ಡರ್ಬನ್: ಸಂಜು ಸ್ಯಾಮ್ಸನ್ ಅವರ ಭರ್ಜರಿ ಶತಕದ ಬಳಿಕ ಸ್ಪಿನ್ನರ್ಗಳಾದ ವರುಣ್ ಚಕ್ರವರ್ತಿ ಮತ್ತು ರವಿ ಬಿಷ್ಣೋಯಿ ಕೈಚಳಕದ ನೆರವಿನಿಂದ ಭಾರತ ತಂಡವು ಶುಕ್ರವಾರ ದಕ್ಷಿಣ ಆಫ್ರಿಕಾ ಎದುರಿನ ಟಿ20 ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ 61 ರನ್ಗಳಿಂದ ಜಯ ಸಾಧಿಸಿತು.

ಕಿಂಗ್ಸ್ಮೀಡ್ ಕ್ರೀಡಾಂಗಣದಲ್ಲಿ ಕೇರಳದ ಸಂಜು ಅಬ್ಬರದ ಬ್ಯಾಟಿಂಗ್ (107; 50ಎಸೆತ) ಬಲದಿಂದ ಭಾರತ ತಂಡವು 20 ಓವರ್ಗಳಲ್ಲಿ 8 ವಿಕೆಟ್ಗಳಿಗೆ 202 ರನ್ಗಳ ದೊಡ್ಡ ಮೊತ್ತ ಗಳಿಸಿತು.

ಈ ಗುರಿಯನ್ನು ಬೆನ್ನತ್ತಿದ ಆತಿಥೇಯ ತಂಡಕ್ಕೆ ವೇಗದ ಬೌಲರ್ ಗಳಾದ ಅರ್ಷದೀಪ್ ಸಿಂಗ್ ಮತ್ತು ಆವೇಶ್ ಖಾನ್ ಆರಂಭದಲ್ಲೇ ಪೆಟ್ಟು ನೀಡಿದರು. ಅವರು ಕ್ರಮವಾಗಿ ನಾಯಕ ಏಡನ್ ಮರ್ಕರಂ (6) ಮತ್ತು ಟ್ರಿಸ್ಟನ್ ಸ್ಟಬ್ಸ್ (11) ಅವರ ವಿಕೆಟ್ ಪಡೆದರು. ಹೀಗಾಗಿ 30 ರನ್ ಗಳಿಸುವಷ್ಟಲ್ಲಿ ದಕ್ಷಿಣ ಆಫ್ರಿಕಾ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಈ ಮಧ್ಯೆ ರಯಾನ್ ರಿಕೆಲ್ಟನ್ (21;11ಎ), ಹೆನ್ರಿಚ್ ಕ್ಲಾಸೆನ್ (25;22ಎ) ಮತ್ತು ಡೇವಿಡ್ ಮಿಲ್ಲರ್ (18;22ಎ) ತಂಡಕ್ಕೆ ಕೊಂಚ ಚೇತರಿಕೆ ನೀಡಿದರು. ಈ ಮೂವರೂ ವರುಣ್ ಅವರ ಸ್ಪಿನ್ ಬಲೆಗೆ ಬಿದ್ದರು. ಕೊನೆಯ ಹಂತದಲ್ಲಿ ಬಿಷ್ಣೋಯಿ ಕೈಚಳಕ ತೋರಿ, ಪ್ಯಾಟ್ರಿಕ್ ಕ್ರುಗರ್ (1), ಮಾರ್ಕೊ ಯಾನ್ಸೆನ್ (12) ಮತ್ತು ಆ್ಯಂಡಿಲೆ ಸಿಮೆಲೇನ್ (6) ಅವರ ವಿಕೆಟ್ ಪಡೆದರು. ಬೌಲಿಂಗ್ನಲ್ಲಿ ಮಿಂಚಿದ್ದ ಗೆರಾಲ್ಡ್ ಕೋಜಿ (23;11ಎ) ಬ್ಯಾಟಿಂಗ್ನಲ್ಲೂ ಗಮನ ಸೆಳೆದರು. ತಂಡವು 17.5 ಓವರ್ಗಳಲ್ಲಿ 141 ರನ್ ಗಳಿಸಿ ಹೋರಾಟವನ್ನು ಮುಗಿಸಿತು.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಭಾರತ ತಂಡದ ಆರಂಭಿಕ ಆಟಗಾರ ಸಂಜು ಅಬ್ಬರಿಸಿದರು. ಅವರು ಒಟ್ಟು 10 ಸಿಕ್ಸರ್ ಸಿಡಿಸಿ ದಾಖಲೆ ಬರೆದರು. 7 ಬೌಂಡರಿಗಳನ್ನೂ ಹೊಡೆದರು. 214ರ ಸ್ಟ್ರೈಕ್ರೇಟ್ನಲ್ಲಿ ರನ್ ಸೂರೆ ಮಾಡಿದರು. ತಾವೆದುರಿಸಿದ 47ನೇ ಎಸೆತದಲ್ಲಿ ಶತಕದ ಗಡಿ ಮುಟ್ಟಿದರು. ಟಿ20 ಮಾದರಿಯಲ್ಲಿ 29 ವರ್ಷದ ಸಂಜು ಗಳಿಸಿದ ಎರಡನೇ ಶತಕ ಇದಾಗಿದೆ.

ಸಂಜು ಮತ್ತು ಅಭಿಷೇಕ್ ಶರ್ಮಾ ಅವರು ಭಾರತಕ್ಕೆ ಅಬ್ಬರದ ಆರಂಭ ನೀಡಿದರು. ಕೇವಲ 3 ಓವರ್ಗಳಲ್ಲಿ 24 ರನ್ ಬಾಚಿದರು. ಆದರೆ ನಾಲ್ಕನೇ ಓವರ್ನಲ್ಲಿ ಅಭಿಷೇಕ್ ವಿಕೆಟ್ ಗಳಿಸುವಲ್ಲಿ ಗೆರಾಲ್ಡ್ ಕೋಜಿ ಯಶಸ್ವಿಯಾದರು.

ಆದರೆ ಇನ್ನೊಂದು ಬದಿಯಲ್ಲಿದ್ದ ಸಂಜು ಮಾತ್ರ ಯಾವುದೇ ಮುಲಾಜು ಇಲ್ಲದೇ ಬ್ಯಾಟ್ ಬೀಸಿದರು. ಅವರ ಜೊತೆಗೂಡಿದ ನಾಯಕ ಸೂರ್ಯಕುಮಾರ್ ಯಾದವ್ (21; 17ಎ, 4X2, 6X1) ಎರಡನೇ ವಿಕೆಟ್ ಜೊತೆಯಾಟದಲ್ಲಿ 66 ರನ್ ಸೇರಿಸಲು ನೆರವಾದರು. 9ನೇ ಓವರ್ನಲ್ಲಿ ಸೂರ್ಯಕುಮಾರ್ ವಿಕೆಟ್ ಗಳಿಸುವಲ್ಲಿ ಪ್ಯಾಟ್ರಿಕ್ ಕ್ರುಗಾರ್ ಯಶಸ್ವಿಯಾದರು. ದೊಡ್ಡ ಹೊಡೆತಕ್ಕೆ ಯತ್ನಿಸಿದ ಸೂರ್ಯ ಸಿಮಿಲೇನ್ ಅವರಿಗೆ ಕ್ಯಾಚ್ ಆದರು.

ಆದರೆ ಸಂಜು ಆಟಕ್ಕೆ ಅಂಕುಶ ಹಾಕಲು ಯಾರಿಗೂ ಸಾಧ್ಯವಾಗಲಿಲ್ಲ. ಎಲ್ಲ ಬೌಲರ್ಗಳನ್ನು ಮನಬಂದಂತೆ ದಂಡಿಸಿದರು. ಪೀಟರ್ ಹಾಕಿದ ಎಂಟನೇ ಓವರ್ನಲ್ಲಿ ಸತತ ಎರಡು ಸಿಕ್ಸರ್ ಎತ್ತಿದ ಸಂಜು 50ರ ಗಡಿ ದಾಟಿದರು. 27 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

ತಿಲಕ್ ವರ್ಮಾ ಜೊತೆಗೂ ಸಂಜು 3ನೇ ವಿಕೆಟ್ಗೆ 77 ರನ್ ಸೇರಿಸಿದರು. 16ನೇ ಓವರ್ನವರೆಗೂ ಅವರ ಅಬ್ಬರ ಮುಂದುವರಿಯಿತು. ಎನ್ಕಾಬೇಮ್ಜಿ ಪೀಟರ್ ಅವರ ಎಸೆತದಲ್ಲಿ ಸಂಜು ಅವರು ಟ್ರಿಸ್ಟನ್ ಸ್ಟಬ್ಸ್ಗೆ ಕ್ಯಾಚಿತ್ತರು.

ಇವರಿಗಿಂತ ಮುಂಚಿನ ಓವರ್ನಲ್ಲಿ ತಿಲಕ್ ವರ್ಮಾ (33; 18ಎ) ಅವರು ಕೇಶವ್ ಮಹಾರಾಜ ಅವರ ಎಸೆತವನ್ನು ಆಡಿ ಮಾರ್ಕೊ ಯಾನ್ಸೆನ್ ಅವರಿಗೆ ಕ್ಯಾಚಿತ್ತರು.

ಈ ಗೆಲುವಿನೊಂದಿಗೆ ಭಾರತ ತಂಡವು ನಾಲ್ಕು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಪಡೆದಿದೆ. ಭಾನುವಾರ ಎರಡನೇ ಪಂದ್ಯ ನಡೆಯಲಿದೆ.

ಸಂಕ್ಷಿಪ್ತ ಸ್ಕೋರು: ಭಾರತ: 20 ಓವರ್ಗಳಲ್ಲಿ 8 ವಿಕೆಟ್ಗಳಿಗೆ 202 (ಸಂಜು ಸ್ಯಾಮ್ಸನ್ 107, ಅಭಿಷೇಕ್ ಶರ್ಮಾ 7, ಸೂರ್ಯಕುಮಾರ್ ಯಾದವ್ 21, ತಿಲಕ್ ವರ್ಮಾ 33, ಗೆರಾಲ್ಡ್ ಕೋಜಿ 37ಕ್ಕೆ3). ದಕ್ಷಿಣ ಆಫ್ರಿಕಾ: 17.5 ಓವರ್ಗಳಲ್ಲಿ 141 (ರಯಾನ್ ರಿಕೆಲ್ಟನ್ 21, ಹೆನ್ರಿಚ್ ಕ್ಲಾಸೆನ್ 25, ಗೆರಾಲ್ಡ್ ಕೋಜಿ 23; ಅರ್ಷದೀಪ್ 25ಕ್ಕೆ 1, ಆವೇಶ್ ಖಾನ್ 28ಕ್ಕೆ 2, ವರುಣ್ ಚಕ್ರವರ್ತಿ 25ಕ್ಕೆ 3, ರವಿ ಬಿಷ್ಣೋಯಿ 28ಕ್ಕೆ 3). ಪಂದ್ಯದ ಆಟಗಾರ: ಸಂಜು ಸ್ಯಾಮ್ಸನ್. ಫಲಿತಾಂಶ: ಭಾರತಕ್ಕೆ 61 ರನ್ಗಳ ಜಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.