ಬೆಂಗಳೂರು: ‘ದಖ್ಖನಿ ಡೈರೀಸ್’ ಹಮ್ಮಿಕೊಂಡಿರುವ ‘ಕುರುಬ್ಕಿ’ ಕುರುಬರ ಜೊತೆಗೊಂದು ಪ್ರಯಾಣ ಕಾರ್ಯಾಗಾರದಲ್ಲಿ ಉಣ್ಣೆಯಲ್ಲಿ ಅರಳಿದ ಕಲೆ ಅನಾವರಣಗೊಂಡಿತು. ಜೊತೆಗೆ ಜನಪದ ಕಥೆ ‘ರತ್ನಪಕ್ಸಿ’ ಮತ್ತು ಕುರಿಗಳಿಗೆ ಔಷಧ ನೀಡುವ ಸಮುದಾಯಕ್ಕೆ ಸಂಬಂಧಿಸಿದ ‘ಟಗರಜೋಗಿಗಳ ತಲ್ಲಣ’ ಕೃತಿಗಳ ಬಿಡುಗಡೆಯು ಕಾರ್ಯಕ್ರಮಕ್ಕೆ ಮೆರುಗು ನೀಡಿತು.

ಬೆಂಗಳೂರಿನಲ್ಲಿ ‘ಡಿಸೈನ್’ ತರಬೇತಿ ಕಾಲೇಜುಗಳಿವೆ. ಇಲ್ಲಿ ಕಲಿಯುವವರೆಲ್ಲ ಡಿಜಿಟಲ್ ಮೂಲಕ ವಿನ್ಯಾಸಗಳನ್ನು ಮಾಡುತ್ತಾರೆ. ಆದರೆ, ಕೈಕುಸುರಿ ಬರುವುದಿಲ್ಲ. ಬೆಳಗಾವಿ ಜಿಲ್ಲೆಯ ಕಡೋಲಿಯಲ್ಲಿ ಉಣ್ಣೆ ಉತ್ಪಾದಕರ ಸಹಕಾರ ಸಂಘ ಇದೆ. ಅಲ್ಲಿನ ಮಹಿಳೆಯರು ಉಣ್ಣೆಯಲ್ಲಿ ಹೇಗೆ ಕುಸುರಿ ಕೆಲಸ ಮಾಡುತ್ತಾರೆ ಎಂದು ಇಲ್ಲಿನ ವಿದ್ಯಾರ್ಥಿಗಳು ‘ಕುರುಬ್ಜಿ’ ಕಾರ್ಯಾಗಾರದಲ್ಲಿ ಉತ್ಸಾಹದಿಂದ ವೀಕ್ಷಿಸಿದರು.

ಸಮುದಾಯದ ನೀಲಕಂಠ ಮಾಮಾ, ವಝೀರ್, ಬಾಬು ಸಾಮ್ಲೇಕರ್ ಅವರು ಕುರಿಗಾಹಿಗಳ ಹಾಡು ಹಾಡಿದರು. ಜನಪದೀಯ ಕಥೆಗಳನ್ನು ಪ್ರಸ್ತುತಪಡಿಸಿದರು. ಕಡೋಲಿಯ ಮಹಿಳೆಯರು ಜನಪದ ಸ್ವಾಗತ ಗೀತೆ ಹಾಡಿದರು. ಉಣ್ಣೆಯ ವಿನ್ಯಾಸಗಳ ಕಲಾಕೃತಿಗಳ ಜೊತೆಗೆ ಫೋಟೊ ಪ್ರದರ್ಶನಗಳೂ ಗಮನಸೆಳೆದವು.

‘ರತ್ನಪಕ್ಸಿ’ ಸಂಪಾದಕ ಕೊಟಿಗಾನಹಳ್ಳಿ ರಾಮಯ್ಯ ಮಾತನಾಡಿ, ‘ನಗರದ ಪ್ರದೇಶದ ನಿಮಗೆ ಕುರಿ, ಉಣ್ಣೆ, ಪಶುಪಾಲನೆ, ಮಣ್ಣಿನ ಸಂಸ್ಕೃತಿ, ಜನಪದರ ವಿವೇಕ ಎಲ್ಲ ಸ್ವಲ್ಪ ಅಪರಿಚಿತವಾಗಿದ್ದಂತೆ ಕಾಣುತ್ತಿದೆ. ಈ ಕಾರ್ಯಾಗಾರವು ಅವೆಲ್ಲವನ್ನು ನೀವು ತಿಳಿಯುವಂತೆ ಮಾಡಲಿದೆ. ನಿಮ್ಮ ಸೌಂದರ್ಯ ಪ್ರಜ್ಞೆಯೊಂದಿಗೆ ಒಂದು ಸಮುದಾಯದ ಪ್ರಜ್ಞೆಯನ್ನು ಬೆಸೆಯುವ ಕೆಲಸ ಇದು. ಹೊರಗಿನಿಂದ ಒಳಗೊಳ್ಳುವುದು ಸುಲಭ. ಒಳಗಿನಿಂದ ಒಳಗೊಳ್ಳುವ ಪ್ರಕ್ರಿಯೆಗಳಾಗಬೇಕು’ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

‘ಟಗರಜೋಗಿಗಳ ತಲ್ಲಣಗಳು’ ಲೇಖಕ ಚಂದ್ರಪ್ಪ ಸೊಬಟಿ ಮಾತನಾಡಿ. ‘ತಮ್ಮ ಆರೋಗ್ಯದ ಬಗ್ಗೆ ಚಿಂತಿಸದೇ ಕುರಿಗಳ ಆರೋಗ್ಯವನ್ನು ಉಳಿಸಲು ದೇಶದ ಮೂಲೆಯಿಂದ ಮೂಲೆಗೆ ಅಲೆದಾಡುವವರೇ ಟಗರು ಜೋಗಿಗಳು. ಇಡೀ ದೇಶದಲ್ಲಿ ಸಾವಿರದ ಆಸುಪಾಸಿನಲ್ಲಿ ಇರುವ ಅತಿ ಸಣ್ಣ ಸಮುದಾಯ ಇದು’ ಎಂದು ಮಾಹಿತಿ ನೀಡಿದರು.

ಕೃತಿ ಬಿಡುಗಡೆ ಮಾಡಿದ ಕೇಂದ್ರ ವಲಯ ಐಜಿಪಿ ಬಿ.ಆರ್. ರವಿಕಾಂತೇಗೌಡ ಮಾತನಾಡಿ, ‘ನಾವು ಈ ನೆಲವನ್ನು ಬರಡು ಮಾಡುತ್ತಾ ಹೋಗುತ್ತಿದ್ದರೆ ಕುರುಬರು ಅಲೆಮಾರಿಗಳಾಗಿ ಬಂದು ಮಣ್ಣಿನ ಫಲವತ್ತನ್ನು ಹೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ. ಅವರು ಆರ್ಥಿಕವಾಗಿ ಬಡವರಾಗಿರಬಹುದು. ಸಾಂಸ್ಕೃತಿಕವಾಗಿ ಶ್ರೀಮಂತರು’ ಎಂದು ಬಣ್ಣಿಸಿದರು.

ನ.17ರವರೆಗೆ ಕಾರ್ಯಾಗಾರ ನಡೆಯಲಿದೆ. ಇದು ಜ.31ರಿಂದ ಎರಡು ವಾರ ದೊಡ್ಡಮಟ್ಟದಲ್ಲಿ ದಖ್ಖನಿನ ಕುರುಬರ ಸಂಸ್ಕೃತಿ ಅನಾವರಣಗೊಳ್ಳಲಿದೆ’ ಎಂದು ದಖ್ಖನಿ ಡೈರೀಸ್ನ ಸ್ವಾತಿ, ವಿನ್ಯಾಸಕಾರ ಗೋಪಿಕೃಷ್ಣ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.