ಬೆಂಗಳೂರು: ರೈತರು ತಾವು ಖರೀದಿಸಿದ ಗಿಡ/ತಳಿಗಳ ಮಾಹಿತಿಯನ್ನು ಒಂದೇ ಕ್ಲಿಕ್‌ನಲ್ಲಿ ಸುಲಭವಾಗಿ ತಿಳಿಯುವಂತಹ ತಂತ್ರಾಂಶವೊಂದನ್ನು (ಕ್ಯಾಶ್ಯೂ ಫಾರ್ಮರ್ಸ್ ಟ್ರ್ಯಾಕಿಂಗ್ ಸಿಸ್ಟಮ್) ಪುತ್ತೂರಿನ ರಾಷ್ಟ್ರೀಯ ಗೇರು ಸಂಶೋಧನಾ ನಿರ್ದೇಶನಾಲಯದ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.

ನಿರ್ದೇಶನಾಲಯದ ವಿಜ್ಞಾನಿ ಮೋಹನ್ ತಲಕಾಲುಕೊಪ್ಪ ಮತ್ತು ತಂಡ ಗೇರು ತಳಿಗಳ ಗುರುತಿಸುವಿಕೆಗಾಗಿ ಈ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದೆ. ಈಗಾಗಲೇ ಪುತ್ತೂರಿನ ಕೇಂದ್ರದಲ್ಲಿ ಇದನ್ನು ಅಳವಡಿಸಲಾಗಿದೆ. ದೇಶದಾದ್ಯಂತವಿರುವ 14 ಗೇರು ಸಂಶೋಧನಾ ಕೇಂದ್ರಗಳಲ್ಲೂ ಅನುಷ್ಠಾನಗೊಳಿಸಲಾಗುತ್ತಿದೆ.

ಮಾಹಿತಿ ತಿಳಿಯುವ ಬಗೆ:

ಸಂಶೋಧನಾ ಕೇಂದ್ರದ ನರ್ಸರಿಯಿಂದ ಗೇರು ಗಿಡಗಳನ್ನು ಖರೀದಿಸಿದಾಗ ನೀಡುವ ಬಿಲ್‌ನಲ್ಲಿ ಕ್ಯೂಆರ್ ಕೋಡ್ ಇರುತ್ತದೆ. ಅದನ್ನು ಮೊಬೈಲ್‌ನಲ್ಲಿ ಸ್ಕ್ಯಾನ್ ಮಾಡಿದರೆ, ರೈತರು ಖರೀದಿಸಿರುವ ಎಲ್ಲ ತಳಿಗಳ ಸಂಕ್ಷಿಪ್ತ ಮಾಹಿತಿ ಸಿಗುತ್ತದೆ. ಅಲ್ಲಿಯೇ ಹಿಮ್ಮಾಹಿತಿ (ಫೀಡ್‌ಬ್ಯಾಕ್) ನೀಡುವ ಅವಕಾಶವೂ ಇದೆ. ಜೊತೆಗೆ, ಗೇರು ಕೃಷಿಗೆ ಸಂಬಂಧಿಸಿದ ಚರ್ಚೆಗಾಗಿ ವಾಟ್ಸ್‌ಆ್ಯಪ್ ಗ್ರೂಪ್ ಸೇರಿಕೊಳ್ಳಬಹುದು.

ರೈತರ ವಿವರವೂ ಲಭ್ಯ: ಈ ತಂತ್ರಾಂಶದಿಂದ ಗಿಡಗಳ ಮಾಹಿತಿ ಜೊತೆಗೆ, ನರ್ಸರಿಗಳಿಂದ ಗಿಡಗಳನ್ನು ಖರೀದಿಸುವ ರೈತರ ಊರು, ತಾಲ್ಲೂಕು, ಜಿಲ್ಲೆಯ ಮಾಹಿತಿ, ಒಂದು ನಿರ್ದಿಷ್ಟ ಅವಧಿಗೆ ಯಾವ ತಳಿ/ಗಿಡ ಎಷ್ಟು ಮಾರಾಟವಾಯಿತು ಎಂಬ ಮಾಹಿತಿಯನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ನಿರ್ದಿಷ್ಟ ಸಂಖ್ಯೆಯ ಗಿಡ/ತಳಿ ಖರೀದಿಸಿದ ಕೃಷಿಕರನ್ನು ಗುರುತಿಸಬಹುದು. ಯಾವ ತಿಂಗಳಲ್ಲಿ ಎಷ್ಟು ಗಿಡಗಳು ಮಾರಾಟವಾಗಿವೆ ಎಂಬ ವಿವರವನ್ನು ಪಡೆಯಬಹುದೆ. ಇದು ದತ್ತಾಂಶ ವಿಶ್ಲೇಷಣೆಗೂ ಅನುಕೂಲವಾಗಲಿದೆ ಎಂದು ವಿಜ್ಞಾನಿ ಮೋಹನ್ ತಲಕಾಲುಕೊಪ್ಪ ವಿವರಿಸಿದರು.

ಗೇರು ಬೆಳೆಗಾಗಿ ಅಭಿವೃದ್ಧಿಪಡಿಸಿರುವ ತಂತ್ರಾಂಶವಾದರೂ, ಅಲ್ಪಸ್ವಲ್ಪ ಬದಲಾವಣೆ ಮಾಡಿಕೊಂಡರೆ, ಖಾಸಗಿ ನರ್ಸರಿಯವರು, ಕೃಷಿ ವಿಶ್ವವಿದ್ಯಾಲಯಗಳು, ಕೃಷಿ ಸಂಶೋಧನಾ ಕೇಂದ್ರಗಳು ಇದನ್ನು ಅಳವಡಿಸಿಕೊಳ್ಳಬಹುದು. ಸದ್ಯ ದೇಶದಾದ್ಯಂತವಿರುವ 23 ತೋಟಗಾರಿಕಾ ಸಂಶೋಧನಾ ಸಂಸ್ಥೆಗಳು ಈ ತಂತ್ರಾಂಶ ಬಳಸಿಕೊಳ್ಳಲು ಆಸಕ್ತಿ ತೋರಿವೆ ಎಂದು ಮೋಹನ್ ತಿಳಿಸಿದರು.

ತಂತ್ರಾಂಶ ಕುರಿತ ಹೆಚ್ಚಿನ ಮಾಹಿತಿಗೆ ಸಂಪರ್ಕ: 99022 73468

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.