ಬೆಂಗಳೂರು: ಇಲ್ಲಿನ ಇಂದಿರಾನಗರ ಸಿಎಂಎಚ್ ರಸ್ತೆಯಲ್ಲಿರುವ ಯುಟಿವಿ ಕಚೇರಿಗೆ ನುಗ್ಗಿ ದಾಂದಲೆ ಮಾಡಿ, ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಪ್ರಕರಣದಲ್ಲಿ ಕುಖ್ಯಾತ ರೌಡಿ ರವಿ ಪೂಜಾರಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.

2009ರ ಜುಲೈ 11ರಂದು ನಡೆದಿದ್ದ ಈ ಪ್ರಕರಣದ ತನಿಖೆ ನಡೆಸಿದ ಸಿಸಿಬಿ ಪೊಲೀಸರು ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಪೂಜಾರಿಯ ಏಳು ಸಹಚರರು ಯುಟಿವಿ ಕಚೇರಿಗೆ ನುಗ್ಗಿ ದಾಂದಲೆ ನಡೆಸಿ, ಚಾನಲ್ ಮಾಲೀಕ ರೋನಿ ಸ್ಕ್ರೀವಾಲ ಅವರಿಗೆ ಬೆದರಿಕೆ ಸಂದೇಶ ಕಳುಹಿಸಿದ್ದ ಪ್ರಕರಣ ಇದಾಗಿದೆ.

ಘಟನೆ ನಡೆದಿದ್ದಾಗ ಭದ್ರತಾ ಸಿಬ್ಬಂದಿ ಸತೀಶ್ ಹಾಗೂ ಉದ್ಯೋಗ ಆಕಾಂಕ್ಷಿ ಆಗಿದ್ದ ಜಮದ್ ಅಹಮದ್ ಮಾತ್ರ ಇದ್ದರು. ಆರೋಪಿಗಳು ಜಮದ್ ಅವರ ಮೇಲೆ ಹಲ್ಲೆ ನಡೆಸಿ ಗಾಜುಗಳನ್ನು ಪುಡಿಮಾಡಿದ್ದರು. ಕಂಪ್ಯೂಟರ್ ಹಾಗೂ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದರು ಎಂದು ಆರೋಪಿಸಲಾಗಿತ್ತು.

ಹೊರ ದೇಶದಲ್ಲಿ ಕುಳಿತು ಜನರನ್ನು ಬೆದರಿಸಿ ಹಫ್ತಾ ವಸೂಲು ಮಾಡುತ್ತಿದ್ದ ರವಿ ಪೂಜಾರಿ, ರೋನಿಯು ದಾವೂದ್ ಇಬ್ರಾಹಿಂಗೆ ಮಣೆ ಹಾಕುವ ಮೂಲಕ ತನ್ನನ್ನು ಕಡೆಗಣಿಸುತ್ತಿದ್ದಾರೆ ಎಂದು ಭಾವಿಸಿದ್ದ. ಅಲ್ಲದೆ, ತನ್ನ ಬೇಡಿಕೆ ಈಡೇರಿಸದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಬೆದರಿಕೆ ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.