‘ಅಧಿಕಾರಶಾಹಿ ಪದ್ಧತಿ ಕಿತ್ತುಹಾಕಿ’
‘ಕೆಎಸ್‌ಆರ್‌ಟಿಸಿಯಿಂದ ಬೇರ್ಪಡಿಸಿ ನಾಲ್ಕು ನಿಗಮಗಳನ್ನು ಮಾಡುವುದನ್ನು ನಾವು ವಿರೋಧಿಸಿದ್ದೆವು. ಅದಕ್ಕೆ ನನ್ನನ್ನು ಸೇರಿ 19 ಮಂದಿಯನ್ನು ಜೈಲಿಗೆ ಹಾಕಿದ್ದರು. 25 ವರ್ಷಗಳಲ್ಲಿ ಬಿಎಂಟಿಸಿ ಪ್ರಯಾಣಿಕರಿಗಾಗಲಿ ಸಿಬ್ಬಂದಿಗಾಗಲಿ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಸ್ಟಾಫ್ ಆ್ಯಂಡ್ ವರ್ಕರ್ಸ್ ಫೆಡರೇಶನ್ ಅಧ್ಯಕ್ಷ ಎಚ್.ವಿ. ಅನಂತ ಸುಬ್ಬರಾವ್ ಬೇಸರ ವ್ಯಕ್ತಪಡಿಸಿದರು. ‘ಬಿಎಂಟಿಸಿಯಲ್ಲಿ ನಿರಂಕುಶ ಆಡಳಿತ ಇದೆ. ಕೆಎಸ್‌ಆರ್‌ಟಿಸಿಯಲ್ಲಿ ಹಾಗಿಲ್ಲ. ಬಿಎಂಟಿಸಿ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೈಗಾರಿಕಾ ಬಾಂಧವ್ಯ ಇಲ್ಲ. ಬಸ್ ಸಂಚಾರ ವೇಗ ಪಡೆದಿಲ್ಲ. ಉದಾಹರಣೆಗೆ ಯಶವಂತಪುರದಿಂದ ಕೆಂಗೇರಿಗೆ ಹೋಗಲೂ ಈಗಲೂ ಕನಿಷ್ಠ 3 ಗಂಟೆ ಬೇಕಾಗಿದ್ದು ಅದನ್ನು ಕಡಿಮೆಗೊಳಿಸಲು ಕ್ರಮ ಕೈಗೊಂಡಿಲ್ಲ. ಶಕ್ತಿ ಯೋಜನೆಯ ಬಳಿಕ ಪ್ರಯಾಣಿಕರು ಸ್ವಲ್ಪ ಹೆಚ್ಚಾಗಿರಬಹುದು. ಆದರೆ ಬಸ್ ಸಿಬ್ಬಂದಿ ಹೆಚ್ಚಾಗಿಲ್ಲ ಎಂದು ತಿಳಿಸಿದರು. 'ಸಾರಿಗೆ ಸಚಿವರು ನಿರಂಕುಶ ಪದ್ಧತಿಯನ್ನು ಕೊನೆಗೊಳಿಸಲು ಕ್ರಮ ಕೈಗೊಳ್ಳಬೇಕು. ಅಧಿಕಾರಶಾಹಿ ಪದ್ಧತಿಯನ್ನು ಕಿತ್ತು ಹಾಕಬೇಕು. ಕೈಗಾರಿಕಾ ಬಾಂಧವ್ಯವನ್ನು ಹೆಚ್ಚಿಸಬೇಕು. ಬಸ್ ಸಿಬ್ಬಂದಿಯನ್ನು ಹೆಚ್ಚಿಸಬೇಕು. ಸಂಘಟನೆಗಳೊಂದಿಗೆ ಮಾತನಾಡಿ ಸಮಸ್ಯೆಗಳನ್ನು ಬಗೆಹರಿಸಬೇಕು. ಆಗ ರಜತಮಹೋತ್ಸವಕ್ಕೆ ನಿಜವಾದ ಅರ್ಥ ಬರುತ್ತದೆ' ಎಂದರು.