ಟಿತು. 
ಡಾ. ಶರಣಪ್ರಕಾಶ ಪಾಟೀಲ ಕೌಶಲಾಭಿವೃದ್ಧಿ ಸಚಿವ
‘ಸುಸ್ಥಿರ ಅಭಿವೃದ್ಧಿ ಗುರಿಯಲ್ಲಿ ಕರ್ನಾಟಕವು ಮುಂದಿನ ಸಾಲಿನಲ್ಲಿಯೇ ಇದೆ. ನಮಗಿರುವ ಒಂದೇ ಭೂಮಿಯನ್ನು ಉಳಿಸಿ ಮುಂದಿನ ತಲೆಮಾರಿಗೆ ದಾಟಿಸುವಲ್ಲಿ ಶೂನ್ಯ ಇಂಗಾಲ ಏಕ ಬಳಕೆ ಪ್ಲಾಸ್ಟಿಕ್‌ ನಿಷೇಧ ಮರುಬಳಕೆ ತಂತ್ರಜ್ಞಾನಗಳ ಅಳವಡಿಕೆ ಅತ್ಯಂತ ಪ್ರಮುಖ ಪಾತ್ರವಹಿಸುತ್ತವೆ. ಶೃಂಗದ ಆಯೋಜನೆಯಲ್ಲಿ ಇವನ್ನು ಅಳವಡಿಸಿಕೊಳ್ಳಲಾಗಿತ್ತು. ಇದರಲ್ಲಿ ಉತ್ತಮ ಸಾಧನೆ ತೋರಿದವರಿಗೆ ‘ಸುಸ್ಥಿರ ಪ್ರಶಸ್ತಿ’ ನೀಡಿದ್ದು ಸ್ವಾಗತಾರ್ಹ’.
ಈಶ್ವರ ಬಿ. ಖಂಡ್ರೆ ಅರಣ್ಯ ಮತ್ತು ಪರಿಸರ ಸಚಿವ
‘ಬೆಂಗಳೂರಿಗೆ ಮಹತ್ವದ ಸ್ಥಾನ’ ‘ಟೆಕ್‌ ಉದ್ಯಮಗಳು ನವೋದ್ಯಮಗಳಿಗೆ ವೇದಿಕೆ ಕಲ್ಪಿಸಿದ್ದಷ್ಟೇ ಅಲ್ಲ. ಜಾಗತಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಂಗಳೂರು ಮತ್ತು ಕರ್ನಾಟಕವನ್ನು ಒಂದು ಮಹತ್ವದ ಸ್ಥಾನದಲ್ಲಿ ನಿಲ್ಲಿಸುವ ಗುರಿ ಸಾಧನೆಗೆ ಈ ಶೃಂಗ ನೆರವಾಗಲಿದೆ. ಇವಿಷ್ಟೇ ಅಲ್ಲದೆ ಸುಸ್ಥಿರ ಅಭಿವೃದ್ಧಿ ಗುರಿಗಳನ್ನೂ ಶೃಂಗದಲ್ಲಿ ಅನುಸರಿಸಲಾಗಿದೆ. ಇಲ್ಲಿ ಉತ್ಪಾದನೆಯಾದ ಕಸದಲ್ಲಿ ಶೇ 98ರಷ್ಟನ್ನು ಮರುಬಳಕೆ ಮಾಡಲಾಗಿದೆ. ಶೃಂಗಕ್ಕಾಗಿ ಬಳಕೆಯಾದ ವಾಹನಗಳಲ್ಲಿ ಶೇ 28ರಷ್ಟು ವಿದ್ಯುತ್ ಚಾಲಿತ ವಾಹನಗಳಾಗಿದ್ದವು’
ಪ್ರಿಯಾಂಕ್‌ ಖರ್ಗೆ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ
ಬೆಂಗಳೂರಿನ ಅರಮನೆ ಆವರಣದಲ್ಲಿ 'ಬೆಂಗಳೂರು ಟೆಕ್ ಸಮ್ಮಿಟ್‌'ನ ಕೊನೆಯ ದಿನವಾದ ಗುರುವಾರ ಭಾಗವಹಿಸಿದ್ದ ಕುಟುಂಬ ಕುತೂಹಲದಿಂದ ವೀಕ್ಷಣೆ ಮಾಡಿದ ದೃಶ್ಯ

ಬೆಂಗಳೂರಿನ ಅರಮನೆ ಆವರಣದಲ್ಲಿ 'ಬೆಂಗಳೂರು ಟೆಕ್ ಸಮ್ಮಿಟ್‌'ನ ಕೊನೆಯ ದಿನವಾದ ಗುರುವಾರ ಭಾಗವಹಿಸಿದ್ದ ಕುಟುಂಬ ಕುತೂಹಲದಿಂದ ವೀಕ್ಷಣೆ ಮಾಡಿದ ದೃಶ್ಯ

-ಪ್ರಜಾವಾಣಿ ಚಿತ್ರ: ರಂಜು ಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT