ಬೆಂಗಳೂರು: ‘ಕ್ಯಾನ್ಸರ್ ತಪಾಸಣೆ, ರೋಗ ನಿರ್ಣಯ ಮತ್ತು ಚಿಕಿತ್ಸೆಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ (ಎಐ) ಸಹಕಾರಿಯಾಗಿದ್ದು, ಈ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು’ ಎಂದು ವೈದ್ಯಕೀಯ ತಜ್ಞರು ಹಾಗೂ ವಿಜ್ಞಾನಿಗಳು ಅಭಿಮತ ವ್ಯಕ್ತಪಡಿಸಿದ್ದಾರೆ.

ವಿಶ್ವ ತಲೆ ಮತ್ತು ಕುತ್ತಿಗೆ ಕ್ಯಾನ್ಸರ್ ದಿನದ ಪ್ರಯುಕ್ತ ಬಯೋಕಾನ್ ಸಮೂಹವು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಸಹಯೋಗದಲ್ಲಿ ನಗರದಲ್ಲಿ ಹಮ್ಮಿಕೊಂಡಿದ್ದ ಬಾಯಿ ಕ್ಯಾನ್ಸರ್ ಕಾರ್ಯಪಡೆಯ ಸಮ್ಮೇಳನದಲ್ಲಿ ‘ಬಾಯಿ ಕ್ಯಾನ್ಸರ್ನಲ್ಲಿ ಕೃತಕ ಬುದ್ಧಿಮತ್ತೆ’ ವಿಷಯದ ಮೇಲೆ ಚರ್ಚಿಸಲಾಯಿತು.

ಐಐಎಸ್ಸಿ ವಿಜ್ಞಾನಿ ದೇವನಾಥ್ ಪಾಲ್ ಮಾತನಾಡಿ, ‘ಎಐ ತಂತ್ರಜ್ಞಾನದಿಂದ ವೈದ್ಯಕೀಯ ಕ್ಷೇತ್ರದಲ್ಲಿ ಸುಧಾರಣೆಯಾಗುವ ಜತೆಗೆ ರೋಗಿಗಳಿಗೂ ಗುಣಮಟ್ಟದ ವೈದ್ಯಕೀಯ ಸೇವೆ ದೊರೆಯಲಿದೆ. ಚಿಕಿತ್ಸೆಗೆ ಸಂಬಂಧಿಸಿದಂತೆ ಎದುರಾಗುವ ಸವಾಲುಗಳನ್ನು ಸುಲಭವಾಗಿ ಎದುರಿಸಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

ಐಐಎಸ್ಸಿಯ ಇಇಸಿಎಸ್ ವಿಭಾಗದ ಡೀನ್ ಪ್ರೊ. ರಾಜೇಶ್ ಸುಂದರೇಶನ್ ಮಾತನಾಡಿ, ‘ಕ್ಯಾನ್ಸರ್ನಂತಹ ಕಾಯಿಲೆಗಳ ನಿರ್ವಹಣೆಗೆ ಎಐ ತಂತ್ರಜ್ಞಾನ ಸಹಕಾರಿಯಾಗಲಿದೆ’ ಎಂದು ತಿಳಿಸಿದರು.

ಟಾಟಾ ಮೆಮೋರಿಯಲ್ ಆಸ್ಪತ್ರೆಯ ಕ್ಯಾನ್ಸರ್ ತಜ್ಞ ಡಾ. ಕುಮಾರ್ ಪ್ರಭಾಸ್ ಮಾತನಾಡಿ, ‘ಕ್ಯಾನ್ಸರ್ಗೆ ಸಂಬಂಧಿಸಿದ ಸಂಶೋಧನೆಗೂ ಎಐ ತಂತ್ರಜ್ಞಾನ ಸಹಕಾರಿ. ಈ ತಂತ್ರಜ್ಞಾನದ ನೆರವಿನಿಂದ ನಿಖರ ಚಿಕಿತ್ಸೆಯನ್ನು ನೀಡಬಹುದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.